ಪವಿತ್ರಾ ಗೌಡ ರೇಂಜ್‌ ಏನು? ಎಷ್ಟು ಶ್ರೀಮಂತರು ಎನ್ನೋದು ಗೊತ್ತಾ? ವಕೀಲ ನಾರಾಯಣ ಸ್ವಾಮಿ ಬಿಚ್ಚಿಟ್ಟ ಗುಟ್ಟೇನು?

Published : Aug 13, 2025, 01:05 PM IST
pavithra gowda lawyer narayana swamy

ಸಾರಾಂಶ

Pavithra Gowda News: ಪವಿತ್ರಾ ಗೌಡ ಅವರು ಕೋರ್ಟ್‌ಗೆ ಮೇಕಪ್‌ ಮಾಡಿಕೊಂಡು ಹೋಗ್ತಾರೆ, ರೇಂಜ್‌ ರೋವರ್‌ ಕಾರ್‌ ಒಡತಿ ಎಂಬ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತು. ಈ ಬಗ್ಗೆ ವಕೀಲ ನಾರಾಯಣ ಸ್ವಾಮಿ ಅವರು ಮಾತನಾಡಿದ್ದಾರೆ. 

ನಟಿ, ಮಾಡೆಲ್‌, ಉದ್ಯಮಿ ಪವಿತ್ರಾ ಗೌಡ ( Pavithra Gowda ) ಹಾಗೂ ನಟ ದರ್ಶನ್‌ (Darshan Thoogudeepa ) ಆತ್ಮೀಯರು. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ದರ್ಶನ್‌, ಪವಿತ್ರಾ ಗೌಡ ಮೇಲಿದೆ. ಪವಿತ್ರಾ ಗೌಡ ಅವರ ಬಳಿ ರೇಂಜ್‌ ರೋವರ್‌ ಕಾರ್‌ ಬರಲು ದರ್ಶನ್‌ ಕಾರಣ ಎಂದು ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದರು. ಇದಕ್ಕೆ ಪವಿತ್ರಾ ಗೌಡ ಪರ ವಕೀಲ ನಾರಾಯಣ್‌ ಸ್ವಾಮಿ ಅವರು ನ್ಯಾಶನಲ್ ಟಿವಿ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

“ಪವಿತ್ರಾ ಗೌಡ ತುಂಬ ಸ್ವಾವಲಂಬಿ, ತಾನು ಬೆಳೆದು, ತನ್ನ ಮಗಳನ್ನು ಬೆಳೆಸಬೇಕು ಎಂದು ಬಯಸುವ ವ್ಯಕ್ತಿತ್ವ ಅವರದ್ದು. ಕೋರ್ಟ್‌ಗೆ ಅವರು ರೆಡಿಯಾಗಿ ಬಂದ್ರೆ ಏನು ತಪ್ಪು? ಏನು ಗತಿ ಇಲ್ಲದೆ ಬರಬೇಕಾ? ಹಣದ ವಿಚಾರದಲ್ಲಿ ಜೋರಿದ್ದಾರೆ. ಅವರ ತಾತ ಆಗಿನ ಕಾಲದಲ್ಲಿ ಹಣಕಾಸು ವಿಚಾರದಲ್ಲಿ ಮುಂದಿದ್ದಾರೆ. ಇವರ ಅಪ್ಪ ಪುಟ್ಟಣ್ಣ ಕೂಡ ರಿಚ್.‌ ಈಗಲೂ ಅವರ ಅಪಾರ್ಟ್‌ಮೆಂಟ್‌ಗಳು, ಮನೆಗಳು, ಲ್ಯಾಂಡ್‌ ಇದೆ. ಅಪ್ಪ ಕೊಡಿಸಿರುವ ರೇಂಜ್‌ ರೋವರ್‌ ಕಾರ್‌ಗೆ ಪವಿತ್ರಾ ಗೌಡ ಅವರು ಬಡ್ಡಿ ಕಟ್ಟುತ್ತಿದ್ದಾರೆ” ಎಂದು ವಕೀಲ ನಾರಾಯಣ್‌ ಸ್ವಾಮಿ ಅವರು ಹೇಳಿದ್ದಾರೆ.

ಯಾಕೆ ಪವಿತ್ರಾ ಗೌಡ ದೇವಸ್ಥಾನಕ್ಕೆ ಹೋಗಬಾರದು?

