Dr Vishnuvardhan 75th Birthday: ವಿಷ್ಣುವರ್ಧನ್ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲದ ಹಲವು ಸೀಕ್ರೆಟ್‌ಗಳು ಇಲ್ಲಿವೆ ನೋಡಿ!

Published : Sep 18, 2026, 11:50 AM ISTUpdated : Sep 18, 2026, 11:55 AM IST
Dr Vishnuvardhan

ಸಾರಾಂಶ

ಇಂದು ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಗಳು ಇಂದು ಮೈಸೂರಿನಲ್ಲಿ ಸೇರಿದ್ದು, ಅನ್ನದಾನ, ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಮೈಸೂರನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಮಾಡಲಿದ್ದಾರೆ.

Dr Vishnuvardhan 75th Birthday grand celebration-ಸಾಹಸಸಿಂಹ ನಟ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬದ ಆಚರಣೆ

ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ (Dr Vishnuvardhan) ಅವರ 75ನೇ ಹುಟ್ಟುಹಬ್ಬವನ್ನು ಇಂದು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ, ನಟ ವಿಷ್ಣುವರ್ಧನ್ ಹುಟ್ಟೂರಾದ ಮೈಸೂರಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡಿಗರ ದೌಭಾಗ್ಯ ಎಂಬಂತೆ, ನಟ ವಿಷ್ಣುವರ್ಧನ್ ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ದಿವ್ಯ ಚೇತನದ ರೂಪದಲ್ಲಿ, ಅವರ ಸಿನಿಮಾದ ಮೂಲಕ ಜಗತ್ತು ಇರುವವರೆಗೂ ಬದುಕಿರಲಿದ್ದಾರೆ, ಬಹಳಷ್ಟು ಜನರ ಪಾಲಿಗೆ ಸ್ಪೂರ್ತಿಯ ಸೆಲೆಯಾಗಲಿದ್ದಾರೆ.

18 ಸೆಪ್ಟೆಂಬರ್ 1950ರಂದು ಮೈಸೂರಿನಲ್ಲಿ ಜನನ

ಹೌದು, ನಟ ವಿಷ್ಣುವರ್ಧನ್ ಅವರು 18 ಸೆಪ್ಟೆಂಬರ್ 1950ರಂದು ಮೈಸೂರಿನಲ್ಲಿ ಜನಿಸಿದ್ದಾರೆ. ಸಂಪತ್ ಕುಮಾರ್ ಎಂಬ ಮೂಲ ಹೆಸರಿನ ಈ ನಟ ಅದೇ ಹೆಸರಿನಲ್ಲಿ 1972ರಲ್ಲಿ ತೆರೆಗೆ ಬಂದ 'ವಂಶವೃಕ್ಷ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ, ಅದೇ ವರ್ಷ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾದ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದರು. ಬಳಿಕ ಅವರು 5 ಬಾಷೆಗಳ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡದ ಮೇರುನಟರಲ್ಲಿ ಒಬ್ಬರಾದರು. ಕರ್ನಾಟಕ ರತ್ನ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ನಟ ವಿಷ್ಣುವರ್ಧನ್ ಭಾಜನರಾಗಿದ್ದಾರೆ.

ವಿಷ್ಣುವರ್ಧನ್ ನಟನೆಯ ನಾಗರಹಾವು, ಮುತ್ತಿನ ಹಾರ, ಯಜಮಾನ, ಬಂಧನ, ಆಪ್ತಮಿತ್ರ ಹಾಗೂ ಆಪ್ತರಕ್ಷಕ ಸೇರಿದಂತೆ ಹಲವಾರು ಸಿನಿಮಾಗಳು ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ ಅವರನ್ನು ಕನ್ನಡದ ಜನತೆ ಎಂದೆಂದೂ ಮರೆಯಲಾಗದಂತೆ ಮಾಡಿಬಿಟ್ಟಿವೆ. ತಮ್ಮ 59ನೆಯ ವಯಸ್ಸಿನಲ್ಲಿ (30 ಡಿಸೆಂಬರ್ 2009) ಇಹಲೋಕ ಯಾತ್ರೆ ಮುಗಿಸಿರುವ ನಟ ವಿಷ್ಣುವರ್ಧನ್ ಹುಟ್ಟಿ ಇಂದಿಗೆ 75 ವರ್ಷ. ಈ ವಿಶೇ‍ಷ ಸಂದರ್ಭದಲ್ಲಿ ಅವರ ಹುಟ್ಟೂರಾದ ಮೈಸೂರಿನಲ್ಲಿ, ನಟಿ ಹಾಗೂ ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ನಟ ಹಾಗೂ ವಿಷ್ಣು ಅಳಿಯ ಅನಿರುದ್ಧ ಸೇರಿದಂತೆ ಇಡೀ ಕುಟುಂಬ ಹಾಗೂ ಅಭಿಮಾನಿಗಳು ಇಂದು ಹತ್ತುಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ

