
ಕೆ ಆರ್ ಜಿ ಸ್ಟುಡಿಯೋಸ್ (KRG Studios)ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಉತ್ತರಕಾಂಡ' ಚಿತ್ರಕ್ಕಾಗಿ ಚಿತ್ರ ತಂಡ ಇದೀಗ ಆಡಿಷನ್ ಆಯೋಜಿಸಿದೆ .
'ಉತ್ತರಕಾಂಡ' ಚಿತ್ರವು ಒಂದು ಕ್ರೈಂ ಡ್ರಾಮಾ ವಿಷಯಾಧಾರಿತ ಸಿನಿಮಾವಾಗಿದ್ದು, ಇದನ್ನು ರೋಹಿತ್ ಪದಕಿ ನಿರ್ದೇಶಿಸಲಿದ್ದಾರೆ. ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್, ಡಾಲಿ ಧನಂಜಯ, ಮೋಹಕ ತಾರೆ ರಮ್ಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಉತ್ತರ ಕರ್ನಾಟಕದ ಸೊಗಡನ್ನು ಹೊಂದಿರುವ ಈ ಚಿತ್ರಕ್ಕಾಗಿ ಉತ್ತರ ಕಾಂಡ (Uttara Kanda)ಚಿತ್ರ ತಂಡವು ಉತ್ತರ ಕರ್ನಾಟಕ ಭಾಗಗಳಲ್ಲಿ ಆಡಿಷನ್ ಆಯೋಜಿಸಿದೆ. ಮಾರ್ಚ್ 27 ವಿಜಯಪುರದಲ್ಲಿ ಹಾಗೂ 28 ಹುಬ್ಬಳ್ಳಿಯಲ್ಲಿ ಆಡಿಷನ್ ಆಯೋಜಿಸಿದೆ. 'ಆಡಿಷನ್'ನಲ್ಲಿ ಭಾಗವಹಿಸಲು ವಯೋಮಿತಿ 12ರಿಂದ 75 ವರ್ಷವಾಗಿದ್ದು, ನವ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.
ಪುನೀತ್ ರಾಜ್‌ಕುಮಾರ್ 'ಜಾಕಿ' ಫೈಟ್ ಬಗ್ಗೆ ವಿವಾದ; ರವಿ ವರ್ಮ ವಿರುದ್ಧ ಪೊಲೀಸ್ ಕಂಪ್ಲೇಂಟ್
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರವೇ ಉಳಿದಿದ್ದರು. ಇತ್ತಿಚೆಗೆ ಸಿನಿಮಾ ನಿರ್ಮಾಣಕ್ಕೂ ಕಾಲಿಟ್ಟಿರುವ ನಟಿ ರಮ್ಯಾ ಇದೀಗ 'ಉತ್ತರ ಕಾಂಡ' ಚಿತ್ರದ ಮೂಲಕ ಮತ್ತೆ ಸಿನಿಮಾ ನಟನೆಗೆ ಇಳಿಯಲಿದ್ದಾರೆ. ನಟ ಶಿವರಾಜ್‌ಕುಮಾರ್ (Shiva Rajkumar) ಹಾಗು ನಟ ಧನಂಜಯ್ (Dhanajay) ಜತೆ ರಮ್ಯಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಏರ್‌ಪೋರ್ಟಲ್ಲಿ ವೃದ್ಧರ ನೋಡಿದ್ರೆ ಶಂಕರ್ ಬ್ಯಾಗ್ ಕಿತ್ಕೊತಿದ್ದ: ಅರುಂಧತಿ ನಾಗ್
ಒಟ್ಟಿನಲ್ಲಿ, ಆಡಿಷನ್ ಮೂಲಕ ಉತ್ತರ ಕಾಂಡ ಚಿತ್ರಕ್ಕೆ ಉತ್ತರ ಕರ್ನಾಟಕದ ಹಲವು ಪ್ರತಿಭಾವಂತರು ಸೇರ್ಪಡೆ ಆಗಲಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಉತ್ತರ ಕರ್ನಾಟಕದ ಭಾಷೆ-ಜನರು ಮಿಂಚಲಿದ್ದಾರೆ ಎನ್ನಬಹುದು. ಆಡಿಷನ್ ಬಳಿಕ ಉತ್ತರ ಕಾಂಡ ಚಿತ್ರದ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ.
ಅಷ್ಟು ಚೆನ್ನಾಗಿ ಹಾಡುವ ಡಾ ರಾಜ್ ಇಷ್ಟು ದಿನ ಆ ಅವಕಾಶವನ್ನು ನಂಗೆ ಬಿಟ್ಟಿದ್ದರಲ್ಲಾ; ಪಿಬಿ ಶ್ರೀನಿವಾಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.