ಕಾಡು, ಮಳೆಯಲ್ಲಿ ಆನೆ ಜತೆ ಸುದೀಪ್‌ ಹೆಜ್ಜೆ

Suvarna News   | Asianet News
Published : Dec 16, 2020, 09:55 AM ISTUpdated : Dec 16, 2020, 10:33 AM IST
ಕಾಡು, ಮಳೆಯಲ್ಲಿ ಆನೆ ಜತೆ ಸುದೀಪ್‌ ಹೆಜ್ಜೆ

ಸಾರಾಂಶ

ಆನೆಯನ್ನು ಬಳಸಿ ಇಡೀ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಗಜರಾಜನ ಜೊತೆ ಕಿಚ್ಚ ಸ್ಟೆಪ್ ಹಾಕಲಿದ್ದಾರೆ..

ಸಿನಿಮಾಗಳಲ್ಲಿ ನಿಜವಾದ ಪ್ರಾಣಿಗಳ ಬಳಕೆ ತುಂಬಾ ದುಬಾರಿ ಮಾತ್ರವಲ್ಲ, ಅನುಮತಿ ಸಿಗುವುದೇ ಕಷ್ಟವಾಗಿದೆ. ಹೀಗಾಗಿ ತೆರೆ ಮೇಲೆ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ ಎಂದರೆ ಅದು ಗ್ರಾಫಿಕ್ಸ್‌ ಎನ್ನುವ ಮಟ್ಟಿಗೆ ತೆರೆಯನ್ನು ತಂತ್ರಜ್ಞಾನ ಆವರಿಸಿಕೊಂಡಿದೆ.

ಆದರೆ, ಇಂಥ ಹೊತ್ತಿನಲ್ಲೂ ಕನ್ನಡದ ಸಿನಿಮಾದಲ್ಲಿ ಆನೆಯನ್ನು ಬಳಸಿ ಇಡೀ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಹೌದು, ನಟ ಸುದೀಪ್‌ ಅವರ ಅಭಿನಯದ, ಅನೂಪ್‌ ಭಂಡಾರಿ ನಿರ್ದೇಶನದ ‘ಫ್ಯಾಂಟಮ್‌’ ಚಿತ್ರದ ಹಾಡಿನಲ್ಲಿ ಗಜರಾಜ ದರ್ಶನವಾಗುತ್ತಿದೆ. ಇಡೀ ಹಾಡಿನಲ್ಲಿ ಆನೆ ಹೆಜ್ಜೆಗಳ ಸದ್ದು ಕೇಳಿಸಲಿದೆ.

ಕರ್ನಾಟಕದ ಯುವತಿಯರಿಗೆ 'ಯುವರತ್ನ' ನಾಯಕಿಯ ಹೊಸ ಚಾಲೆಂಜ್

ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ ಅವರ ಸಾರಥ್ಯದಲ್ಲಿ ಕೇರಳದಲ್ಲಿ 5 ದಿನಗಳ ಕಾಲ ಈ ಹಾಡಿನ ಶೂಟಿಂಗ್‌ ನಡೆಯಲಿದೆ. ಸಹಜವಾದ ಕಾಡು ಹಾಗೂ ಮಳೆ ಸೆಟ್‌ ಮಧ್ಯೆ ಈ ಹಾಡಿನ ಶೂಟಿಂಗ್‌ ಮಾಡಲಾಗುತ್ತಿದೆ. ಇನ್ನೂ ವಿಶೇಷ ಎಂದರೆ ಈ ಹಾಡು ಆನೆ, ಸುದೀಪ್‌, ಮತ್ತೊಂದು ಪ್ರಮುಖ ಪಾತ್ರದ ಸುತ್ತ ಸಾಗಲಿದೆ. ಆ ಪಾತ್ರ ಯಾವುದು ಎಂಬುದು ತೆರೆ ಮೇಲೆಯೇ ನೋಡಬೇಕಂತೆ.

ಇನ್ನೂ ಈ ಹಾಡು ಪೂರ್ತಿ ಭಾವುಕತೆಯ ನೆರಳಿನಲ್ಲಿ ಮೂಡಿ ಬರಲಿದೆ. ವಿಜಯ್‌ ಪ್ರಕಾಶ್‌ ಹಾಡಿರುವ ಈ ಹಾಡಿನ ಬಗ್ಗೆ ಸ್ವತಃ ಸುದೀಪ್‌ ಅವರು ಕೂಡ ವಿಶೇಷವಾದ ಕಾಳಜಿಯನ್ನು ಇಟ್ಟುಕೊಂಡು ಚಿತ್ರೀಕರಣ ಮಾಡಲಾಗುತ್ತಿದೆಯಂತೆ. ‘ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬಳಸುವುದೇ ಕಷ್ಟವಾಗಿದೆ. ದುಬಾರಿ ಮೇಕಿಂಗ್‌ ಒಂದು ಕಡೆಯಾದರೆ, ಪ್ರಾಣಿಗಳನ್ನು ಬಳಸಲು ಹತ್ತಾರು ಕಾನೂನುಗಳನ್ನು ಅನುಸರಿಸಬೇಕಿದೆ.

ರಜನಿ ದರ್ಬಾರ್ ಮೀರಿಸಿದ KGF2: ದಾಖಲೆಯ ಟ್ವೀಟ್

ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಲ್ಲಿ ನಿಜವಾದ ಪ್ರಾಣಿಗಳು ಕಾಣಿಸುತ್ತಿಲ್ಲ. ಆದರೆ, ನಮ್ಮ ಚಿತ್ರದ ಹಾಡೊಂದಕ್ಕೆ ಆನೆ ಅಗತ್ಯವಾಗಿ ಬೇಕಿತ್ತು. ಹೀಗಾಗಿ ದುಬಾರಿ ಆದರೂ ಹಾಡಿಗೆ ಆನೆಯನ್ನು ಕರೆತಂದಿದ್ದೇವೆ. ಹಾಡು ತುಂಬಾ ಚೆನ್ನಾಗಿ ಮೂಡಿ ಬರಲಿದೆ. ಈಗಾಗಲೇ ಹಾಡಿನ ಚಿತ್ರೀಕರಣ ಆರಂಭವಾಗಿದೆ’ ಎನ್ನುತ್ತಾರೆ ನಿರ್ಮಾಪಕ ಜಾಕ್‌ ಮಂಜು.

ವಿಶ್ವದ ಪ್ರತಿಷ್ಟಿತ ಅಚ್ಚರಿಗಳಲ್ಲೊಂದು ಬುರ್ಜ್‌ ಖಲೀಫಾ ಕಟ್ಟಡ. ಈಗ ಇದೇ ಬಿಲ್ಡಿಂಗ್ ಆವರಣದಲ್ಲಿ ವಿಕ್ರಾಂತ್ ರೋಣನ ಹಾಡುಗಳು ಬಿಡುಗಡೆಯಾಗಲಿದೆ. ಈ ಮೂಲಕ ಕಿಚ್ಚನ ಫ್ಯಾಂಟಮ್‌ ವರ್ಲ್ಡ್‌ ಫೇಮಸ್‌ ಆಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?