ಗುಲಾಬಿ ಹೂವನ್ನು ಮುತ್ತಿಕ್ಕುತಾ ದೇವರಲ್ಲಿ ನಟಿ ರಮ್ಯಾ ಇದನ್ನ ಕೇಳಿಕೊಂಡ್ರು!

By Suvarna News  |  First Published Jun 25, 2023, 5:19 PM IST

ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ನಟಿ ರಮ್ಯಾ ಅವರು ಗುಲಾಬಿ ಹೂವಿನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಕವನ ಬರೆದಿದ್ದಾರೆ. ಅವರು ಹೇಳಿದ್ದೇನು?
 


ಮನಮೋಹಕ ತಾರೆ ಎಂದೇ ಖ್ಯಾತಿ ಪಡೆದಿರುವ ನಟಿ ರಮ್ಯಾ (Ramya) ಅಲಿಯಾಸ್‌ ದಿವ್ಯಾ ಸಂಪದ. ಮಾಜಿ ಸಂಸದೆಯೂ ಆಗಿರುವ ನಟಿ ರಮ್ಯಾ, ರಾಜಕೀಯದಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಆದರೆ ದಿಢೀರ್‌ ಕಣ್ಮರೆಯಾಗಿ ಅದೇ ವೇಗದಲ್ಲಿ ಪ್ರತ್ಯಕ್ಷರಾಗಿ ಸುದ್ದಿಯಾಗುತ್ತಾರೆ. ಯಾವುದಾದರೂ ಒಂದು ವಿಷಯದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಮತ್ತೆ ಮರೆಯಾಗುತ್ತಾರೆ. ಸದ್ಯ ನಟಿ, ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್‌ ಮಾಡಿದ್ದು, ಅದು ವೈರಲ್‌ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರೋ ನಟಿ ತಮ್ಮ ದಿನ ನಿತ್ಯದ ಜೀವನದ ಕುರಿತು  ಆಗಾಗ ಅಪ್​ಡೇಟ್​ ನೀಡುತ್ತಿರುತ್ತಾರೆ. ಈಗ ಗುಲಾಬಿ ಹೂವಿನೊಂದಿಗೆ ಕಾಣಿಸಿಕೊಂಡಿದ್ದಾರೆ.  ಗುಲಾಬಿ ಹೂವುಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದಕ್ಕೊಂದು ಕವನ ಬರೆದಿದ್ದಾರೆ.

 ರಾಜಕೀಯದ (Politics) ಕುರಿತು ಆಗೊಮ್ಮೆ ಈಗೊಮ್ಮೆ ಹೇಳಿಕೆ ನೀಡುವ ರಮ್ಯಾ ಅವರ  ಗಮನ ಸದ್ಯ ಚಿತ್ರರಂಗದ ಮೇಲಿದೆ. ನಟಿಯಾಗಿ,ನಿರ್ಮಾಪಕಿಯಾಗಿ   ಅವರು  ಬಿಜಿ ಆಗಿದ್ದಾರೆ. ಈಗ ಗುಲಾಬಿ ಹೂವುಗಳ ಜೊತೆ ಅವರ ಫೋಟೋ ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಫೋಟೋಗೇ ಸಕತ್‌ ಕಮೆಂಟ್‌ಗಳು ಬರುತ್ತಿದ್ದು, ನೀವು ಬಿಡಿ, ಯಾವಾಗಲೂ ಗುಲಾಬಿ ಹೂವಿನಂತೆಯೇ ಸುಂದರಿ ಎಂದಿದ್ದಾರೆ.   ಇದರೊಂದಿಗೆ ನಟಿ, ಕ್ಯೂಟ್ ಎನಿಸಿರುವ ಕೆಲವು  ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.  

Tap to resize

Latest Videos

Viral Video: ವಸಿಷ್ಠ ಸಿಂಹ- ಪ್ರಿಯಾ ತಾರಾ ಜೋಡಿಗೆ ಅಟ್ಟಿಸಿಕೊಂಡು ಬಂದ ಆನೆ!

