ಮಾತೃ ಹೃದಯದ ಡಾ ರಾಜ್‌ಕುಮಾರ್ ಹೂವಿನ ಹಾರ ಹಾಕಿ ನಿಂತಾಗ ಆ ಮನೆಯವ್ರು ಶಾಕ್ ಆಗ್ಬಿಟ್ರು!

By Shriram BhatFirst Published Apr 27, 2024, 12:30 PM IST
Highlights

ಸ್ವಲ್ಪ ದಿನ ಬಿಟ್ಟು ಅದೇ ರಸ್ತೆಯಲ್ಲಿ ಎಂದಿನಂತೆ ವಾಕ್ ಹೊರಟಿದ್ದ ಡಾ ರಾಜ್‌ಕುಮಾರ್ ಅವರಿಗೆ ತಾವು ಅಂದು ಮಳೆ ಬಂದಿದ್ದಾಗ ಒಳಹೋಗಿದ್ದ ಮನೆಯ ಮುಂದೆ ಜನರು ಸೇರಿದ್ದು ಕಂಡುಬಂದಿದೆ. ತಕ್ಷಣ ಜತೆಗಿದ್ದ ಸಹಾಯಕರನ್ನು ಅಲ್ಲಿಗೆ ಕಳುಹಿಸಿ ಅಲ್ಲೇನಾಗಿದೆ...

ಮೇರು ನಟ, ಕರ್ನಾಟಕದ ಅಚ್ಚುಮೆಚ್ಚಿನ ಧೀಮಂತ ನಾಯಕ ಡಾ ರಾಜ್‌ಕುಮಾರ್ (Dr Rajkumar) ಅವರು ನಮ್ಮನ್ನಗಲಿ ಬರೋಬ್ಬರಿ 18 ವರ್ಷಗಳು ಉರುಳಿ ಹೋಗಿವೆ. ಆದರೆ ಅವರು ಬಿಟ್ಟುಹೋದ ನೆನಪು, ಮಾಡಿದ್ದ ಸಹಾಯ, ಮಾತೃ ಹೃದಯದ ಅವರ ನಡೆ-ನುಡಿ ಎಲ್ಲವನ್ನೂ ಯಾರೂ ಯಾವತ್ತಿಗೂ ಮರೆಯಲು ಸಾಧ್ಯವೇ ಇಲ್ಲ. ಡಾ ರಾಜ್‌ಕುಮಾರ್ ಒಬ್ಬರು ಲೆಜೆಂಡ್ ನಟ ಎನ್ನುವುದಕ್ಕಿಂತ ಹೆಚ್ಚಾಗಿ ಅವರೊಬ್ಬರು ಕರುಣಾಮಯಿ  ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂಬುದು ಗಮನಿಸಬೇಕಾದ ಅಂಶ. ಡಾ ರಾಜ್‌ ಅವರನ್ನು ಹತ್ತಿರದಿಂದ ಬಲ್ಲವರೊಬ್ಬರು 2000 ಇಸವಿಯಲ್ಲಿ ನಡೆದ ಘಟನೆಯೊಂದನ್ನು ಹೇಳಿದ್ದು ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. 

ಡಾ ರಾಜ್‌ ಅವರು ಮುಂಜಾನೆ ವಾಕಿಂಗ್ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರು. ಅದು ಬಹುತೇಕ ಎಲ್ಲರಿಗೂ ಗೊತ್ತು. ಸದಾಶಿವನಗರದ ಅವರ ಮನೆಯ ಸಮೀಪದ ರಸ್ತೆಯಲ್ಲಿ ಹೊರಟು ಅವರ ಮಗಳು ಪೂರ್ಣಿಮಾ ಮನೆಯ ಸಮೀಪ ಹೋಗಿ ವಾಪಸ್ ಬರುತ್ತಿದ್ದರಂತೆ ಅಣ್ಣಾವ್ರು. ಅದೊಂದು ದಿನ ಎಂದಿನಂತೆ ಅವರು ಬೆಳಿಗ್ಗೆ ಸಹಾಯಕನ ಜತೆ ವಾಕ್ ಹೊರಟಿದ್ದಾರೆ. ಆದರೆ, ಜೋರಾಗಿ ಮಳೆ ಬಂದಿದೆ. ಒಂದು ಮನೆಯ ಮುಂದಿನ ಮರದ ಕೆಳಗೆ ಇಬ್ಬರೂ ಆಸರೆ ಪಡೆದಿದ್ದರಂತೆ. ಆದರೆ, ಅದು ಅಂತಿಂಥ ಮಳೆಯಲ್ಲ, ಭಾರಿ ಜೋರಾಗಿ ಸುರಿಯುತ್ತಿದೆ. 