“ಯಾರಿಂದ ಯಾರ ಐಡೆಂಟಿಟಿ ಇಲ್ಲ. ಯಾರೋ ದೇವಸ್ಥಾನಕ್ಕೆ ಹೋದರು ಅಂತ ಇವರು ಹೋಗಬಾರದು ಅಂತಿಲ್ಲ. ದೇವಸ್ಥಾನಕ್ಕೆ ಯಾರಪ್ಪನ ಸ್ವಂತದ್ದಾ? ಯಾವುದೇ ಹೆಣ್ಣು ಮಕ್ಕಳ ಬಗ್ಗೆ ತಪ್ಪಾಗಿ ಮಾತನಾಡೋಕೆ ನಮಗೆ ಅಧಿಕಾರ ಇಲ್ಲ. ರೇಣುಕಾಸ್ವಾಮಿ ಕೇಸ್‌ನಲ್ಲಿ ಪವಿತ್ರಾ ಗೌಡ ಅವರು ಭಾಗಿಯಾಗಿಲ್ಲ. ಸುಮ್ಮನೆ ಅವರನ್ನು ಸೇರಿಸಲಾಗಿದೆ. ಪವಿತ್ರಾ ಗೌಡ ಅವರನ್ನು ಕುಗ್ಗಿಸಬಾರದು. ಪವಿತ್ರಾ ಗೌಡ ಅವರಿಂದ ದರ್ಶನ್‌ ಈ ರೀತಿ ಅನುಭವಿಸ್ತಿದ್ದಾರೆ ಅಂತ ಹೇಳೋದು ತಪ್ಪು” ಎಂದು ವಕೀಲ ನಾರಾಯಣ್‌ ಸ್ವಾಮಿ ಅವರು ಹೇಳಿದ್ದಾರೆ.

ದರ್ಶನ್‌ ಆಗ ಆರ್ಥಿಕವಾಗಿ ಸ್ಟ್ರಾಂಗ್‌ ಆಗಿರಲಿಲ್ಲ!

“ಪವಿತ್ರಾ ಗೌಡ ಅವರಿಂದ ದರ್ಶನ್‌ ಸಂಸಾರ ಹಾಳಾಗಿಲ್ಲ. ದರ್ಶನ್‌ಗೂ ಬುದ್ಧಿ ಇದೆ. ಈ ಹಿಂದೆಯೂ ದರ್ಶನ್‌ ಜೈಲಿಗೆ ಹೋಗಿದ್ದು ಯಾವ ಕಾರಣಕ್ಕೆ ಎನ್ನೋದು ಎಲ್ಲರಿಗೂ ಗೊತ್ತಿದೆ. ಸಂಜಯ್‌ ಸಿಂಗ್‌ ಅವರಿಂದ ಪವಿತ್ರಾ ಗೌಡ ಅವರು ಡಿವೋರ್ಸ್‌ ಪಡೆದು ಹತ್ತು ವರ್ಷ ಆಗಿದೆ. ಹತ್ತು-ಹದಿನೈದು ಸಿನಿಮಾ ಆಗೋವರೆಗೂ ದರ್ಶನ್‌ ಅಷ್ಟು ಗಟ್ಟಿಯಾಗಿರಲಿಲ್ಲ. ಆಗ ಅವರು ಹೇಗೆ ಪವಿತ್ರಾಗೆ ಸಹಾಯ ಮಾಡ್ತಾರೆ?” ಎಂದು ವಕೀಲ ನಾರಾಯಣ್‌ ಸ್ವಾಮಿ ಅವರು ಹೇಳಿದ್ದಾರೆ.

ಕೇಸ್‌ ಕ್ಲಿಯರ್‌ ಆಗುತ್ತದೆ

“ಮಾಡದ ತಪ್ಪಿಗೆ ಈ ಥರ ಆಯ್ತು, ಕಳಂಕ ಬಂತು ಅಂತ ಪವಿತ್ರಾಗೆ ಬೇಸರ ಆಗಿದೆ. ಅವರು ಹೊರಗಡೆ ನಗುತ್ತಾರೆ ಅಷ್ಟೇ. ಕಾಲೆಳೆಯೋರು ಯಾವಾಗಲೂ ಕಾಲು ಕೆಳಗಡೆ ಅಂತ ಹೇಳ್ತಾರೆ. ಈ ಕೇಸ್‌ ಕ್ಲಿಯರ್‌ ಆಗುತ್ತದೆ. ಡಾಕ್ಯುಮೆಂಟ್‌ನಿಂದಲೂ ಕೂಡ ಈ ಕೇಸ್‌ಗೂ, ಪವಿತ್ರಾ ಗೌಡಗೂ ಸಂಬಂಧ ಇಲ್ಲ ಎನ್ನೋದು ಗೊತ್ತಾಗುತ್ತದೆ” ಎಂದು ವಕೀಲ ನಾರಾಯಣ್‌ ಸ್ವಾಮಿ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