 ಗಾರ್ಡನ್‌ನಲ್ಲಿ ಇರುವ ಸುಂದರ ಗುಲಾಬಿಗಳೊಂದಿಗೆ (Rose) ಬಿಳಿಯ ಟೀ ಶರ್ಟ್ ಧರಿಸಿ ನಿಂತಿರುವ ರಮ್ಯಾ ಗುಲಾಬಿ ಬಣ್ಣದ ಗುಲಾಬಿ ಹೂವುಗಳಿಗೆ ಕಿಸ್‌ ಮಾಡುತ್ತಿದ್ದಾರೆ. ಆದರೆ ಫ್ಯಾನ್ಸ್‌ ಗಮನ ಸೆಳೆದಿರುವುದು ಅವರು ಬರೆದಿರುವ ಕವನದ ಕುರಿತು.  ನೋ ಮೇಕಪ್ ಲುಕ್​​ನಲ್ಲಿ ತುಂಬಾ ಆಕರ್ಷಕವಾಗಿ ಕಾಣಿಸುತ್ತಿರುವ  ರಮ್ಯಾ ಅವರ ಕವನಕ್ಕೂ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇದಾಗಲೇ ಈ ಫೋಟೋಗೆ 50 ಸಾವಿರಕ್ಕೂ ಅಧಿಕ ಲೈಕ್ಸ್‌ ಬಂದಿವೆ. ವಿಶೇಷವೆಂದರೆ  ಕರ್ನಾಟಕ ಅಷ್ಟೇ ಅಲ್ಲದೇ,  ತಾವು ತಮಿಳುನಾಡಿನ ಅಭಿಮಾನಿಗಳು ಎಂದು ಹೇಳಿಕೊಂಡೂ ಕಮೆಂಟ್ಸ್‌ ಮಾಡಿದ್ದಾರೆ.
 
ಈ ಫೋಟೋದ ಜೊತೆಯಲ್ಲಿ ಇರುವ ಕವನದಲ್ಲಿ ರಮ್ಯಾ   ದೇವರು ಮತ್ತು ಜೀವನದ ಬಗ್ಗೆ ಹೇಳಿದ್ದಾರೆ.  ಇಡೀ ನಮ್ಮ ಬದುಕು ದೇವರ ಕೈಯಲ್ಲಿದೆ ಎಂಬ ಸಾರಾಂಶ ಈ ಕವನದಲ್ಲಿದೆ. ದೇವರ ವಿನ್ಯಾಸದ ಆಕರ್ಷಕಗಳಲ್ಲಿ ಒಂದು ಈ ಹೂವು. ನನ್ನ  ಈ ಬದುಕು ನಿನಗೆ ಅರ್ಪಿಸುತ್ತೇನೆ, ಪ್ರತಿ ದಿನದ ಪ್ರತಿ ಕ್ಷಣ ನಿನ್ನ  ಮಾರ್ಗದರ್ಶನಕ್ಕಾಗಿ ನಾನು ಎದುರು ನೋಡುತ್ತೇನೆ ಎಂದು ಕವನದ ಮೂಲಕ ಹೇಳೀರುವ ನಟಿ, ನನ್ನ ಮುಂದೆ ಇರುವ ದಾರಿ ನಿನಗೆ ಮಾತ್ರ ತಿಳಿದಿದೆ. ನನ್ನ ಬದುಕಿನ  ಕ್ಷಣಗಳನ್ನು ತೆರೆದಿಡಲು ನಾನು ದೇವರನ್ನು  ನಂಬುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಇವರ ಸಿನಿ ಪಯಣದ ಕುರಿತು ಹೇಳುವುದಾದರೆ, ಡಾಲಿ ಧನಂಜಯ್​​ ಜೊತೆ ‘ಉತ್ತರಕಾಂಡ’ (Uttarakhand) ಸಿನಿಮಾದಲ್ಲಿ ರಮ್ಯಾ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅವರು ತುಂಬಾ  ​ ನಿರೀಕ್ಷೆ ಇಟ್‌ಟುಕೊಂಡಿದ್ದಾರೆ.  ಅಲ್ಲದೇ, ರಮ್ಯಾ ಅವರ ನಿರ್ಮಾಣದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮೂಡಿಬರುತ್ತಿದೆ.

 

click me!