ಕಿಚ್ಚ ಸುದೀಪ್​​ ಫೆವರೆಟ್​ ನಟ- ನಟಿ ಯಾರು ಗೊತ್ತಾ? ಯಾರೂ ಊಹಿಸದ ಹೆಸರು ಹೇಳಿದ ನಟ

Published : Apr 29, 2026, 05:41 PM IST
Kichcha Sudeep

ಸಾರಾಂಶ

'ಕೆಡಿ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಸುದೀಪ್, ತಮ್ಮ ನೆಚ್ಚಿನ ನಟ-ನಟಿಯರ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸಾರ್ವಕಾಲಿಕ ನೆಚ್ಚಿನ ನಟನ ಬಗ್ಗೆ ಮಾತನಾಡಿದರೆ, ನಟಿಯ ವಿಚಾರದಲ್ಲಿ, ಬಾಲಿವುಡ್ ನಟಿ  ತಮ್ಮ ಫೇವರೆಟ್ ಎಂದು ಬಹಿರಂಗಪಡಿಸಿದ್ದಾರೆ. ಜೊತೆಗೆ, ಚಿತ್ರರಂಗದ ಸದ್ಯದ ಸ್ಥಿತಿ ಮತ್ತು 'ಕೆಡಿ' ಚಿತ್ರದ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಯಾರವರು?

ಸುದೀಪ್​ ಅವರು ಅತಿಥಿ ಪಾತ್ರದಲ್ಲಿ ಇರುವ ಕೆಡಿ (KD Movie) ನಾಳೆ ಅಂದರೆ ಏಪ್ರಿಲ್​ 30ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದರ ಪ್ರಚಾರದಲ್ಲಿ ನಟ ಸುದೀಪ್​ ಕೂಡ ಭಾಗಿಯಾಗಿದ್ದಾರೆ. ಇದಾಗಲೇ ಪತ್ರಿಕಾಗೋಷ್ಠಿಯಲ್ಲಿ ಸುದೀಪ್​ ಅವರು, ಈ ಸಿನಿಮಾದಲ್ಲಿ ನನ್ನದು ಅತಿಥಿ ಪಾತ್ರ. ಧ್ರುವ ಹೀರೋ. ಅವರು 130 ದಿನ ನಟಿಸಿದ್ದಾರೆ. ನಾನು 3 ದಿನ ಮಾತ್ರ ನಟಿಸಿದ್ದೇನೆ. ಪ್ರೇಮ್ ನನ್ನ ಕುಟುಂಬದ ಭಾಗ, ಧ್ರುವ ನನ್ನ ಸಹೋದರ. ಅವರಿಬ್ಬರಿಗಾಗಿ ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ’ ಎಂದು ‘ಕೆಡಿ’ ಚಿತ್ರದ ಕಾಲಭೈರವ ಪಾತ್ರಧಾರಿ ಎಂದು ಹೇಳಿದ್ದಾರೆ.

ಯಾವ ನಟ-ನಟಿ ಇಷ್ಟ?

ಇವೆಲ್ಲವುಗಳ ನಡುವೆಯೇ, ಸುದೀಪ್​ ಅವರ ಸಂದರ್ಶನದ ಭಾಗವೊಂದು ವೈರಲ್​ ಆಗಿದೆ. ಅಷ್ಟಕ್ಕೂ ಸುದೀಪ್​ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಅವರ ಒಂದೇಒಂದು ದರ್ಶನಕ್ಕಾಗಿ ಹಂಬಲಿಸುವ ಫ್ಯಾನ್ಸ್ ಕೂಡ ಸಾಕಷ್ಟು ಇದ್ದಾರೆ. ಅಷ್ಟೆಲ್ಲಾ ಅಭಿಮಾನಿಗಳನ್ನು ಹೊಂದಿರುವ ಸುದೀಪ್​ ಅವರಿಗೂ ಯಾರಾದ್ರೂ ಫೆವರೆಟ್​ ನಟ- ನಟಿ ಅಂತ ಇರಬೇಕಲ್ವಾ? ಅದೇ ಪ್ರಶ್ನೆಯನ್ನು ಸುದೀಪ್​ ಅವರಿಗೆ ಕೇಳಿದಾಗ, ಅವರು ಕುತೂಹಲದ ಉತ್ತರ ನೀಡಿದರು.

