ಎರಡು ಕನಸು ಸಿನಿಮಾದಲ್ಲಿ ನಟಿ ಮಂಜುಳಾರದ್ದು ಅಮೋಘ ಅಭಿನಯ. ಅದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇನ್ನು ಡಾ ರಾಜ್‌ಕುಮಾರ್ ಬಗ್ಗೆ ಹೇಳುವುದೇ ಬೇಡ. ಸಿನಿಮಾದಲ್ಲಿ ಅವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿದ್ದು...
ನಟಿ ಮಂಜುಳಾ (Actress Manjula) ಯಾರಿಗೆ ಗೊತ್ತಿಲ್ಲ. ಎಪ್ಪತ್ತು-ಎಂಬತ್ತರ ದಶಕದಲ್ಲಿ ಮಿಂಚಿ ಮರೆಯಾದ ನಟಿ ಮಂಜುಳಾ ಅವರ ಬಗೆಗಿನ ಸಾಕಷ್ಟು ಕುತೂಹಲಕಾರಿ ಅಂಶಗಳು ಈಗ ಸೋಷಿಯಲ್ ಮೀಡಿಯಾಗ ಮೂಲಕ ವೈರಲ್ ಆಗುತ್ತಿವೆ. 'ಎರಡು ಕನಸು' ಚಿತ್ರದ ಶೂಟಿಂಗ್ ಟೈಮಲ್ಲಿ ನಡೆದ ಒಂದು ಪ್ರಸಂಗ ಸಾಕಷ್ಟು ತಮಾಷೆಯಾಗಿದ್ದು, ಅದೀಗ ಸಖತ್ ವೈರಲ್ ಆಗುತ್ತಿದೆ. ಎರಡು ಕನಸು ಚಿತ್ರವೊಂದರ ಸನ್ನಿವೇಶದಲ್ಲಿ ನಟಿ ಮಂಜುಳಾ ಈಜುಕೊಳಕ್ಕೆ ಧುಮುಕಬೇಕು. ಅಲ್ಲಿ ಅವರು ಬಿದ್ದ ತಕ್ಷಣ ನಾಯಕ ಡಾ. ರಾಜ್‌ಕುಮಾರ್ (Dr Rajkumar) ಹೆಸರನ್ನು 'ರಾಮು ರಾಮೂ..' ಎಂದು ಕೂಗಬೇಕು. ಮಂಜುಳಾರಿಗೆ ಈಜು ಬಾರದ ಕಾರಣ, ಡ್ಯೂಪ್ ಒಬ್ಬರನ್ನು ಕರೆಸಲಾಗಿತ್ತು.
ಶೂಟಿಂಗ್ ಸ್ಪಾಟ್‌ಗೆ ಕರೆಸಲಾಗಿದ್ದ ಆ ವ್ಯಕ್ತಿಗೆ ಕಾಲು ಮುರಿದುಹೋಗಿದ್ದ ಕಾರಣಕ್ಕೆ ಮಂಜುಳಾರಿಗೆ 'ನೀನೇ ನೀರಿಗೆ ಧುಮುಕಬೇಕಮ್ಮ' ಎಂದಿದ್ದರಂತೆ ನಿರ್ದೇಶಕರು. ಸರಿ ಎಂದು ನಟಿ ಮಂಜುಳಾ ಹಿಂದೆಮುಂದೆ ಯೋಚಿಸದೇ ನೀರಿಗೆ ಧುಮುಕಿಬಿಟ್ಟರಂತೆ. ಮಂಜುಳಾ ಸೀರೆಯ ಸೆರಗು ನೀರಿನಲ್ಲಿ ಬಿದ್ದ ರಭಸಕ್ಕೆ ಅವರ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಅವರಿಗೆ ಉಸಿರಾಡಲೂ ಕಷ್ಟವಾಗಿ ಅವರು ಕಿರುಚಿಕೊಂಡರಂತೆ. ಅಲ್ಲಿ ರಾಮು, ರಾಮೂ.. ಎಂದು ಕೂಗುವ ಬದಲು ಮಂಜುಳಾ ಅವರು 'ಅಂಕಲ್.. ಅಂಕಲ್..' ಕೂಗಿಬಿಟ್ಟರಂತೆ.
