
ಬೆಂಗಳೂರು(ಆ. 21) ಕಿಚ್ಚನ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಮತ್ತು ಸ್ವತಃ ಕಿಚ್ಚ ಸುದೀಪ್ ಗೆ ದಿಗ್ಗಜ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಸರ್ಪ್ರೈಸ್ ನೀಡಿದ್ದಾರೆ ಅನಿಲ್ ಕುಂಬ್ಳೆ ಸುದೀಪ್ ಹುಟ್ಟುಹಬ್ಬದ ಈ ಕಾಮನ್ ಡಿಪಿ ಯನ್ನು ಅಭಿಮಾನಿಗಳು ತಮ್ಮ ಸೋಷಿಯಲ್ ಮೀಡಿಯಾ ಡಿಪಿಯಾಗಿಸಿಕೊಂಡಿದ್ದಾರೆ.
ಅನಿಲ್ ಕುಂಬ್ಳೆ -ಸುದೀಪ್ ಉತ್ತಮ ಸ್ನೇಹ ಹೊಂದಿದ್ದು ಗೆಳೆಯನ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ರಿಲೀಸ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಇದನ್ನು ಅಭಿಮಾನಿಗಳು ಮೆಚ್ಚಿ ಕೊಂಡಾಡಿದ್ದಾರೆ.
ಆನ್ ಲೈನ್ ಕಲಿಕೆಗೆ ಕಿಚ್ಚ ಸುದೀಪ್ ಟ್ರಸ್ಟ್ ವಿನೂತನ ಉಪಾಯ
ಸೆಪ್ಟೆಂಬರ್ 2 ರಂದು ಸುದೀಪ್ ಜನ್ಮದಿನಾಚರಣೆ ಇದೆ. ಬಿಗ್ ಬಾಸ್ ಶೋ ಇತ್ತೀಚೆಗೆ ಅಷ್ಟೇ ಮುಗಿದಿದೆ. ಕೋಟಿಗೊಬ್ಬ 3 ಮತ್ತು ವಿಕ್ರಂ ರೋಣ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿವೆ. ಕೊರೋನಾ ಕಾರಣಕ್ಕೆ ಸ್ಯಾಂಡಲ್ ವುಡ್ ಸಮಸ್ಯೆ ಅನುಭವಿಸುತ್ತಿದ್ದು ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ.
ಫೋಟೋದಲ್ಲಿ ಸುತ್ತಲೂ ಜನರು ನೆರೆದಿರುವ ಕ್ರೀಡಾಂಗಣದ ಮಧ್ಯದಲ್ಲಿ ಕುಳಿತು ತಮ್ಮ ಅಭಿಮಾನಿಗಳ ಮುಂದೆ ಕಿಚ್ಚ ಕೈ ಚಾಚುತ್ತಿರುವಂತೆ ಫೋಟೋವೊಂದನ್ನು ಅದ್ಭುತವಾಗಿ ಎಡಿಟ್ ಮಾಡಲಾಗಿದೆ. ಬಾದ್ ಷಾ ಎಂದು ಬರೆಯಲಾಗಿದ್ದು, ಈ ಫೋಟೋವನ್ನು ಕುಂಬ್ಳೆ ಹಂಚಿಕೊಂಡಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.