
ಈ ಸಿನಿಮಾದ ನಿರ್ದೇಶಕರ ಹೆಸರು ಘೋಷಿಸುವುದಕ್ಕೆ ಒಂದು ಕಾರ್ಯಕ್ರಮ ಏರ್ಪಾಡಾಗಿತ್ತು. ಆಕಾಶ್ ಶ್ರೀವತ್ಸ, ರಾಘು ಶಿವಮೊಗ್ಗ, ಚಂದ್ರಮೋಹನ್, ಕಿರಣ್ ಕುಮಾರ್ ಮತ್ತು ಗುರು ದೇಶಪಾಂಡೆ ಈ ಐವರು ನಿರ್ದೇಶಕರ ಹೆಸರನ್ನು ಅದ್ದೂರಿಯಾಗಿ ಘೋಷಿಸಲಾಯಿತು.
ಗಾಜನೂರಿನಲ್ಲಿ ಮಿಸ್ಸಿಂಗ್ ಕೇಸ್;ಸತ್ಯ ಕತೆ ಆಧರಿತ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ಧ್ರುವ ಸರ್ಜಾ!
ಆರಂಭದಲ್ಲಿ ಆಕಾಶ್ ಶ್ರೀವತ್ಸ ವಿವರವಾಗಿ ಮಾತನಾಡಿ ತಾನೊಬ್ಬ ನಿರ್ದೇಶಕನಷ್ಟೇ ಅಲ್ಲ ಒಳ್ಳೆಯ ಮಾತುಗಾರನೂ ಹೌದು ಎಂದು ಸಾಬೀತುಗೊಳಿಸಿದರು. ರಾಘು ಶಿವಮೊಗ್ಗ ನೇರ, ದಿಟ್ಟ, ನಿರಂತರ. ಒಬ್ಬ ಮುಗ್ಧನ ಪ್ರೇಮ, ಕಾಮದ ಕಥನ ಎಂದು ಹೇಳಿ ನಕ್ಕುಬಿಟ್ಟರು. ಚಂದ್ರಮೋಹನ್ ಮಾತ್ರ ಸೆನ್ಸ್ ಆಫ್ ಹ್ಯೂಮರ್ ಇರುವ ನಿರ್ದೇಶಕ. ಅವರ ಸಿನಿಮಾ ಕಾಮಿಡಿ ನೆರಳಲ್ಲಿ ಇರುವ ಥ್ರಿಲ್ಲರ್ ಎಂದರು. ಕಡೆಯಲ್ಲೊಂದು ಗುಂಡು ಹಾರುತ್ತದೆ, ಅದು ನನಗೇ ಬಿದ್ದರೂ ಬಿದ್ದಿರಬಹುದು ಎಂದು ನಗಿಸಿದರು. ಈಗಷ್ಟೇ ಚಿತ್ರರಂಗಕ್ಕೆ ಕಾಲಿಡುತ್ತಿರುವ ಕಿರಣ್‌ಕುಮಾರ್ ವಿನಯದಿಂದಲೇ ತನ್ನದು ಮೇಲ್ವರ್ಗ ಕೆಳವರ್ಗದ ಸಂಘರ್ಷ ಕಥನ ಎಂದರು. ನಿರ್ಮಾಪಕ ಕಮ್ ನಿರ್ದೇಶಕ ಎಲ್ಲರೂ ತಮ್ಮ ಸಿನಿಮಾಗೆ ಪ್ರಚಾರ ಕೊಡಬೇಕು ಎಂದು ವಿನಂತಿ ಮಾಡುತ್ತಾ ತಮ್ಮದು ಸೋಷಿಯಲ್ ಮೀಡಿಯಾ ಹಿನ್ನೆಲೆಯ ಕತೆ ಎಂದರು.
ನಿರ್ದೇಶಕರು ಹೆಸರು ಘೋಷಿಸುವ ಈ ಸಂದರ್ಭದಲ್ಲಿ ನಾಲ್ಕು ಕತೆಗಳ ಛಾಯಾಗ್ರಾಹಕ ಕಿರಣ್ ಹಂಪಾಪುರ ಮತ್ತು ಚಿತ್ರತಂಡದ ಬೆನ್ನೆಲುಬು ಮಂಜುನಾಥ್ ಸೈಲೆಂಟಾಗಿ ಕುಳಿತಿದ್ದರು. ತಾರಾಗಣದ ಬಗ್ಗೆ ಹೇಳಿ ಅಂದ್ರೆ ಇನ್ನೊಮ್ಮೆ ಹೇಳ್ತೀವಿ ಎಂದಿತು ಚಿತ್ರತಂಡ. ಸದ್ಯ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸಾಗಿದ್ದು ಬಿಟ್ಟರೆ ಉಳಿದ ವಿವರಗಳು ಲಭ್ಯವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.