ನಟನೆಯಿಂದ ಸುದೀಪ್‌ ನಿವೃತ್ತಿ? ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಕಿಚ್ಚನ ಹೇಳಿಕೆ- ಹೇಳಿದ್ದೇನು ಕೇಳಿ..

Published : Jan 14, 2025, 04:41 PM ISTUpdated : Jan 14, 2025, 05:10 PM IST
ನಟನೆಯಿಂದ ಸುದೀಪ್‌ ನಿವೃತ್ತಿ? ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಕಿಚ್ಚನ ಹೇಳಿಕೆ- ಹೇಳಿದ್ದೇನು ಕೇಳಿ..

ಸಾರಾಂಶ

37 ವರ್ಷಗಳ ಸಿನಿ ಪಯಣದ ನಂತರ ನಾಯಕ ನಟನಾಗಿ ನಿವೃತ್ತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಕಿಚ್ಚ ಸುದೀಪ್. ಪೋಷಕ ಪಾತ್ರಗಳು ತಮಗೆ ಸೂಕ್ತವಲ್ಲ, ನಾಯಕನಾಗಿ ಮಿಂಚಿದವರು ಬೇರೆಯವರಿಗಾಗಿ ಕಾಯುವುದು ಸರಿಯಲ್ಲ ಎಂದಿದ್ದಾರೆ. ಸಿನಿಮಾದಿಂದ ದೂರವಾಗುವುದಿಲ್ಲ, ನಿರ್ದೇಶನ, ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ ಎಂದೂ ಸುಳಿವು ನೀಡಿದ್ದಾರೆ.

ಬಿಗ್‌ಬಾಸ್‌ನ 11 ಸೀಸನ್‌ಗಳನ್ನು ಮುಗಿಸಿ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳುವ ನಿರ್ಧಾರ ಮಾಡಿ ಅಭಿಮಾನಿಗಳಿಗೆ ಶಾಕ್‌ ನೀಡಿದ್ದ ನಟ ಸುದೀಪ್‌, ಇದೀಗ ಸಿನಿಮಾದಿಂದಲೇ ನಿವೃತ್ತಿ ಪಡೆಯುವ ಮಾತಮಾಡಿ ಸಂಚಲನ ಸೃಷ್ಟಿಸಿದ್ದಾರೆ!  1997 ರಲ್ಲಿ ತಾಯವ್ವ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸುದೀಪ್‌ ಅವರು, ಸಿನಿಮಾದಲ್ಲಿ 27 ವರ್ಷಗಳ ಸುದೀರ್ಘ ಪಯಣ ಮಾಡಿದ್ದಾರೆ. ನಾಯಕನಾಗಿಯೇ ಮಿಂಚಿದ್ದಾರೆ.   2000ರಲ್ಲಿ ಬಿಡುಗಡೆಗೊಂಡ  ಸ್ಪರ್ಶ ಚಿತ್ರದ ಮೂಲಕ ಫೇಮಸ್‌ ಆಗಿದ್ದ ಸುದೀಪ್‌ ಅವರು ಕಿಚ್ಚ ಸುದೀಪ್‌ ಆಗಿದ್ದು, 2003ರಲ್ಲಿ ಬಿಡುಗಡೆಗೊಂಡ ಕಿಚ್ಚ ಚಿತ್ರದಿಂದ.  

ಅವರ ಮ್ಯಾಕ್ಸ್‌ ಚಿತ್ರ ಬಿಡುಗಡೆಗೊಂಡಿದ್ದು, ಇನ್ನೂ ಕೆಲವು ಚಿತ್ರಗಳಿಗೆ ಅಭಿಮಾನಿಗಳು ಕಾದು ಕುಳಿತಿರುವ ನಡುವೆಯೇ, ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ರಾಘವೇಂದ್ರ ಚಿತ್ರವಾಣಿ ಯೂಟ್ಯೂಬ್‌ಗೆ ನೀಡಿರುವ ಸಂದರ್ಶನದಲ್ಲಿ ಸುದೀಪ್‌ ಅವರು, ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದು, ಇದೀಗ ಅಭಿಮಾನಿಗಳಲ್ಲಿ ಹಲ್‌ಚಲ್‌ ಸೃಷ್ಟಿಸಿದೆ.  ಒಂದು ಕಾಲದಲ್ಲಿ ನಾಯಕ ನಟರಾಗಿ ಮಿಂಚಿದವರು ಸಮಯ ಕಳೆದಂತೆ ಪೋಷಕ ಪಾತ್ರಗಳಿಗೆ ಶಿಫ್ಟ್‌ ಆಗುವುದು ಸಾಮಾನ್ಯ. ಆದರೆ, ನನಗೆ ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪ ಇಂಥ ಯಾವುದೇ ಪಾತ್ರ ಸೂಟ್‌ ಆಗಲ್ಲ. ಅದಕ್ಕಿಂತಲೂ ಹೆಚ್ಚಾಗಿ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದೇನೆ, ಇಂಥ ಪಾತ್ರಗಳನ್ನು ಮಾಡುವುದಿಲ್ಲ. ನಮಗೆ ಏನಾದರೂ ಹೊಸದನ್ನ ಮಾಡಬೇಕು ಅನಿಸುತ್ತೆ. ಅಷ್ಟಕ್ಕೂ ಪ್ರತಿಯೊಬ್ಬ ನಟರಿಗೂ ಒಂದು ಟೈಮ್‌ಲೈನ್‌ ಅನ್ನೋದು ಇರುತ್ತಲ್ಲ, ಅದೇ ರೀತಿ ಹೀರೋಗೂ ಇರುತ್ತೆ ಎನ್ನುವುದು ನನ್ನ ಅನಿಸಿಕೆ ಎನ್ನುವ ಮೂಲಕ ಸಿನಿಮಾ ರಂಗ ಸಾಕು ಎನ್ನುವ ರೀತಿ ಪರೋಕ್ಷವಾಗಿ ಮಾತನಾಡಿದ್ದಾರೆ. 

