ಮುಂದಿನ ಬಿಗ್‌ಬಾಸ್‌ಗೂ ಸುದೀಪ್‌ದ್ದೇ ಸಾರಥ್ಯ? Let Me See ಎನ್ನೋ ಮೂಲಕ ನಟ ಕೊಟ್ಟ ಸುಳಿವೇನು?
ಬಿಗ್‌ಬಾಸ್‌ನಿಂದ ಹೊರಕ್ಕೆ ಬರುವ ನಿರ್ಧಾರ ಪ್ರಕಟಿಸಿದ್ದ ಕಿಚ್ಚ ಸುದೀಪ್ ನಿರ್ಧಾರದಿಂದ ಹಿಂದಕ್ಕೆ ಸರಿದ್ರಾ? ಸಂದರ್ಶನದಲ್ಲಿ ಅವರು ಹೇಳಿದ್ದೇನು?
ಕಳೆದ ಅಕ್ಟೋಬರ್ 13ರಂದು ಏಕಾಏಕಿಯಾಗಿ ಬಿಗ್‌ಬಾಸ್‌ಗೆ ಸುದೀಪ್ ಅವರು ಗುಡ್ಬೈ ಹೇಳುವ ಮೂಲಕ ಅಸಂಖ್ಯ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 10 ಸೀಸನ್ ಪೂರೈಸಿ 11ನೇ ಸೀಸನ್ ಶುರುವಾಗಿ ಕೆಲವೇ ದಿನಗಳಲ್ಲಿ ಸುದೀಪ್ ಅವರು ಈ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎನ್ನುವ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಿದೆ. ಬಿಗ್ಬಾಸ್ನ ಸೀಸನ್ 11 ಇನ್ನೂ ಹಲವು ದಿನಗಳು ಇರುವ ಮೊದಲೇ ಈ ರೀತಿ ಘೋಷಿಸಿದ್ದಕ್ಕೆ ಇದು ಪಬ್ಲಿಸಿಟಿಯ ಸ್ಟಂಟ್ ಎಂದೂ ಸೋಷಿಯಲ್ ಮೀಡಿಯಾದಲ್ಲಿ ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದರು. ಮತ್ತೆ ಕೆಲವರು ಇದು ತಮಾಷೆಯ ಸುದ್ದಿ ಎಂದಿದ್ದರು. ಆದರೆ ಇಂಥ ವಿಷಯದಲ್ಲಿ ಸುದೀಪ್ ಅವರು ತಮಾಷೆ ಮಾಡುವುದಿಲ್ಲ, ಇದು ನಿಜವಾದ ಸುದ್ದಿಯೇ ಎನ್ನುವುದು ಕೊನೆಗೂ ತಿಳಿದಿತ್ತು.
ಕೊನೆಗೆ ಖುದ್ದು ಸುದೀಪ್ ಅವರೇ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ್ದರು. 'ಎಲ್ಲರನ್ನೂ ರಿಪೇರಿ ಮಾಡ್ತಾ ಕುಳಿತುಕೊಳ್ಳಲು ನಾನು ಬಂದಿಲ್ಲ, ಎಷ್ಟು ಅಂತ ಮಾಡೋದು, ಸಾಕಾಗಿದೆ ಇಷ್ಟು ವರ್ಷ ಮಾಡಿದ್ದು ಸಾಕು. ಬಿಗ್‌ಬಾಸ್ ಎಂದರೆ ಸುಮ್ಮನೇ ಅಲ್ಲ, ಸಿಕ್ಕಾಪಟ್ಟೆ ಎಫರ್ಟ್ ಹಾಕಬೇಕು. ಈ ಎಫರ್ಟ್ ಯಾರಿಗೂ ಅರ್ಥ ಆಗಲ್ಲ ಎಂದು ತುಂಬಾ ಬೇಸರ ವ್ಯಕ್ತಪಡಿಸಿದ್ದರು. ಕಳೆದ ಸಲದ ಉದಾಹರಣೆಯನ್ನೇ ಕೊಡುತ್ತೇನೆ ನೋಡಿ. ಚೆನ್ನೈನಿಂದ ಒಂದೂವರೆ ಗಂಟೆ ದೂರ ಇರುವ ಮಹಾಬಲಿಪುರಂನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬೆಂಗಳೂರಿನಿಂದ ನಾನು ಹೋಗುವ ವಿಷಯ ಹೇಳುವುದಾದರೆ, ಮನೆಯಿಂದ ಏರ್ಪೋರ್ಟ್ಗೆ ಒಂದೂವರೆ ಗಂಟೆ. ಬಳಿಕ ಒಂದು ಗಂಟೆ ವಿಮಾನಕ್ಕಾಗಿ ವೇಟಿಂಗ್. ಅಲ್ಲಿಂದ ಚೆನ್ನೈಗೆ ಹೋಗಲು ನಲವತ್ತು ನಿಮಿಷ. ಅಲ್ಲಿಂದ ಒಂದೂವರೆ ಗಂಟೆ ಮತ್ತೆ ಪ್ರಯಾಣ. ಅಲ್ಲಿ ಶೂಟಿಂಗ್ ನಡೆಯುತ್ತಿತ್ತು. ಇಷ್ಟು ಕಷ್ಟ ಪಡಬೇಕಾಗಿತ್ತು' ಎಂದಿದ್ದರು.
ಅಮ್ಮನ 11ನೇ ದಿನ ಕಾರ್ಯದ ಸಮಯದಲ್ಲಿ ನಡೆದ ಪವಾಡದ ಬಗ್ಗೆ ನಟ ಸುದೀಪ್ ಹೇಳಿದ್ದೇನು?
ಆದರೆ ಇದೀಗ ಇದೇ ಮೊದಲ ಬಾರಿಗೆ ಮುಂದಿನ ಬಿಗ್‌ಬಾಸ್‌ನಲ್ಲಿಯೂ ತಾವೇ ಇರುವ ಬಗ್ಗೆ ಚಿಕ್ಕದೊಂದು ಸುಳಿವು ನೀಡಿದ್ದಾರೆ. ಮಸ್ತ್ ಮಗಾ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ಸುದೀಪ್ ಅವರು ತಮ್ಮ ಮ್ಯಾಕ್ಸ್ ಚಿತ್ರ ಸೇರಿದಂತೆ ಜೀವನದ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಆಂಕರ್ ಬಿಗ್‌ಬಾಸ್ ಬಗ್ಗೆ ಕೇಳಿದ ಪ್ರಶ್ನೆಗೆ ಅದೊಂದು ರೀತಿ ರಾಜೀನಾಮೆ ಕೊಟ್ಟ ಹಾಗೆ. ನಾನು ಬರುವುದಿಲ್ಲ ಎಂದಿದ್ದೇನೆ. ಆದರೆ ಅವರು ಇನ್ನೂ ಅದನ್ನು ಎಕ್ಸೆಪ್ಟ್ ಮಾಡಲಿಲ್ಲ. ನೋಡೋಣ ಏನಾಗುತ್ತದೆ ಎಂದು, Let Me See ಎಂದಿದ್ದಾರೆ. 18-19 ಸ್ಪರ್ಧಿಗಳ ಕರಿಯಲ್, ಲೈಫ್ ನಮ್ಮ ಕೈಯಲ್ಲಿ ಇರುತ್ತದೆ. ಅದೆಲ್ಲಾ ಬ್ಯಾಲೆನ್ಸ್ ಮಾಡಬೇಕು, ಭಾನುವಾರ ಎದ್ದೆನೋ, ಬಿದ್ದೆನೋ ಎಂದು ಓಡಬೇಕು. ಸಿನಿಮಾಗಳು ಸ್ಲೋ ಆಗತ್ತೆ. ನೋಡೋಣ ಏನಾಗುತ್ತದೆ ಎಂದಿದ್ದಾರೆ. ಇದು ಮುಂದಿನ ಬಿಗ್‌ಬಾಸ್‌ಗೂ ಹೋಗುವ ಚಿಕ್ಕದೊಂದು ಸುಳಿವು ಎಂದೇ ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ.
