
ನಿಧಿ ಬದಲು ನಿತ್ಯಾ ಮದುವೆಯಾಗಿದ್ರೂ ದ್ವೇಷ ತೋರದೆ ನಿತ್ಯಾ ಮೇಲೆ ಕಾಳಜಿ ತೋರ್ತಿರುವ ಕರ್ಣ ಈಗ ಮನೆ ಮನೆಯ ಮಗ. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಕರ್ಣ ಸೀರಿಯಲ್ ಮೂಲಕ ಕಿರಣ್ ರಾಜ್ (Kiran Raj) ಅಭಿಮಾನಿಗಳಿಗೆ ಇನ್ನಷ್ಟು ಆಪ್ತರಾಗಿದ್ದಾರೆ. ಕರ್ಣ ಸೀರಿಯಲ್ ನಲ್ಲಿ ಡಾಕ್ಟರ್ ಕರ್ಣನ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾಗಿದೆ. ಈಗ ಕುದುರೆ ಜೊತೆ ಓಡುವ ಕಿರಣ್ ರಾಜ್ ಅವರನ್ನು ವೀಕ್ಷಕರು ಮೆಚ್ಚಿಕೊಳ್ಳಬೇಕಿದೆ. ಟೀಸರ್ ಯಶಸ್ಸು ನೋಡಿದ್ರೆ ಕಿರಣ್ ರಾಜ್ ಏರಿರುವ ಕುದುರೆ ಶರವೇಗದಲ್ಲಿ ಓಡುವ ಸಾಧ್ಯತೆ ದಟ್ಟವಾಗ್ತಿದೆ.
ಕನ್ನಡತಿ ಸೀರಿಯಲ್ ಮೂಲಕ ವೀಕ್ಷಕರ ಗಮನ ಸೆಳೆದಿದ್ದ ಕಿರಣ್ ರಾಜ್, ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಎರಡು ಸಿನಿಮಾ ಮಾಡಿದ್ದಾರೆ. ಆದ್ರೆ ಎರಡೂ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿರಲಿಲ್ಲ. ಆ ನಂತ್ರ ಕರ್ಣ ಸೀರಿಯಲ್ ಮೂಲಕ ಕಮಾಲ್ ಮಾಡಿದ್ದ ಕಿರಣ್ ರಾಜ್, ಯಾವ ಕ್ಯಾರೆಕ್ಟರ್ ಆದ್ರೂ ಸೈ ಎಂಬುದನ್ನು ಸಾಭೀತುಪಡಿಸಿದ್ದರು. ಈಗ ಮತ್ತೆ ಸ್ಯಾಂಡಲ್ ವುಡ್ ಗೆ ಭರ್ಜರಿ ಸಿನಿಮಾ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ಕಿರಣ್ ರಾಜ್ ಅಭಿನಯದ ಜಾಕಿ 42 ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಎರಡು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಪೋಸ್ಟ್ ಆಗಿರುವ ಜಾಕಿ 42 (jockey 42)ಸಿನಿಮಾ ಟೀಸರ್ 1 ಮಿಲಿಯನ್ ಗಿಂತಲೂ ಹೆಚ್ಚು ವೀವ್ಸ್ ಪಡೆದಿದೆ.
ಮದುವೆ ಸೀರೆಯುಟ್ಟು ರಾಜ್ಯ ಪ್ರಶಸ್ತಿ ಪಡೆದ ಮೇಘನಾ ರಾಜ್: 2017ರಲ್ಲೇ ಚಿರು ಹೇಳಿದ್ರಂತೆ ಈ ವಿಷ್ಯ!