ನಟಿಯಾಗುವ ಫೇಸ್ ಅಲ್ಲ, ನಟನೆ ಬರುವುದಿಲ್ಲ ಅಂದಿದ್ರು, ಸಂಕಟಪಟ್ಟು ಅಳುತ್ತಿದ್ದೆ; ನಟಿ ರಶ್ಮಿಕಾ ಮಂದಣ್ಣ

ಡಾ ರಾಜ್‌ಕುಮಾರ್ ಅವರು ಮಳೆಯಲ್ಲಿ ನಿಂತಿದ್ದು ಅಂದು ರಾಷ್ಟ್ರೀಕೃತ ಬ್ಯಾಂಕ್‌ ಒಂದರಲ್ಲಿ ಉನ್ನತ ಹುದ್ದೆಯಲ್ಲಿರುವ ನವರತ್ನರಾಜು ಎಂಬವರ ಮನೆಯಾಗಿತ್ತು ಎನ್ನಲಾಗಿದೆ. ಅವರ ಮನೆಯೊಡತಿ ಇವರನ್ನು ನೋಡಿ ಯಾರೋ ಕೂಲಿ ಕಾರ್ಮಿಕರು ಇರಬೇಕು ಎಂದುಕೊಂಡು 'ಯಾಕೆ ಅಲ್ಲಿ ಮಳೆಯಲ್ಲಿ ನೆನಿತಾ ಇದೀರಾ? ಬನ್ನಿ ನಮ್ಮನೆಯೊಳಕ್ಕೆ..' ಎಂದಿದ್ದಾರಂತೆ. ಆದರೆ, ಸಂಕೋಚದಿಂದಲೋ ಏನೋ ಎನ್ನುವಂತೆ ಡಾ ರಾಜ್‌ಕುಮಾರ್ ಅವರು ಅಲ್ಲೇ ನಿಂತಿದ್ದರಂತೆ. 

ಸ್ವಿಮ್ಮಿಂಗ್ ಪೂಲ್‌ಗೆ ಜಿಗಿದು 'ಅಂಕಲ್‌.. ಅಂಕಲ್‌..' ಕೂಗಿದ್ದ ನಟಿ ಮಂಜುಳಾ; ಡಾ ರಾಜ್‌ಕುಮಾರ್ ಮಾಡಿದ್ದೇನು?

ಮಳೆ ಇನ್ನೂ ಹೆಚ್ಚು ಜೋರಾದರೂ ಅವರು ಅಲ್ಲೇ ನಿಂತಿರುವುದನ್ನು ನೋಡಿದ ಮನೆಯೊಡತಿ ಆಗ ಸ್ವಲ್ಪ ಜೋರಾಗಿಯೇ 'ಕಿವಿ ಕೇಳಿಸ್ತಾ ಇಲ್ವಾ ನಿಮಗೆ? ಬನ್ನಿ ಮನೆಯೊಳಕ್ಕೆ ಬೇಗ..' ಎಂದು ಗದರಿದ್ದರಂತೆ. ಆಗ ಅವರಿಬ್ಬರೂ ಆ ಮನೆಯೊಳಕ್ಕೆ ಹೋಗಿ ಆಸರೆ ಪಡೆದಿದ್ದಾರೆ. ಆದರೆ, ಆ ಮನೆಯವರು ಡಾ ರಾಜ್ ಸಿನಿಮಾಗಳನ್ನಾಗಲೀ, ಕನ್ನಡ ಸಿನಿಮಾಗಳನ್ನಾಗಲೀ ನೋಡುತ್ತಿಲ್ಲವಾದ್ದರಿಂದ ಅವರಿಗೆ ತಮ್ಮ ಮನೆಯೊಳಕ್ಕೆ ಬಂದು ನಿಂತಿರುವವರು ಡಾ ರಾಜ್‌ ಎಂಬುದು ಗೊತ್ತೇ ಇರಲಿಲ್ಲ. ಆಮೇಲೆ ಮಳೆ ಕಡಿಮೆಯಾಗಲು ಅವರಿಬ್ಬರೂ ಹಾಗೇ ಹೊರಟು ಹೋಗಿದ್ದಾರೆ. 