ಶೂಟಂಗ್‌ಗೆ ಕಲ್ಪನಾ ದಿನಾಲೂ ಲೇಟ್; ಕಾರಣ- ಅರ್ಧ ಡಜನ್ ಮೊಟ್ಟೆ, ತರಕಾರಿ ಜ್ಯೂಸ್, ಹಣ್ಣುಹಂಪಲು!
ಮಂಜುಳಾ ಅವರು ನಟ ಡಾ ರಾಜ್‌ಕುಮಾರ್ ಅವರನ್ನು 'ಅಂಕಲ್' ಎಂತಲೂ, ಪಾರ್ವತಮ್ಮನವರನ್ನು 'ಆಂಟಿ' ಎಂದೂ ಕರೆಯುತ್ತಿದ್ದರಂತೆ. ಆದರೆ, ಸಿನಿಮಾ ಶೂಟಿಂಗ್‌ನಲ್ಲಿ ನೆನಪಿಟ್ಟುಕೊಂಡು ಸಿನಿಮಾ ಪಾತ್ರದ ಹೆಸರನ್ನು ಕರೆಯುತ್ತಿದ್ದರಂತೆ. ಆದರೆ ಅಂದು, ನೀರಿಗೆ ಬಿದ್ದ ಭಯೊಂದು ಕಡೆಯಾದರೆ, ಸೀರೆಯ ಸೆರಗು ಮುಖ ಮುಚ್ಚಿಕೊಂಡು ಉಸಿರುಗಟ್ಟಲು ರಾಮು ಎಂದು ಕರೆಯಲು ಮರೆತು ಅಂಕಲ್ ಎಂದೇ ಕರೆದು ಎಲ್ಲರ ನಗುವಿಗೆ ಕಾರಣರಾಗಿದ್ದರಂತೆ ಮಂಜುಳಾ.
ಸಮಂತಾ ಹೇಳಿದ್ರು 'ಐ ಲವ್ ಹಿಮ್, ಲವ್ ಹಿಮ್...', ನಟ ರಾಜ್‌ಕುಮಾರ್ ರಾವ್ ಬಗ್ಗೆ ಹೀಗ್ಯಾಕೆ ಹೇಳ್ಬಿಟ್ರು?
ಎರಡು ಕನಸು ಸಿನಿಮಾದಲ್ಲಿ ನಟಿ ಮಂಜುಳಾರದ್ದು ಅಮೋಘ ಅಭಿನಯ. ಅದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇನ್ನು ಡಾ ರಾಜ್‌ಕುಮಾರ್ ಬಗ್ಗೆ ಹೇಳುವುದೇ ಬೇಡ. ಸಿನಿಮಾದಲ್ಲಿ ಅವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿದ್ದು, ಪ್ರೇಕ್ಷಕರು ತುಂಬಾ ಇಷ್ಟಪಟ್ಟಿದ್ದರು. ಮಂಜುಳಾ ಮತ್ತು ಡಾ ರಾಜ್‌ಕುಮಾರ್ ಜೋಡಿಯ 'ನೀ ನನ್ನ ಗೆಲ್ಲಲಾರೆ' ಚಿತ್ರ ಕೂಡ ಪ್ರೇಕ್ಷಕರಿಗೆ ಭಾರೀ ಇಷ್ಟವಾಗಿತ್ತು. ಆ ಚಿತ್ರದಲ್ಲಿನ 'ನೀನು ನನ್ನ ಗೆಲ್ಲಲಾರೆ... ತಿಳಿದು ತಿಳಿದೂ ಛಲವೇತಕೆ?' ಹಾಡಂತೂ ಅದ್ಯಾವ ಲೆವಲ್‌ಗೆ ಹಿಟ್ ಆಗಿತ್ತು ಎಂದರೆ, ಊಹೆಗೂ ನಿಲುಕದಷ್ಟು.
ಸಮಂತಾ ಹೇಳಿದ್ರು 'ಐ ಲವ್ ಹಿಮ್, ಲವ್ ಹಿಮ್...', ನಟ ರಾಜ್‌ಕುಮಾರ್ ರಾವ್ ಬಗ್ಗೆ ಹೀಗ್ಯಾಕೆ ಹೇಳ್ಬಿಟ್ರು?