ಕಿರಣ್ ರಾಜ್ ಸಿನಿಮಾದಲ್ಲಿ ಬೇರೆ ಬೇರೆ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಟೀಸರ್ ಅಧ್ಬುತವಾಗಿದ್ದು, ಸಿನಿಮಾಗೆ ಕಾಯ್ತೇವೆ ಅಂತ ಕಮೆಂಟ್ ಮಾಡಿದ್ದಾರೆ. ಕನ್ನಡಿಗರು ನೀಡಿದ ಅಭಿಮಾನಕ್ಕೆ ಕಿರಣ್ ರಾಜ್ ಧನ್ಯವಾದ ಅರ್ಪಿಸಿದ್ದಾರೆ. ಇನ್ಸ್ಟಾಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕಿರಣ್ ರಾಜ್, ಜಾಕಿ 42 ಟೀಸರ್ 1 ಮಿಲಿಯನ್ ವೀವ್ಸ್ ಪಡೆದಿದೆ. ಧನ್ಯವಾದಗಳು ಅಂತ ಪೋಸ್ಟ್ ಹಾಕಿದ್ದಾರೆ.
ಕುದುರೆ ರೇಸ್ ಕಥೆಯ ಜಾಕಿ 42 ಸಿನಿಮಾಕ್ಕೆ ಗುರುತೇಜ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಅವರೇ ಕಥೆ ಬರೆದಿದ್ದು, ಕಿರಣ್ ರಾಜ್ ಜೊತೆ ಹೃತಿಕಾ ಶ್ರೀನಿವಾಸ್, ದೀಪಕ್ ರೈ, ಯುಕ್ತ, ಬಾಲ ರಾಜವಾಡಿ, ಯಶ್ ಶೆಟ್ಟಿ, ರಾಜೇಂದ್ರ ಕಾರಂತ್, ಶಾಂತಲಾ ಕಾಮತ್, ಮಧುಸೂದನ್ ರಾವ್, ಗಿರೀಶ್ ಹೆಗ್ಡೆ, ಚೇತನ್ ರೈ ಸೇರಿದಂತೆ ಅನೇಕರು ಕಲಾವಿದರು ಚಿತ್ರದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಿರಣ್ ರಾಜ್ ತಮ್ಮ ಸಿನಿಮಾ ಬಗ್ಗೆ ಅಪ್ಡೇಟ್ ನೀಡ್ತಾನೆ ಇದ್ದಾರೆ. ಎರಡು ದಿನಗಳ ಹಿಂದೆ ಸಿನಿಮಾಕ್ಕೆ ಬಳಸಿದ್ದ ಕುದುರೆ ಜೊತೆ ಅವರು ಫೋಸ್ ನೀಡಿದ್ದರು.
ಸಿಂಪಲ್ ಸುನಿ ಅವರ ಯೋಚನೆ ಚಿಕ್ಕದಾಗಿ ಕಂಡರೂ..: ಗತವೈಭವದ ಬಗ್ಗೆ ಶಿವಣ್ಣ ಹೇಳಿದ್ದೇನು?
ಹಿಂದಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಬಂದ ಕಿರಣ್ ರಾಜ್, ದೆವತಿ ಸೀರಿಯಲ್ ಮೂಲಕ ಕನ್ನಡಕ್ಕೆ ಬಂದ್ರು. ಚಂದ್ರಮುಖಿ, ಗುಂಡ್ಯಾನ ಹೆಂಡ್ತಿ ಸೇರಿದಂತೆ ಕನ್ನಡದ ಅನೇಕ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಕೈ ಹಿಡಿದಿದ್ದು ಕನ್ನಡತಿ. ಈಗ ಕರ್ಣನಾಗಿರುವ ಕಿರಣ್ ರಾಜ್ ನಿಜ ಜೀವನದಲ್ಲೂ ಕರ್ಣ. ಅವರು ವೃದ್ಧಾಶ್ರಮವನ್ನು ನಡೆಸುತ್ತಿದ್ದು, ನೊಂದವರಿಗೆ ಬೆಳಕು ನೀಡುವ ಕೆಲ್ಸ ಮಾಡ್ತಿದ್ದಾರೆ. ಸಿನಿಮಾ, ಸೀರಿಯಲ್ ಜೊತೆ ಕಿರಣ್ ರಾಜ್ ಪ್ರೊಡಕ್ಷನ್ ಹೌಸ್ ಕೂಡ ಶುರು ಮಾಡಿದ್ದು, ಅವರ ಮಾರ್ಗದರ್ಶನದಲ್ಲಿ ಸಿರೀಸ್ ಗಳು ಹೊರ ಬರ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.