
ಬೆಂಗಳೂರು (ಜು.5): ಬಿಲ್ಲ ರಂಗ ಭಾಷಾ ಸಿನಿಮಾ ಬೆನ್ನಲ್ಲಿಯೇ ಕಿಚ್ಚ ಸುದೀಪ್ ಮತ್ತೊಂದು ಚಿತ್ರ ಘೋಷಣೆ ಮಾಡಿದ್ದಾರೆ. ಕಿಚ್ಚ ಸುದೀಪ್ ಅಭಿನಯದ 47 ನೇ ಸಿನಿಮಾ ಘೋಷಣೆಯಾಗಿದೆ. ಮ್ಯಾಕ್ಸ್ ನಂತ್ರ ಮತ್ತೆ ವಿಜಯ್ ಕಾರ್ತಿಕೇಯ ಜೊತೆ ಕಿಚ್ಚ ಸುದೀಪ್ ಸಿನಿಮಾ ಮಾಡಲಿದ್ದಾರೆ. ಸುದೀಪ್,ವಿಜಯ್ ಕಾರ್ತಿಕೇಯ ಜೊತೆ ಮತ್ತೊಂದು ಚಿತ್ರ ಮಾಡೋದು ಖಚಿತವಾಗಿದೆ.
ಇದಕ್ಕೂ ಮುನ್ನ ಕಿಚ್ಚ ಸುದೀಪ್ ನಿರ್ದೇಶಕ ಚೇರನ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದರು, ಅದಕ್ಕೂ ಮುನ್ನ ವಿಜಯ್ ಕಾರ್ತಿಕೇಯ ಜೊತೆ ಸಿನಿಮಾ ಘೋಷಣೆ ಮಾಡಿದ್ದಾರೆ. ಮ್ಯಾಕ್ಸ್ ಸಕ್ಸಸ್ ಬೆನ್ನಲ್ಲೆ ಮ್ಯಾಕ್ಸ್ 2 ಸಿನಿಮಾ ಅನೌನ್ಸ್ ಮಾಡಬಹುದು ಎನ್ನಲಾಗಿತ್ತು.ಆದರೆ, ಖಾಸಗಿ ಹೋಟೆಲ್ ನಲ್ಲಿ ಸುದೀಪ್ ಅಭಿನಯದ 47ನೇ ಸಿನಿಮಾದ ಟೀಸರ್ ಹೊರಬಿದ್ದಿದ್ದು, ಇದು ಮ್ಯಾಕ್ಸ್ 2 ಸಿನಿಮಾ ಅಲ್ಲ ಎಂದು ಖಚಿತಪಡಿಸಿದ್ದಾರೆ.
ಟೀಸರ್ ರಿಲೀಸ್ ಮಾಡುವ ಮೂಲಕ ಕಿಚ್ಚನ 47 ನೇ ಸಿನಿಮಾ ರಿವಿಲ್ ಆಗಿದೆ. ಜುಲೈ 7 ರಿಂದ ಸಿನಿಮಾ ಶೂಟಿಂಗ್ ಪ್ಲಾನ್ ಮಾಡಲಾಗಿದ್ದು,ಪಕ್ಕಾ ಮಾಸ್ ಸಿನಿಮಾಗೆ ಮ್ಯಾಕ್ಸ್ ಜೋಡಿ ಸಜ್ಜಾಗಿದೆ. ಔಟ್ ಅಂಡ್ ಔಟ್ ಟೀಸರ್‌ಅನ್ನೂ ಕೂಡ ಚಿತ್ರತಂಡ ಅನಾವರಣ ಮಾಡಿದೆ.
ಸುದೀಪ್ ಚಿತ್ರವನ್ನು ತಮಿಳಿನ ಬಿಗ್ ಪ್ರೊಡಕ್ಷನ್ ಹೌಸ್ ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ವಿಷ್ಣುವರ್ಧನ್ ಜೊತೆ ಸತ್ಯಜ್ಯೋತಿ ಫಿಲಂಸ್ ಚಿತ್ರ ನಿರ್ಮಾಣ ಮಾಡಿತ್ತು. ಅದರೊಂದಿಗೆ 39 ವರ್ಷಗಳ ನಂತ್ರ ಮತ್ತೆ ಕನ್ನಡ ಚಿತ್ರನಿರ್ಮಾಣಕ್ಕೆ ಸತ್ಯಜ್ಯೋತಿ ಫಿಲಂಸ್ ಕೈಹಾಕಿದೆ.
