ಬಿಗ್ ಬಾಸ್ 10 ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದ ನಟಿ ತನಿಷಾ ವಿನ್ನರ್ ಕ್ಯಾಂಡಿಡೇಟ್ ಎಂದೇ ಊಹಿಸಲಾಗಿತ್ತು. ಆದರೆ ಊಹೆ ಸುಳ್ಳಾಗಿ ತನಿಷಾ ರನ್ನರ್ ಅಪ್ ಕೂಡ ಆಗಲಿಲ್ಲ. ಆದರೆ, ಬಿಗ್ ಮನೆಯಲ್ಲಿ ಇದ್ದು ಬಂದ ಅವರು ಮೊದಲಿಗಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದು ಸುಳ್ಳಲ್ಲ...
ಮೊನ್ನೆ ಸೆಷ್ಟೆಂಬರ್ 2ರಂದು ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ತಮ್ಮ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಂಡಿದ್ದು ಗೊತ್ತೇ ಇದೆ. ಜಯನಗರದ ಗ್ರೌಂಡ್‌ನಲ್ಲಿ ಸುದೀಪ್ ಅವರು ತಮ್ಮ ಅಸಂಖ್ಯಾತ ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಅಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹತ್ತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ನಟ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ (Tanisha Kuppanda) ವಿಶೇಷ ವಿಶ್ ಮಾಡಿದ್ದಾರೆ.
ಹೌದು, ನಟಿ ತನಿಷಾ ಕುಪ್ಪಂಡ ಅವರು ಸುದೀಪ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಬರೆದುಕೊಂಡಿದ್ದಾರೆ. Happiest bday handsome sir @kichchasudeepa the best hugg and the most practical man we can ever see in life ❤️ I’m thankful to god and team BiggBoss , ನಿಮ್ಮಿಂದ ಲೈಫ್ ಅಲ್ಲಿ ತುಂಬಾ ಕಲಿಯುತ್ತಿದೀನಿ❤️ ಥಾಂಕ್ ಯು ಬಾಸ್ ❤️ ಯಾವಾಗ್ಲೂ ಸಂತೋಷವಾಗಿರಿ 😁 much love ❤️' ಎಂದು ತನಿಷಾ ಪೋಸ್ಟ್ ಮಾಡಿದ್ದಾರೆ.
ಈ ಪ್ರಪಂಚಕ್ಕೆ ಅವ್ಳನ್ನ ತಂದಿರೋದು ನಾನು, ಅದು ನನ್ನ ಜವಾಬ್ದಾರಿ ಅಂದ್ರೆ ಒಪ್ಕೋತೀನಿ: ಕಿಚ್ಚ ಸುದೀಪ್
ಬಿಗ್ ಬಾಸ್ 10 ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದ ನಟಿ ತನಿಷಾ ವಿನ್ನರ್ ಕ್ಯಾಂಡಿಡೇಟ್ ಎಂದೇ ಊಹಿಸಲಾಗಿತ್ತು. ಆದರೆ ಊಹೆ ಸುಳ್ಳಾಗಿ ತನಿಷಾ ರನ್ನರ್ ಅಪ್ ಕೂಡ ಆಗಲಿಲ್ಲ. ಆದರೆ, ಬಿಗ್ ಮನೆಯಲ್ಲಿ ಇದ್ದು ಬಂದ ಅವರು ಮೊದಲಿಗಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದು ಸುಳ್ಳಲ್ಲ. ತಮ್ಮ ನೇರ ನಡೆ-ನುಡಿ, ಕೆಲವೊಮ್ಮೆ ನಿಷ್ಠುರ ಎನ್ನಿಸುವ ಮಾತುಗಳಿಂದ ಅಲ್ಲಿದ್ದಾಗ ಸುದ್ದಿಯಾದರೂ ಎಲ್ಲಿಯೂ ತಮ್ಮತನ ಬಿಟ್ಟುಕೊಡದೇ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಬಿಗ್ ಬಾಸ್ ಮನೆಯಿಂದ ವಾಪಸ್ ಬಂದ ಬಳಿಕ ನಟಿ ತನಿಷಾ ರೀಲ್ಸ್ ಹಾಗು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ತಮ್ಮ ಪ್ಯಾನ್ಸ್‌ಗಳ ಜೊತೆ ಕಮ್ಯುನಿಕೇಶನ್ ಕಾಪಾಡಿಕೊಂಡಿದ್ದಾರೆ. ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಅಭ್ಯಾಸ ನಟಿ ತನಿಷಾ ಅವರಿಗಿದೆ. ಜೊತೆಗೆ, ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಮಾಡಿಕೊಂಡಿರುವ ನಟಿ ತನಿಷಾ ಬ್ಯುಸಿನೆಸ್ ವೂಮನ್ ಕೂಡ ಹೌದು.
