ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ?; ತಮಿಳು ಹಾಸ್ಯ ನಟನ ಪುತ್ರನ ಜೊತೆ ಸಂಬಂಧ!

By Vaishnavi Chandrashekar  |  First Published Jun 26, 2023, 9:14 AM IST

ಸರ್ಜಾ ಕುಟುಂಬದಲ್ಲಿ ಮಂಗಲ ವಾದ್ಯ ಸದ್ದು. ಸಿನಿಮಾ ರಿಲೀಸ್‌ಗೆ ಕಾಯುತ್ತಿರುವ ನಟ ಮಗಳ ಮದುವೆ ವಿಚಾರ ಅನೌನ್ಸ್ ಮಾಡ್ತಾರಾ? 


60 ಆಗಿದ್ದರೂ ಮೋಸ್ಟ್‌ ಹ್ಯಾಂಡ್ಸಮ್ ಆಂಡ್ ಚಾರ್ಮಿಂಗ್ ಆಗಿರುವ ಬಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ಸದ್ಯ ವಿಜಯ್ ದಳಪತಿ ಜೊತೆ ಲಿಯೋ (Leo) ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ಶೀಘ್ರದಲ್ಲಿ ಸಿಹಿ ಸುದ್ದಿ ಹಂಚಿಕೊಳ್ಳಲಿದ್ದಾರೆ. ಅದುವೇ ಸರ್ಜಾ ಕುಟುಂಬದಲ್ಲಿ ಮಂಗಳ ವಾದ್ಯ ಸದ್ದು. 

ಹೌದು! ಅರ್ಜುನ್ ಸರ್ಜಾಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಹಿರಿಯ ಪುತ್ರಿ ಐಶ್ವರ್ಯ (Aishwarya Arjun Sarja) ತೊಡಗಿಸಿಕೊಂಡಿದ್ದಾರೆ, ಸ್ವಂತ ಬ್ರ್ಯಾಂಡ್ ಓಪನ್ ಮಾಡಿ ಉದ್ಯಮಿಯಾಗುತ್ತಿದ್ದಾರೆ ಕಿರಿಯ ಪುತ್ರಿ ಅಂಜನಾ. ಕನ್ನಡದಲ್ಲಿ ಅರ್ಜುನ್ ಎಷ್ಟು ಫೇಮಸೋ ಅಷ್ಟೇ ತಮಿಳು ಭಾಷೆಯಲ್ಲಿ ಫೇಮಸ್ ಆಗಿದ್ದಾರೆ ಹೀಗಾಗಿ ತಮಿಳು ಚಿತ್ರರಂಗದ ನಂಟು ಹೆಚ್ಚಿದೆ. ಈಗ ಐಶ್ವರ್ಯ ಮದುವೆಯಾಗುತ್ತಿರುವುದು ಖ್ಯಾತ ತಮಿಳು ಹಾಸ್ಯ ನಟನ ಪುತ್ರನನ್ನು ಎನ್ನಲಾಗಿದೆ.

Tap to resize

Latest Videos

ತಂದೆ ನಟಿಸಿದ ಹಳೇ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ಅರ್ಜುನ್ ಸರ್ಜಾ ಪುತ್ರಿ

ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಹಾಸ್ಯ ನಟ ತಂಬಿ ರಾಮಯ್ಯ (Thambi Ramaiah)  ಅವರ ಪುತ್ರಿ ಉಮಾಪತಿ ರಾಮಯ್ಯ ಮತ್ತು ಐಶ್ವರ್ಯ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಪೋಷಕರನ್ನು ಒಪ್ಪಿಸಿ ಅದ್ಧೂರಿಯಾಗಿ ಮದುವೆ ಆಗಲಿದ್ದಾರಂತೆ. ಈಗಾಗಲೆ ಮದುವೆ ಆಮಂತ್ರಣ ಪತ್ರಿಕೆ ಸಿದ್ಧತೆ ನಡೆಯುತ್ತಿದೆ. ಸಿನಿಮಾ ವಿಚಾರದಲ್ಲಿ ಎಷ್ಟು ಬೇಗ ಸಿಹಿ ಸುದ್ದಿ ಹಂಚಿಕೊಳ್ಳುತ್ತಾರೆ ಅಷ್ಟೇ ಬೇಗ ಮಗಳ ಮದುವೆ ವಿಚಾರ ರಿವೀಲ್ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆ. 

