ಡಾ. ರಾಜ್‌ 'ಶ್ರೀರಾಮಾಂಜನೇಯ ಯುದ್ಧ'ದ ರಹಸ್ಯ.. ಪರಮಭಕ್ತ ಆಂಜನೇಯನ ಜೊತೆ ಶ್ರೀರಾಮ ಯುದ್ಧ ಮಾಡಿದ್ದೇಕೆ ಗೊತ್ತಾ?!

Published : Nov 22, 2026, 05:34 PM IST
Dr Rajkumar

ಸಾರಾಂಶ

ಶ್ರೀರಾಮಾಂಜನೇಯ ಯುದ್ಧ ಕನ್ನಡ ಚಲನಚಿತ್ರವು 1963 ರಲ್ಲಿ (ಡಿಸೆಂಬರ್ 17, 1963) ಬಿಡುಗಡೆಯಾಯಿತು. ಎಂ. ಎಸ್. ನಾಯಕ್ ನಿರ್ದೇಶನದ ಈ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್ ಮತ್ತು ಉದಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀರಾಮನಾಗಿ ರಾಜ್‌ಕುಮಾರ್ ಹಾಗೂ ಆಂಜನೇಯನಾಗಿ ಉದಯ್‌ ಕುಮಾರ್ ನಟಿಸಿದ್ದಾರೆ.

60 ವರ್ಷಗಳ ಹಿಂದಿನ ‘ಶ್ರೀರಾಮಾಂಜನೇಯ ಯುದ್ದ’ ಸಿನಿಮಾದ ಹಲವು ರಹಸ್ಯ ಸಂಗತಿಗಳು ಇಲ್ಲಿವೆ ನೋಡಿ!

ಕನ್ನಡದ ಕಣ್ಮಣಿ, ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ (Dr Rajkumar) ಅಂದ್ರೆ ಕನ್ನಡದ ಆಸ್ತಿ. ಅವರ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ. ಅವರು ನಟಿಸಿರುವ 200ಕ್ಕೂ ಹೆಚ್ಚು ಸಿನಿಮಾಗಳ ಬಗ್ಗೆ, ಆ ಸಿನಿಮಾಗಳ ಕಥೆಗಳು, ಚಿತ್ರಕರಣದಲ್ಲಿ ಘಟಿಸಿದ ಕೆಲವು ಅಜರಾಮರ ನೆನಪುಗಳನ್ನು ಹೇಳುತ್ತಾ ಹೋದರೆ ಹತ್ತುಹಲವು ವರ್ಷಗಳೇ ಸಾಕಾಗದು. ಅಂಥ ಅಣ್ಣಾವ್ರ ನಟನೆಯ 'ಶ್ರೀರಾಮಾಂಜನೇಯ ಯುದ್ಧ' (Sri Ramanjaneya Yuddha) ಸಿನಿಮಾದ ಅಪರೂಪದ ನೆನಪುಗಳು ಇಲ್ಲಿವೆ ನೋಡಿ..

ಶ್ರೀರಾಮ ಹಾಗೂ ಅವರ ಪರಮಭಕ್ತ ಆಂಜನೇಯ ಇವರಿಬ್ಬರ ಮಧ್ಯೆ ನಡೆಯುವ ಯುದ್ಧ

ಶ್ರೀರಾಮಾಂಜನೇಯ ಎನ್ನುವುದು ಹೆಸರೇ ಹೇಳುವಂತೆ, ಶ್ರೀರಾಮ ಹಾಗೂ ಅವರ ಪರಮಭಕ್ತ ಆಂಜನೇಯ ಇವರಿಬ್ಬರ ಮಧ್ಯೆ ನಡೆಯುವ ಯುದ್ಧ. ಇದೊಂದು ಐತಿಹಾಸಿಕ ಹಾಗೂ ಪೌರಾಣಿಕ ಅಚ್ಚರಿಯ ಸಂಗತಿಯಾಗಿದ್ದು, 'ಶ್ರೀರಾಮ ಸ್ವತಃ ಅವರ ಪರಮ ಭಕ್ತ ಆಂಜನೇಯನ ಜೊತೆ ಯುದ್ಧ ಮಾಡಿದ್ರಾ? ಯಾಕೆ ಹಾಗೆ ಮಾಡಬೇಕಾಯ್ತು?' ಎಂದು ಈ ಮಹಾಕಾವ್ಯದ ಬಗ್ಗೆ ಗೊತ್ತಿಲ್ಲದ, ಓದಿರದ ಹಲವರು ಕೇಳುತ್ತಾರೆ. ಅದನ್ನೆಲ್ಲಾ ಇಲ್ಲಿ ಹೇಳಲು ಸಾಧ್ಯವಿಲ್ಲ, ಅವೆಲ್ಲವಕ್ಕೂ ವಾಲ್ಮಿಕಿ ಬರೆದ 'ರಾಮಾಯಣ'ದಲ್ಲಿ ಉತ್ತರವಿದೆ.