ಮುಂದಿನ ಬಿಗ್‌ಬಾಸ್‌ಗೂ ಸುದೀಪ್‌ದ್ದೇ ಸಾರಥ್ಯ? Let Me See ಎನ್ನೋ ಮೂಲಕ ನಟ ಕೊಟ್ಟ ಸುಳಿವೇನು?

  ಸಮಯ ಕಳೆದಂತೆ ಕೊನೆಗೆ ಹೀರೋಗಳೂ ಬೋರ್ ಆಗಿಬಿಡುತ್ತಾರೆ. ನಾಯಕನಾಗಿ ನಾನು ಯಾರನ್ನೂ ನನ್ನ ಸೆಟ್‌ನಲ್ಲಿ ಕಾಯುವಂತೆ ಮಾಡಿಲ್ಲ. ಒಂದು ವೇಳೆ ಪೋಷಕ ಪಾತ್ರವನ್ನು ಮಾಡಿದರೆ, ನಾನು ಬೇರೆಯವರಿಗಾಗಿ ಕಾಯುತ್ತಾ ಕುಳಿತುಕೊಳ್ಳಲು ಬಯಸುವವನಲ್ಲ. ಏಕೆಂದರೆ,  ಸಾಮಾನ್ಯವಾಗಿ ನಾನು ಶೂಟಿಂಗ್‌ ಸೆಟ್‌ಗಳಿಗೆ ಬೇಗನೇ ಹೋಗುವವನು. ಮತ್ತೊಬ್ಬರನ್ನು ಕಾಯಿಸಬಾರದು ಎನ್ನುವುದು ನನ್ನ ಅನಿಸಿಕೆ. ಆದರೆ ಪೋಷಕ ಪಾತ್ರಗಳನ್ನು ಮಾಡಿದರೆ, ಬೇರೆಯವರಿಗೆ ಕಾಯೋದು ನನ್ನಿಂದ ಆಗಲ್ಲ ಎಂದಿದ್ದಾರೆ ಕಿಚ್ಚ ಸುದೀಪ್‌. ಅಂದ ಮಾತ್ರಕ್ಕೆ ಪೋಷಕ ಪಾತ್ರದ ಬಗ್ಗೆ ನಾನು ಏನೂ ವಿರೋಧ ಹೇಳುತ್ತಿಲ್ಲ.  ಪೋಷಕ ನಟನಾಗಿ ಸೈರಾ ನರಸಿಂಹ ರೆಡ್ಡಿ, ದಬಾಂಗ್‌ ಸೇರಿದಂತೆ ಕೆಲ ಸಿನಿಮಾಳನ್ನು ಮಾಡಿರುವೆ.  ಹೀರೋ  ಪಾತ್ರನೇ ಬೇಕು ಅಂದಿದ್ರೆ ಇವೆಲ್ಲಾ ಮಾಡ್ತಿರಲಿಲ್ಲ. ಆ ಪಾತ್ರಗಳಲ್ಲೂ ತೃಪ್ತಿ ಕೊಟ್ಟಿವೆ ಎಂದಿದ್ದಾರೆ.
 
ಹಾಗಂತ ಸಿನಿಮಾದಿಂದ ಸಂಪೂರ್ಣವಾಗಿ ದೂರ ಆಗುತ್ತೇನೆ ಎಂದಲ್ಲ.  ಇನ್ನು ಮುಂದೆ ಸಿನಿಮಾಗಳನ್ನು ಮಾಡಬಹುದು,  ಡೈರೆಕ್ಷನ್‌, ಪ್ರೊಡ್ಯೂಸ್‌ ಕೂಡ ಮಾಡಬಹುದು. ಆದರೆ ಈ ಕುರಿತು ಇನ್ನೂ ನಿರ್ಧರಿಸಿಲ್ಲ.  ಸಿನಿಮಾಗಳು ನಮಗೆ ಬಹಳ ಹತ್ತಿರದಲ್ಲಿರುವುದಿರಂದ ನಾವು ಅದರಿಂದ ದೂರ ಆಗುತ್ತೇವೆ ಎಂದು ಹೇಳಲು ಆಗುವುದಿಲ್ಲವಲ್ಲ, ಬೇರೆ ರೂಪದಲ್ಲಿ ಕಾಣಿಸಿಕೊಳ್ಳಬಹುದು ಅಷ್ಟೇ ಎನ್ನುವ ಮೂಲಕ ಹೀರೋ ಪಾತ್ರಕ್ಕೆ ವಿದಾಯ ಹೇಳುವ ರೀತಿಯಲ್ಲಿ ಮಾತನಾಡಿದ್ದಾರೆ.  

ಅಮ್ಮನ 11ನೇ ದಿನ ಕಾರ್ಯದ ಸಮಯದಲ್ಲಿ ನಡೆದ ಪವಾಡದ ಬಗ್ಗೆ ನಟ ಸುದೀಪ್​ ಹೇಳಿದ್ದೇನು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