ಐಶ್ವರ್ಯ ಮೊದಲು ಬಣ್ಣ ಹಚ್ಚಿದ್ದು 2013ರಲ್ಲಿ ಬಿಡುಗಡೆ ಕಂಡ ತಮಿಳು 'ಪಟ್ಟತ್ತು ಯಾಣೈ' ಚಿತ್ರಕ್ಕೆ. ಅನಂತರ ದೊಡ್ಡ ಬ್ರೇಕ್ ತೆಗೆದುಕೊಂಡು 2018ರಲ್ಲಿ ಪ್ರೇಮಾ ಬರಹ ಸಿನಿಮಾದಲ್ಲಿ ನಟಿಸಿದ್ದರು ಇದು ಪಕ್ಕಾ ಕನ್ನಡದ ಕಮರ್ಷಿಯಲ್ ಸಿನಮಾ ಇದಾಗುತ್ತಿದ್ದಂತೆ ಮತ್ತೊಂದು ತಮಿಳು ಸೊಲ್ಲಿವಿದವ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಯಾವ ಸಿನಿಮಾನೂ ಸಹಿ ಮಾಡದೆ ಕೂಲ್ ಆಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.ಉಮಾಪತಿ ರಾಮಯ್ಯ (Umapathy Ramaiah)  ಕೂಡ ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಮೊದಲ ಸಿನಿಮಾ ಅದಾಗಪ್ಪತ್ತು ಮಗಜನಂಗಳೆ. ಇದಾದ ಮೇಲೆ ಮೂರ್ನಾಲ್ಕು ಚಿತ್ರ ಮಾಡಿದ್ದಾರೆ. 2021ರಲ್ಲಿ ಜೀ ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರ್ವೈವರ್‌ ತಮಿಳು ಶೋನಲ್ಲಿ ಟಾಪ್ ನಾಲ್ಕನೇ ಸ್ಥಾನ ಸ್ವೀಕರಿಸಿದ್ದರು. 

ಚಿತ್ರಗಳು: ಚಿರು ಸರ್ಜಾ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ

ಸಿನಿಮಾಗಷ್ಟೇ ಉಮಾಪತಿ ಟ್ಯಾಲೆಂಟ್ ಸೀಮಿತವಾಗಿಲ್ಲ ಡ್ಯಾನ್ಸ್ ಟ್ರೈನಿಂಗ್ ಪಡೆದು ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಾರೆ ಜೊತೆಗೆ MMA ಫೈಟರ್ ಟ್ರೈನಿಂಗ್ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ತೆಲುಗು ಚಿತ್ರರಂಗಕ್ಕೆ ಐಶ್ವರ್ಯ ಎಂಟ್ರಿ ಕೊಟ್ಟಿದ್ದಾರೆ. ಈಗ ಮತ್ತೆ ಅರ್ಜುನ್ ಸರ್ಜಾ ಮಗಳ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ.ಅರ್ಜುನ್ ತಮ್ಮದೇ ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ನಡಿಯಲ್ಲಿ  ನಿರ್ಮಿಸಲಿರುವ 15ನೇ ಸಿನಿಮಾದ ಮೂಲಕ ಮಗಳು ಐಶ್ವರ್ಯ ಅರ್ಜುನ್ ಅವರನ್ನು ತೆಲುಗಿನಲ್ಲಿ ನಾಯಕ ನಟಿಯಾಗಿ ಪರಿಚಯಿಸ್ತಿದ್ದಾರೆ. ಐಶ್ವರ್ಯಾ ಅರ್ಜುನ್ ನಾಯಕಿಯಾಗಿ ನಟಿಸ್ತಿರುವ ಈ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಯುವ ಮತ್ತು ಭರವಸೆಯ ನಟ ವಿಶ್ವಕ್ ಸೇನ್ ನಾಯಕನಾಗಿ ಅಭಿನಯಿಸ್ತಿದ್ದಾರೆ.

click me!