
ಸ್ಯಾಂಡಲ್‌ವುಡ್ ಕಲಿಯಗದ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ 2014ರಲ್ಲಿ ಯಾರಿಗೂ ತಿಳಿಯದಂತೆ ಮಾಡಿದ ಒಂದು ಕೆಲಸ ಈಗ ಬೆಳಕಿದೆ ಬಂದಿದೆ. ಅಂಬಿ ಅಣ್ಣ ಅಂದ್ರೆ ಹೀಗೆ ಯಾರಿಗೂ ಕಡಿಮೆ ಇಲ್ಲ, ಏನೇ ಕಷ್ಟ ಬಂದರೂ ತಕ್ಷಣ ಸಹಾಯ ಮಾಡುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಯಾರು ಆ ಕ್ರಿಕೆಟರ್?
2014ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದ ಪಂದ್ಯದಲ್ಲಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಆಟ ಕಂಡು ಮನಸೋತ ಅಂಬರೀಶ್ 2 ಲಕ್ಷ ರೂ. ಹಣ ನೀಡಿದ್ದಾರೆ. ಈ ಘಟನೆ ಈಗ ಬೆಳಕಿಗೆ ಬಂದಿದೆ. ವಿಚಾರ ತಿಳಿದ ಸುಮಲತಾ ಅಂಬರೀಶ್ ಟ್ಟಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
'ಅಂಬರೀಶ್ ಅವರ ಮಾನವೀಯ ಕಾರ್ಯಗಳು ಬಗ್ಗೆ ಯಾರಿಗೂ ಹೆಚ್ಚಾಗಿ ತಿಳಿದಿಲ್ಲ. ಏಕೆಂದರೆ ಅವರು ಮಾಡಿದ ಕೆಲಸದ ಬಗ್ಗೆ ಅವರು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಪ್ರಚಾರಗಳಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಈ ರೀತಿ ಅನಿರೀಕ್ಷಿತ ಘಟನೆಗಳು ಬೆಳಕಿಗೆ ಬಂದರೆ ನನಗೂ ಸರ್ಪ್ರೈಸ್ ಆಗುತ್ತದೆ. ಸರ್ಪ್ರೈಸ್ ಆದರೂ ಇದರಲ್ಲಿ ಯಾವುದೇ ಅಚ್ಚರಿಯಿಲ್ಲ. ಈ ಕಾರಣಕ್ಕೆ ಜನರು ಅವರನ್ನು ಪ್ರೀತಿಯಿಂದ ದಾನವೀರ ಕರ್ಣ ಎಂದು ಕರೆಯುತ್ತಿದ್ದರು' ಎಂದು ಸುಮಲತಾ ಟ್ಟೀಟ್ ಮಾಡಿದ್ದಾರೆ.
ಅಂಬಿ ಮಾಡಿರುವ ಸಹಾಯವನ್ನು ಧೋನಿ ಮರೆತಿಲ್ಲ. ಖಾಸಗಿ ಸಂದರ್ಶನದಲ್ಲಿ ಮಿಸ್ಟರ್ ಕ್ಯಾಪ್ಟನ್ ಕೂಲ್ ಈ ಘಟನೆ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.