ಡಾ. ರಾಜ್‌ಕುಮಾರ್ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ (ಪುಟ್ಟಸ್ವಾಮಯ್ಯ), ಕನ್ನಡದ ಒಬ್ಬ ಪ್ರಸಿದ್ಧ ರಂಗಭೂಮಿ ಕಲಾವಿದರಾಗಿದ್ದರು. ರಂಗಭೂಮಿ ಸಕ್ರಿಯ ನಟರಾಗಿದ್ದ ಅವರು ಕಂಸ, ರಾವಣ ಮತ್ತು ಹಿರಣ್ಯಕಶಿಪು ಮುಂತಾದ ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಲು ಭಾರೀ ಪ್ರಸಿದ್ಧರಾಗಿದ್ದರು. ಆದ್ದರಿಂದ, ಡಾ. ರಾಜ್‌ಕುಮಾರ್ ಅವರ ರಂಗಭೂಮಿ ಮತ್ತು ಚಿತ್ರರಂಗದ ಯಶಸ್ಸಿಗೆ ತಂದೆಯ ಅಭಿನಯ ಹಾಗೂ ಮಾರ್ಗದರ್ಶನ ಪ್ರಮುಖ ಪ್ರೇರಣೆಯಾಗಿತ್ತು

ಶ್ರೀರಾಮಾಂಜನೇಯ ಯುದ್ಧ ಕನ್ನಡ ಚಲನಚಿತ್ರ- 1963 ರಲ್ಲಿ (ಡಿಸೆಂಬರ್ 17, 1963) ಬಿಡುಗಡೆ

ಶ್ರೀರಾಮಾಂಜನೇಯ ಯುದ್ಧ ಕನ್ನಡ ಚಲನಚಿತ್ರವು 1963 ರಲ್ಲಿ (ಡಿಸೆಂಬರ್ 17, 1963) ಬಿಡುಗಡೆಯಾಯಿತು. ಎಂ. ಎಸ್. ನಾಯಕ್ ನಿರ್ದೇಶನದ ಈ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್ ಮತ್ತು ಉದಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀರಾಮನಾಗಿ ರಾಜ್‌ಕುಮಾರ್ ಹಾಗೂ ಆಂಜನೇಯನಾಗಿ ಉದಯ್‌ ಕುಮಾರ್ ನಟಿಸಿದ್ದಾರೆ. ಬಾಲಕಲಾವಿದರಾಗಿಯೂ ನಟಿಸಿದ ಡಾ ರಾಜ್‌ಕುಮಾರ್ ಸಿನಿಮಾಗಳನ್ನೂ ಲೆಕ್ಕಕ್ಕೆ ಸೇರಿಸಿಕೊಂಡರೆ, ಈ 'ಶ್ರೀರಾಮಾಂಜನೇಯ ಯುದ್ಧ' ಚಿತ್ರವು ಡಾ ರಾಜ್‌ಕುಮಾರ್ ನಟನೆಯ '50'ನೇ ಚಿತ್ರವೆಂಬುದು ವಿಶೇಷ.

60 ವರ್ಷಗಳ ಹಿಂದಿನ ಈ ಅಪರೂಪದ ಕನ್ನಡ ಪೌರಾಣಿಕ ಚಿತ್ರದ ಯಾರಿಗೂ ಗೊತ್ತಿರದ ಸಂಗತಿಗಳ ಪಟ್ಟಿ ಇಲ್ಲಿದೆ ನೋಡಿ-

ಶ್ರೀರಾಮನಾಗಿ ಡಾ. ರಾಜ್‌ಕುಮಾರ್

ಆಂಜನೇಯನಾಗಿ ಉದಯ್‌ ಕುಮಾರ್

ಸಂಗೀತ ನಿರ್ದೇಶಕ ಸತ್ಯಂ ಅವರು ಮೊಟ್ಟಮೊದಲ ಬಾರಿಗೆ ಸ್ವತಂತ್ರವಾಗಿ ಸಂಗೀತ ನೀಡಿದ ಸಿನಿಮಾ

ಕನ್ನಡದಲ್ಲಿ ನಾಯಕರು ಹಾಗೂ ಪೋಷಕ ನಟರಾಗಿರಾಗಿದ್ದ ರಾಜೇಶ್ (ಹಳೆಯ ಹೆಸರು-ವಿದ್ಯಾ ಸಾಗರ್) ಅವರು ನಟಿಸಿರುವ ಮೊದಲ ಸಿನಿಮಾ. ಅವರು ಈ ಚಿತ್ರದಲ್ಲಿ ಭರತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರ 1975ರಲ್ಲಿ ಎನ್‌ಟಿಆರ್ ಅಭಿನಯದಲ್ಲಿ ತೆಲುಗಿನಲ್ಲಿ 'ಶ್ರೀ ರಾಮಾಂಜನೇಯ ಯುದ್ಧಂ' ಹೆಸರಿನಲ್ಲಿ ರೀಮೇಕ್ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಮೆರಿಕದ ಅತ್ಯುನ್ನತ ಗೌರವ ಪಡೆದ ಡಾ.ರಾಜ್​: ಭಾರತದಲ್ಲಿ ಈ ಪ್ರಶಸ್ತಿ ಪಡೆದ ಏಕೈಕ ನಟ ಎಂಬ ಕೀರ್ತಿಗೆ ಭಾಜನ
ಅಣ್ಣಾವ್ರ ಸದಾಶಿವನಗರದ 'ದೊಡ್ಮನೆ' ಹಿಂದಿದೆ ಇಂಟ್ರೆಸ್ಟಿಂಗ್ ಕಥೆ; ಆದ್ರೆ ರಾಜ್‌ಕುಮಾರ್ ನೆಲೆಸಿದ್ದ ಮನೆ ಕೆಡವಿ 2 ಹೊಸ ಮನೆ ಕಟ್ಟಿದ್ದೇಕೆ?