ಪ್ರೆಗ್ನೆಂಟ್‌ ಅಂತ ಗೊತ್ತಾಗಿ 1 ವಾರ ಆದ್ಮೇಲೆ ಆಸ್ಪತ್ರೆಗೆ ಹೋಗಿದ್ದು, ಗಂಡ ನಂಬಲೇ ಇಲ್ಲ: ನೇಹಾ ಗೌಡ

Published : Sep 04, 2024, 01:27 PM IST
ಪ್ರೆಗ್ನೆಂಟ್‌ ಅಂತ ಗೊತ್ತಾಗಿ 1 ವಾರ ಆದ್ಮೇಲೆ ಆಸ್ಪತ್ರೆಗೆ ಹೋಗಿದ್ದು, ಗಂಡ ನಂಬಲೇ ಇಲ್ಲ: ನೇಹಾ ಗೌಡ

ಸಾರಾಂಶ

ಪ್ರೆಗ್ನೆನ್ಸಿ ವಿಚಾರವನ್ನು ಗಂಡ ಚಂದನ್‌ಗೆ ನೇಹಾ ರಿವೀಲ್ ಮಾಡಿದ್ದು ಹೇಗೆ? ಬಸುರಿ ಬಯಕೆಗಳು ಏನು?

ಕನ್ನಡ ಕಿರುತೆರೆಯ ಜನಪ್ರಿಯ ನಟಿ ನೇಹಾ ಗೌಡ ಮದುವೆಯಾಗಿ 6 ವರ್ಷಗಳ ನಂತರ ತಾಯಿ ಆಗುತ್ತಿರುವ ವಿಚಾರವನ್ನು ತುಂಬಾನೇ ಸ್ಪೆಷಲ್ ಫೋಟೋಶೂಟ್ ಮೂಲಕ ರಿವೀಲ್ ಮಾಡಿಬಿಟ್ಟರು. ಬ್ಯಾಂಕಾಕ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಅಲ್ಲಿನ ಕೆಲಸಕ್ಕೆ ರಿಸೈನ್ ಮಾಡಿ ಈಗ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಈ ಸೆಲೆಬ್ರಿಟಿ ಕಪಲ್ ಗುಡ್ ನ್ಯೂಸ್ ಕೊಟ್ಟ ಬೆನ್ನಲೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಇನ್ನು ಹೇಗಿದೆ ಪ್ರೆಗ್ನೆನ್ಸಿ ಜರ್ನಿ ಮತ್ತು ಬಯಕೆಗಳು ಏನು ಎಂದು ನೇಹಾ ಹಂಚಿಕೊಂಡಿದ್ದಾರೆ.

'ಬಸುರಿ ಬಯಕೆಗಳ ಬಗ್ಗೆ ನಾನು ಕೇಳಿದ್ದೀನಿ ಆದರೆ ನನಗೆ ಯಾವುದೇ ರೀತಿಯಲ್ಲಿ ಭಯಕೆ ಆಗಿಲ್ಲ ಆದರೆ ಮನೆ ಊಟವನ್ನು ಚೆನ್ನಾಗಿ ತಿನ್ನುತ್ತಿದ್ದೀನಿ ಸ್ವೀಟ್ ಒಂದು ಇಷ್ಟ ಆಗುತ್ತಿಲ್ಲ. ಏನನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನುತ್ತಿಲ್ಲ ಏನೇ ಬೇಕಿದ್ದರೂ ಮನೆಯಲ್ಲಿ ಮಾಡಿ ಕೊಡುತ್ತಿದ್ದಾರೆ. ನನ್ನ ಗಂಡನ ಜೊತೆ ಜಾಸ್ತಿ ಸಮಯ ಕಳೆಯಬೇಕು ಅನ್ನೋ ಬಯಕೆ ಇದೆ..ಅನುಬಂಧ ಅವಾರ್ಡ್ ನಂತರ ಅವನಿಗೆ ರಜೆ ಕೊಟ್ಟರೆ ನನಗೆ ಅದೇ ಖುಷಿ. ಮದುವೆಯಾಗಿ 6 ವರ್ಷ ಆದ್ಮೇಲೆ ನಾವು ಮಗು ಮಾಡಿಕೊಂಡಿರುವುದು ಇದು ನಾವು ಮಾಡಿರುವ ಪ್ಲ್ಯಾನ್ ಏಕೆಂದರೆ ನಮಗೆ ಕೆಲಸದ ಕಮಿಟ್ಮೆಂಟ್ ಇತ್ತು. ನನ್ನ ಫ್ಯಾಮಿಲಿಯನ್ನು ಇದು ಮೊದಲ ಮಗು ಆಗಿರುವ ಕಾರಣ ಎಲ್ಲರೂ ಖುಷಿಯಾಗಿದ್ದಾರೆ. ನನ್ನ ಗಂಡನ ಮನೆ ಕಡೆ ನಾನು ಕೊನೆಯ ಸೊಸೆ ಆಗಿರುವ ಕಾರಣ ಈಗಾಗಲೆ ಮೂರು ಮಕ್ಕಳಿಗೆ ನಾನು ಚಿಕ್ಕಮ್ಮ ಆಗಿರುವೆ...ಅದರಲ್ಲಿ ಮೊದಲ ವಾರ್ಗಿತ್ತಿ ಮಗಳು ಖುಷಿ ಸುದ್ದಿಯನ್ನು ಕೇಳಿ ಕಣ್ಣೀರಿಟ್ಟಳು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ನೇಹಾ ಗೌಡ ಮಾತನಾಡಿದ್ದಾರೆ.