ಒಟ್ಟಿನಲ್ಲಿ, ನಟಿ ತನಿಷಾ ತಾವು ನಟ ಸುದೀಪ್ ಅವರಿಂದ ಜೀವನದಲ್ಲಿ ಬಹಳಷ್ಟು ಸಂಗತಿಗಳನ್ನು ಕಲಿತಿರುವುದಾಗಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಸುದೀಪ್-ತನಿಷಾ ಮಾತುಕತೆ ವೇಳೆ ಈ ಅಂಶ ಎಲ್ಲರ ಗಮನಕ್ಕೆ ಕೂಡ ಬಂದಿದೆ. ಕೆಲವೊಮ್ಮೆ ಸ್ವತಃ ತಪ್ಪ ಮಾಡಿ, ಇನ್ನೂ ಕೆಲವೊಮ್ಮೆ ಬೇರೆಯವರ ತಪ್ಪಿನಿಂದ ಕಲಿಯುವುದಕ್ಕಿಂತಲೂ ಹೆಚ್ಚಾಗಿ ಅಲ್ಲಿದ್ದವರು, ತಾವು ಮಾಡಿದ್ದು ಸರಿಯೋ ತಪ್ಪೋ ಎಂಬುದನ್ನು ನಿರೂಪಕ ಸುದೀಪ್ ಅವರಿಂದಲೇ ಅರಿತುಕೊಂಡು ಕಲಿತಿದ್ದೇ ಹೆಚ್ಚು ಎನ್ನಬಹುದು.
ಶೆಟ್ರೇ, ನೀವು ಎಷ್ಟು ಸಲ ಅಂತ ನಮ್ ಹೃದಯ ಗೆಲ್ತೀರಾ? ನಿಮ್ಮನ್ನ ನೋಡಿ ತುಂಬಾ ಕಲಿಯೋದಿದೆ ಅಂದಿದ್ಯಾರು?
ನಟಿ ತನಿಷಾ ಅವರು ತಮ್ಮ ಪೋಸ್ಟ್ ಮೂಲಕ ಹೇಳಿರುವ ಮಾತುಗಳು ಕೂಡ ಇದೇ ಪಾಯಿಂಟ್ಸ್‌ಗಳನ್ನು ಹೇಳುತ್ತಿವೆ ಎನ್ನಬಹುದು. ಅವರು 'ನಿಮ್ಮಿಂದ ಲೈಫ್‌ನಲ್ಲಿ ಬಹಳಷ್ಟು ಕಲಿಯುತ್ತಾ ಇದ್ದೀನಿ' ಅಂದಿದ್ದಾರೆ. ಅಂದಹಾಗೆ, ಮತ್ತೆ ಬಿಗ್ ಬಾಸ್ ಕನ್ನಡ ಸೀಸನ್ 11 ಸದ್ಯದಲ್ಲೇ ಶುರುವಾಗಲಿದೆ. ಮತ್ತೆ ನಟ ಕಿಚ್ಚ ಸುದೀಪ್ ಬಿಗ್ ಬಾಸ್ ಮೂಲಕ ಕಿರುತೆರೆ ಪ್ರೇಕ್ಷಕರು ಹಾಗು ಬಿಗ್ ಬಾಸ್ ಅಭಿಮಾನಿಗಳ ಮುಂದೆ ಬರಲಿದ್ದಾರೆ.