ಶೂಟಿಂಗ್‌ಗೆ ಕಲ್ಪನಾ ದಿನಾಲೂ ಲೇಟ್; ಕಾರಣ- ಅರ್ಧ ಡಜನ್ ಮೊಟ್ಟೆ, ತರಕಾರಿ ಜ್ಯೂಸ್, ಹಣ್ಣುಹಂಪಲು!

ಸ್ವಲ್ಪ ದಿನ ಬಿಟ್ಟು ಅದೇ ರಸ್ತೆಯಲ್ಲಿ ಎಂದಿನಂತೆ ವಾಕ್ ಹೊರಟಿದ್ದ ಡಾ ರಾಜ್‌ಕುಮಾರ್ ಅವರಿಗೆ ತಾವು ಅಂದು ಮಳೆ ಬಂದಿದ್ದಾಗ ಒಳಹೋಗಿದ್ದ ಮನೆಯ ಮುಂದೆ ಜನರು ಸೇರಿದ್ದು ಕಂಡುಬಂದಿದೆ. ತಕ್ಷಣ ಜತೆಗಿದ್ದ ಸಹಾಯಕರನ್ನು ಅಲ್ಲಿಗೆ ಕಳುಹಿಸಿ ಅಲ್ಲೇನಾಗಿದೆ ಎಂಬ ಮಾಹಿತಿ ಪಡೆದಿದ್ದಾರೆ. ಆ ಮನೆಯೊಡತಿ ನಿಧನ ಹೊಂದಿದ್ದು ಗೊತ್ತಾಗುತ್ತಿದ್ದಂತೆ, ವಾಕಿಂಗ್ ಅಲ್ಲಿಗೇ ನಿಲ್ಲಿಸಿ, ಮನೆಗೆ ಹೋಗಿದ್ದಾರೆ. ಸ್ನಾನ ಮಾಡಿಕೊಂಡು ಒಂದು ಹೂವಿನ ಹಾರ ಹಿಡಿದುಕೊಂಡು, ಅದನ್ನು ಡಾ ರಾಜ್‌ ಅವರು ಆ ಮನೆಗೆ ಬಂದು ಮನೆಯೊಡತಿಯ ಪಾರ್ಥಿವ ಶರೀರಕ್ಕೆ ಹಾಕಿದ್ದಾರೆ. 

ಸಮಂತಾ ಹೇಳಿದ್ರು 'ಐ ಲವ್ ಹಿಮ್, ಲವ್ ಹಿಮ್...', ನಟ ರಾಜ್‌ಕುಮಾರ್ ರಾವ್ ಬಗ್ಗೆ ಹೀಗ್ಯಾಕೆ ಹೇಳ್ಬಿಟ್ರು?

ಅಷ್ಟರಲ್ಲಿ, ಆ ಮನೆಯವರಿಗೆ ಆ ವ್ಯಕ್ತಿ ಡಾ ರಾಜ್‌ಕುಮಾರ್ ಎಂಬುದು ಗೊತ್ತಾಗಿದೆ. ಡಾ ರಾಜ್‌ಕುಮಾರ್ ಏನೂ ಪರಿಚಯವಿಲ್ಲದೇ ತಮ್ಮ ಮನೆಗೆ ಬಂದು ಪಾರ್ಥಿವ ಶರೀರಕ್ಕೆ ಹಾರ ಹಾಕಿ ನಮಿಸಿದ್ದನ್ನು ನೋಡಿ ಮನೆಯವರು ಶಾಕ್ ಆಗಿದ್ದಾರೆ. ಆಗ ಡಾ ರಾಜ್‌ ಅವರು ಅಂದು ನಡೆದ ಘಟನೆಯನ್ನು, ಮನೆಯೊಡತಿಯ ದೊಡ್ಡ ಗುಣವನ್ನು ನೆನಪಿಸಿಕೊಂಡು ಅಲ್ಲಿ ಎಲ್ಲರ ಮುಂದೆ ಹೇಳಿ, ಅದಕ್ಕಾಗಿಯೇ ತಾವು ಬಂದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾಗಿ ಹೇಳಿದ್ದಾರೆ. ಡಾ ರಾಜ್‌ಕುಮಾರ್ ಅವರ ಸರಳತೆ ಹಾಗೂ ದೊಡ್ಡ ವ್ಯಕ್ತಿತ್ವಕ್ಕೆ ಅಲ್ಲಿರುವ ಎಲ್ಲರೂ ತಲೆದೂಗಿದ್ದಾರೆ. 

click me!