ಬಾಲಿವುಡ್​ ನಟಿ

ಅಷ್ಟಕ್ಕೂ ಸುದೀಪ್​ ಅವರ ಫೆವರೆಟ್​ ಹೀರೋ ವಿಷ್ಣುವರ್ಧನ್​ ಅವರಂತೆ. ಯಾರೇ ಬಂದರೂ ಸದಾ ಇವರೇ ನನ್ನ ಫೆವರೆಟ್​ ಎಂದು ಸುದೀಪ್​ ಹೇಳಿದ್ದಾರೆ. ಆದರೆನಟಿಯ ವಿಷಯದಲ್ಲಿ ಮಾತ್ರ ಸ್ವಲ್ಪ ಕುತೂಹಲ ಇದೆ. ಅದೇನೆಂದರೆ ಫೆವರೆಟ್ ನಟಿಯ ವಿಷಯಕ್ಕೆ ಬಂದರೆ, ಸ್ಯಾಂಡಲ್​ವುಡ್​ನಲ್ಲಿ ಮಾಲಾಶ್ರೀ ಎಂದಿರೋ ಸುದೀಪ್​, ಒಟ್ಟಾರೆಯಾಗಿ ನನ್ನ ಫೆವರೆಟ್​ ಯಾರು ಎಂದು ಹೇಳುವುದಾದರೆ ಅವ್ರು ಬಾಲಿವುಡ್​ ನಟಿ ಕಾಜೋಲ್​ ಎಂದು ಹೇಳಿದ್ದಾರೆ.

ಕೆಡಿ ಕುರಿತು

ಇನ್ನು ಕೆಡಿ ಚಿತ್ರದ ಕುರಿತು ಹೇಳುವುದಾದರೆ, ಸುದೀಪ್​ ಅವರು ಹೇಳಿದಂತೆ, ‘ಪ್ರೇಮ್‌ ಪ್ಯಾಷನೇಟ್‌ ನಿರ್ದೇಶಕ. ಸದಾಕಾಲ ಒಳ್ಳೆಯ ಸಿನಿಮಾ ಕೊಡೋಕೆ ಪ್ರಯತ್ನ ಮಾಡುತ್ತಾರೆ. ಅವರು ಒಬ್ಬ ವ್ಯಕ್ತಿಯಾಗಿ ನನಗಿಷ್ಟ. ವ್ಯಕ್ತಿ ಇಷ್ಟವಾದಮೇಲೆ ನಾನು ಏನು ಬೇಕಾದರೂ ಮಾಡುತ್ತೇನೆ. ಹಾಗಂತ ನಾನೇನು ಉಪಕಾರ ಮಾಡಿಲ್ಲ. ಈ ಅದ್ದೂರಿ ಸಿನಿಮಾದಲ್ಲಿ ನಾನೂ ಇರೋಣ ಅಂತ ಮಾಡಿದೆ’ ಎಂದರು. ಪ್ರೇಮ್, ಧ್ರುವ ಸರ್ಜಾ, ರೀಷ್ಮಾ ನಾಣಯ್ಯ ಹಾಜರಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಕೂಡ ಮಾತನಾಡಿದರು. ಚಿತ್ರರಂಗದ ಕಷ್ಟದ ಸಂದರ್ಭದಲ್ಲಿದೆ. ನಮ್ಮ ದೇ ತಪ್ಪಿನಿಂದ ಹೀಗಾಗಿದೆ ಎಂದು ಸೆರಗ ಸರ್ಸೆ ಹಾಡಿನ ವಿವಾದದ ಬಗ್ಗೆ ಹೇಳಿದರು. ಈಗ ದೊಡ್ಡ ಸಿನಿಮಾ, ಸಣ್ಣ ಸಿನಿಮಾ ಎಲ್ಲಾ ಗೆಲ್ಲಬೇಕಿದೆ. ಹಾಗಾಗಿ ಸಣ್ಣ ಪುಟ್ಟ ತಪ್ಪು ಹುಡುಕುವುದು ಬಿಡಬೇಕಿದೆ. ದುರ್ಬೀನು ಹಾಕಿ ನೋಡುವುದು ಬಿಟ್ಟು ಸಿನಿಮಾ ಗೆಲ್ಲಿಸಬೇಕಿದೆ ಎಂದು ಕೋರಿಕೊಂಡರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಶ್-ಸುದೀಪ್ ಯಾರೂ ಈ ಲಿಸ್ಟ್‌ನಲ್ಲಿ ಯಾಕಿಲ್ಲ? ದಕ್ಷಿಣ ಭಾರತದಲ್ಲಿ ದುಬಾರಿ ಮನೆ ಹೊಂದಿರೋ ನಟ ಇವರೇ ನೋಡಿ!
ಕಾಮನ್‌ ಮ್ಯಾನ್‌ ಆದ ಕೆರೆಬೇಟೆ ಖ್ಯಾತಿಯ ಗೌರಿಶಂಕರ್‌: ಓಂ ಸಾಯಿ ಪ್ರಕಾಶ್ ಜೊತೆ ಹೊಸ ಸಿನಿಮಾ