ಮುಖ್ಯವಾಗಿ, ಇಂದು ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಗಳು ಇಂದು ಮೈಸೂರಿನಲ್ಲಿ ಸೇರಿದ್ದು, ಅನ್ನದಾನ, ರಕ್ತದಾನ ಶಿಬಿರಗಳಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಮೈಸೂರನಲ್ಲಿ ದಿವಂಗತ ನಟ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ, ಪೂಜೆ ಮಾಡಲಿದ್ದಾರೆ. ಜೊತೆಗೆ, ಬೆಂಗಳೂರಿನಲ್ಲೂ ಅಭಿಮಾನಿಗಳು ನಟ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅನೇಕ ಕಡೆಗಳಲ್ಲಿ ಆಚರಿಸುತ್ತಿದ್ದಾರೆ. ಒಟ್ಟಿನಲ್ಲಿ, ಇಂದು ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ.

ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಈ ವಿಶೇ‍ಷ ಸಂದರ್ಭದಲ್ಲಿ 'ಏಷ್ಯಾನೆಟ್ ಸುವರ್ಣ ಡಿಜಿಟಲ್' ವಿಶೇಷವಾದ ಒಂದು ಸರಣಿಯನ್ನು ಪೋಸ್ಟ್ ಮಾಡುತ್ತಿದೆ. 'ನಾ ಕಂಡ ವಿಷ್ಣು' ಶೀರ್ಷಿಕೆಯಡಿಯಲ್ಲಿ ನಟ ವಿಷ್ಣುವರ್ಧನ್ ಕುಟುಂಬ, ಆಪ್ತರು ಹಾಗೂ ಅವರ ಜೊತೆಯಲ್ಲಿ ನಟಿಸಿರುವ ಕಲಾವಿದರ ಮಾತುಗಳನ್ನು ವಿಡಿಯೋ ರೂಪದಲ್ಲಿ ಅನಾವರಣ ಮಾಡಿದೆ. ಇದನ್ನು 'ಏಷ್ಯಾನೆಟ್ ಸುವರ್ಣ'ದ 'ಬೆಂಗಳೂರು ಬಜ್ (Bengaluru Buzz)' ಲಿಂಕ್ ಮೂಲಕ ನೋಡಬಹುದು.

ಈ ಲಿಂಕ್‌ನಲ್ಲಿರುವ ‘ನಾ ಕಂಡ ವಿಷ್ಣು’ ಸರಣಿ ವಿಡಿಯೋಗಳಲ್ಲಿ ನಟ ವಿಷ್ಣುವರ್ಧನ್ ಅವರ ಬಗ್ಗೆ ಹಲವರಿಗೆ ಇನ್ನೂ ಗೊತ್ತಿಲ್ಲದ ಸೀಕ್ರೆಟ್‌ಗಳನ್ನು ತಿಳಿದುಕೊಳ್ಳಬಹುದು. ಸಾಹಸ ಸಿಂಹನ ಜೊತೆ ತೆರೆ ಹಂಚಿಕೊಂಡ ಹಲವರು ನಟ ವಿಷ್ಣುವರ್ಧನ್ ಬಗೆಗಿನ ಹಲವು ವಿಶೇಷ ಸಂಗತಿಗಳನ್ನು, ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಅವೆಲ್ಲವೂ ಅದರಲ್ಲಿದೆ ನೋಡಿ..

Link: ಈ ಲಿಂಕ್ ಕ್ಲಿಕ್ ಮಾಡಿ- https://www.youtube.com/results?search_query=Bengaluru+Buzz

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನು ಕಾಯುತ್ತಿರುವ ಯಶಸ್ಸು 'ಕಾಮನ್‌ ಮ್ಯಾನ್‌'ನಿಂದ ಸಿಗಲಿದೆ: ಗೌರಿಶಂಕರ್ ಸಂದರ್ಶನ
ರಂಗಭೂಮಿ ಕಲಾವಿದರ ಬದುಕಿನಿಂದ ಹುಟ್ಟಿದ 'ಟಾಸ್': ಅರ್ಜುನ್ ಕಾಪಿಕಾಡ್ ಜೊತೆ ವಿಶೇಷ ಸಂದರ್ಶನ