ಟೀಸರ್ ಬಿಡುಗಡೆ ವೇಳೆ ಮಾತನಾಡಿಸದ ಸುದೀಪ್. 'ನಾನು ಈಗ ಮೂಲಕ ಭಾರತೀಯ ಚಿತ್ರರಂಗದ ಮಾರ್ಕೆಟ್ ನೋಡಿದ್ದೇನೆ. ತೆಲುಗಿನಲ್ಲಿ ಈಗ ಮಾಡಿದ್ರು ನಂತರವೂ ಕನ್ನಡ ಸಿನಿಮಾ ಮಾಡಿದ್ದೆ. ತೆಲುಗು,ತಮಿಳು ಮಾರ್ಕೆಟ್ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾವು ಕನ್ನಡ ಮಾರ್ಕೆಟ್ ಬಗ್ಗೆ ತಲೆಕೆಡಿಸಿಕೊಳ್ಳೊಣ ಎಂದಿದ್ದಾರೆ.
ಮ್ಯಾಕ್ಸ್ ನಂತ್ರ ನಾವು ಮತ್ತೆ ಒಂದಾಗಿದ್ದೇವೆ. ಇದು ಮ್ಯಾಕ್ಸ್ 2 ಅಲ್ಲ ಇದು ಬೇರೆ ಸಿನಿಮಾ. ಸದ್ಯಕ್ಕೆ ಮ್ಯಾಕ್ಸ್ 2 ಸಿನಿಮಾ ಕೈ ಬಿಟ್ಟಿದ್ದೀವಿ.ಈ ವರ್ಷ ಎರಡು ಸಿನಿಮಾ ಮಾಡಲಿದ್ದೇವೆ. ಬಿಲ್ಲರಂಗ ಬಾಷ ಸಿನಿಮಾ ಈ ವರ್ಷ ರಿಲೀಸ್ ಆಗಲ್ಲ. ಆದರೆ, ಈ ಸಿನಿಮಾ ಇದೇ ವರ್ಷ ಡಿಸೆಂಬರ್ 25 ಕ್ಕೆ ರಿಲೀಸ್ ಮಾಡಲಿದ್ದೇವೆ. ಅದರೊಂದಿಗೆ ಸೆಪ್ಟೆಂಬರ್ ಕೊನೆಯಲ್ಲಿ ಬಿಗ್ ಬಾಸ್ ಶುರು ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮ್ಯಾಕ್ಸ್ ಸಿನಿಮಾದ ರೀತಿಯಲ್ಲಿ ಈ ಸಿನಿಮಾದಲ್ಲೂ ಯಾವುದೇ ನಾಯಕಿ ಇರುವುದಿಲ್ಲ ಎಂದು ಸುದೀಪ್ ತಿಳಿಸಿದ್ದಾರೆ. ಮ್ಯಾಕ್ಸ್ ಸಿನಿಮಾದ ಕಥೆ ಮಾಡುವಾಗ ಅದರಲ್ಲಿ ನಾಯಕಿ ಪಾತ್ರವಿತ್ತು. ಕೊನೆಗೆ ನಾಯಕಿ ಪಾತ್ರವೇ ಇಲ್ಲದಿದ್ದರೆ ಹೇಗೆ ಎಂದು ಯೋಚನೆ ಮಾಡಿದೆವು. ಕಥೆಗೆ ಯಾವುದೇ ಅಡ್ಡಿಯಾಗದ ಕಾರಣ ನಾಯಕಿ ಪಾತ್ರ ಕೈಬಿಟ್ಟೆವು. ಪಾತ್ರಕ್ಕೆ ತೂಕ ಇಲ್ಲದೆ ಮೇಲೆ ಅಂಥ ಪಾತ್ರ ಇಡುವುದೇ ಬೇಡ ಎಂದು ತೀರ್ಮಾನಿಸಿ ನಾಯಕಿ ಪಾತ್ರವನ್ನು ಕೈಬಿಟ್ಟಿದ್ದೆವು ಎಂದು ಹೇಳಿದ್ದಾರೆ.
2023ರಲ್ಲಿ ಕಬ್ಜಾ, 2024ರಲ್ಲಿ ಮಾಕ್ಸ್ ಬಳಿಕ ಸುದೀಪ್ ಅವರ ಯಾವುದೇ ಸಿನಿಮಾ ಸದ್ಯ ಬಿಡುಗಡೆಯ ಲೂಪ್‌ನಲ್ಲಿಲ್ಲ. ಬಿಲ್ಲ ರಂಗ ಬಾಷಾ ಹಾಗೂ ಕಿಚ್ಚ 47 ಸಿನಿಮಾ ಘೋಷಣೆಯಾಗಿದ್ದು, ಇನ್ನೊಂದು ಸಿನಿಮಾದ ಘೋಷಣೆಯೂ ಶೀಘ್ರದಲ್ಲಿ ಆಗುವ ಸಾಧ್ಯತೆ ಇದೆ. ಕಿಚ್ಚ 48 ಸಿನಿಮಾ ಅವರ ನಿರ್ದೇಶನದಲ್ಲಿಯೇ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.