ನಿಮ್ಮ ಜಾಗದಲ್ಲಿ ಬಿಗ್‌ಬಾಸ್‌ಗೆ ಯಾರು ಬರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ, ಸುದೀಪ್ ಅವರು, ನನ್ನ ಕಣ್ಣಿಗೆ ಯಾರೂ ಬರಲ್ಲ. ಸುದೀಪ್ ಜಾಗದಲ್ಲಿ ಬೇರೆ ಯಾರಾದರೂ ಬರಬಹುದು. ಅವರ ಸ್ಟೈಲ್ ಬೇರೆ ಇರಬಹುದು. ನನ್ನದೇ ಸ್ಟೈಲ್ ಅವರ ಮೇಲೆ ಹೇರಲು ಆಗುವುದಿಲ್ಲ. ಮಾತಿನ ಚಾತುರ್ಯತೆ ಎಲ್ಲಾ ಬೇರೆ ಇರಬಹುದು. ನನ್ನ ಹಾಗೆಯೇ ಅವರಿಗೆ ಮಾಡಿ ಎನ್ನಲೂ ಆಗುವುದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ, ಬಿಗ್‌ಬಾಸ್‌ಗೆ ಸುದೀಪ್ ಅವರೇ ಇರಬಹುದು ಎಂದು ಅವರ ಮಾತಿನಿಂದ ಊಹಿಸಲಾಗುತ್ತಿದೆ.
ರೊಮಾನ್ಸ್ ಸೀನ್ ಮಾಡುವಾಗ ಕೆಲವು ನಟಿಯರು ಕೊಡೋ ಕಾಟದ ಬಗ್ಗೆ ಕಿಚ್ಚ ಸುದೀಪ್ ಓಪನ್ ಮಾತು!
ಇನ್ನೊಂದು ಸಂದರ್ಶನದಲ್ಲಿ ಸುದೀಪ್ ಅವರು, ದಿಢೀರ್ ಟ್ವೀಟ್ ಮಾಡಿ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕಾರಣವನ್ನು ನೀಡಿದ್ದರು. ಅಂದು ತುಂಬಾ ದಣಿದಿದ್ದೆ. ಅದಕ್ಕಾಗಿ ಬೇಗ ಟ್ವೀಟ್ ಮಾಡಿದೆ, ಇಲ್ಲದೇ ಹೋದರೆ ನಾನು ನಿರ್ಧಾರ ಬದಲಿಸುವ ಸಾಧ್ಯತೆ ಇತ್ತು. ಆದ ಕಾರಣ ನಾನು ಹಾಕಿಕೊಂಡಿರುವ ಬದ್ಧತೆಯಂತೆ, ಏನು ಆಲೋಚನೆ ಬರುತ್ತದೋ ಅದನ್ನು ಅದೇ ಕ್ಷಣದಲ್ಲಿ ಮಾಡಿ ಮುಗಿಸುತ್ತೇನೆ. ಬಿಗ್‌ಬಾಸ್ ತುಂಬಾ ಗೌರವ, ಪ್ರೀತಿ ತಂದುಕೊಟ್ಟಿದೆ. ಆದರೆ ಹನ್ನೊಂದು ಸೀಸನ್ ಮುಗಿದಿದ್ದು, ಈಗ ಬೇರೆಯವರಿಗೆ ಅವಕಾಶ ಸಿಗಲಿ ಎಂದಿದ್ದರು. ಆದರೆ ಆ ದಿಢೀರ್ ನಿರ್ಧಾರದಿಂದ ಈಗ ಹೊರಕ್ಕೆ ಬಂದಂತೆ ಕಾಣಿಸುತ್ತಿದೆ.