ಕಮಿಟ್ಮೆಂಟ್ ಇದ್ದ ಕಾರಣ ಮದ್ವೆಯಾಗಿ 6 ವರ್ಷ ಆದ್ಮೇಲೆ ಈಗ ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡಿದೆ: ನೇಹಾ ಗೌಡ

ನಾನು ಪ್ರೆಗ್ನೆಂಟ್ ಅನ್ನೋ ಸಣ್ಣ ಅನುಮಾನ ಶುರುವಾಯ್ತು ತಕ್ಷಣವೇ ಮನೆಯಲ್ಲಿ ಟೆಸ್ಟ್ ಮಾಡಿಸಿದೆ ಪಾಸಿಟಿವ್ ಎಂದು ಬಂದ ತಕ್ಷಣ ಚಂದನ್‌ಗೆ ಹೇಳಿದೆ. ಪುಟ್ಟ ನಾನು ಪ್ರೆಗ್ನೆಂಟ್ ಅನ್ಸುತ್ತೆ  ಎಂದು ಹೇಳಿದಾಗ ಹೌದಾ ಪಕ್ಕನಾ ಎಂದು ಎರಡು ಮೂರು ಸಲ ಕೇಳಿದ ಏಕೆಂದರೆ ನಾನು ಡಾಕ್ಟರ್ ಬಳಿ ಹೋಗಿರಲಿಲ್ಲ. ಒಂದು ವಾರ ಶೂಟಿಂಗ್ ಮುಗಿಸಿಕೊಂಡು ನಾನು ಡಾಕ್ಟರ್ ಬಳಿ ಹೋಗಿದೆ. ಎರಡು ಮೂರು ದಿನ ಆದ್ಮೇಲೆ ಚಂದನ್ ಕಣ್ಣಲ್ಲಿ ನೀರು ನೋಡಿ...ಸಮಯ ತೆಗೆದುಕೊಂಡು ರಿಯಾಲಿಟಿ ಗೊತ್ತಾಗಿದೆ. ಮಗು ಬಂದ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ನಾನು ಪ್ಲ್ಯಾನ್ ಮಾಡಿಕೊಂಡು ಪ್ರೆಗ್ನೆಂಟ್ ಆಗಿರುವ ಕಾರಣ ಏನೇ ಇದ್ದರೂ ಗಟ್ಟಿಯಾಗಿ ಎದುರಿಸಬೇಕು ಹಾಗೂ ಎಂಜಾಯ್ ಮಾಡಬೇಕು ಎಂದು ನಾನು ನಿರ್ಧಾರ ಮಾಡಿಕೊಂಡಿದ್ದೆ ಎಂದು ನೇಹಾ ಹೇಳಿದ್ದಾರೆ. 

ನಿನ್ನ ಪರಿಸ್ಥಿತಿ ಹೇಗೇ ಇದ್ರೂ ನಂಗೆ ಸಹಾಯ ಮಾಡ್ತಿದ್ಯಾ ಅಮ್ಮ, ನಾನು ಪುಣ್ಯ ಮಾಡಿದ್ದೆ; ಪವಿತ್ರಾ ಗೌಡ ಪುತ್ರಿ ಪೋಸ್ಟ್ ವೈರಲ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