ಧನಂಜಯ್- ಅಮೃತಾ ಲವ್‌ ಸ್ಟೋರಿಗೆ ಗ್ರೀನ್‌ ಸಿಗ್ನಲ್‌ ಕೊಟ್ರಾ ಕಿಚ್ಚ ಸುದೀಪ್?; ಕೊನೆಗೂ ಸಿಗ್ತು ಮ್ಯಾಟ್ರು ಎಂದ ನೆಟ್ಟಿಗರು

Published : Mar 21, 2023, 11:40 AM ISTUpdated : Mar 21, 2023, 12:29 PM IST
ಧನಂಜಯ್- ಅಮೃತಾ ಲವ್‌ ಸ್ಟೋರಿಗೆ ಗ್ರೀನ್‌ ಸಿಗ್ನಲ್‌ ಕೊಟ್ರಾ ಕಿಚ್ಚ ಸುದೀಪ್?; ಕೊನೆಗೂ ಸಿಗ್ತು ಮ್ಯಾಟ್ರು ಎಂದ ನೆಟ್ಟಿಗರು

ಸಾರಾಂಶ

ಧನಂಜಯ್ ಜೊತೆ ಹ್ಯಾಟ್ರಿಕ್ ಸಿನಿಮಾ ಮಾಡಿದ ಅಮೃತಾ. ನಾಯಕಿ ಬಗ್ಗೆ ಒಂದು ಸಾಲು ಹೇಳಬೇಕು ಎಂದು ಒತ್ತಾಯ ಮಾಡಿದ ಕಿಚ್ಚ ಸುದೀಪ್...

ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಅಭಿನಯಿಸಿರುವ ಹೊಯ್ಸಳ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತ್ತು. ವಿಶೇಷ ಅತಿಥಿಯಾಗಿ ಆಗಮಿಸಿದ ಕಿಚ್ಚ ಸುದೀಪ್ ವೇದಿಕೆ ಮೇಲೆ ಧನು ಮತ್ತು ಅಮೃತಾ ಕಾಲೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

'ನಾಯಕಿ ಆಗುವುದಕ್ಕೂ ಮುನ್ನ ಮೊದಲು ವೇದಿಕೆ ಹಂಚಿಕೊಂಡಿದ್ದು ಕಿಚ್ಚ ಸುದೀಪ್ ಸರ್ ಜೊತೆ ಹೀಗಾಗಿ ಖುಷಿ ಮತ್ತು ಆತಂಕ ಆಗುತ್ತಿದೆ. ಕಿಚ್ಚ ಸುದೀಪ್‌ ಸರ್‌ ನನಗೆ ತುಂಬಾ ಲಕ್ಕಿ ಏಕೆಂದರೆ ಲವ್ ಮಾಕ್ಟೇಲ್ ಟ್ರೈಲರ್‌ ಲಾಂಚ್‌ ಕೂಡ ಅವರೇ ಮಾಡಿದ್ದು ಈಗ ಹೊಯ್ಸಳ ಚಿತ್ರಕ್ಕೂ ಭಾಗಿಯಾಗಿದ್ದಾರೆ. ಬಡವ ರಾಸ್ಕಲ್‌ ಚಿತ್ರಕ್ಕೆ ವಿತರಣೆ ಹಕ್ಕನ್ನು ಕೆಆರ್‌ಜಿ ಅವರು ತೆಗೆದುಕೊಂಡಿದ್ದರು ಈಗ ಅವರೇ ನಿರ್ಮಾಣ ಮಾಡುತ್ತಿರುವುದು ಖುಷಿಯ ವಿಚಾರ. ಧನಂಜಯ್ ಅವರ ಜೊತೆ ಇದು ನನ್ನ ಮೂರನೇ ಸಿನಿಮಾ ಹ್ಯಾಟ್ರಿಕ್ ಸಿನಿಮಾ. ಸಿನಿಮಾದಲ್ಲಿ ಧನು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ನಿಮ್ಮ ವೃತ್ತಿ ಬದುಕಿಗೆ ಇದು ಅದ್ಭುತ ಸಿನಿಮಾ ಆಗಲಿದೆ. ಗಂಗಾ ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಹಾಗೂ  ಇದೇ ಮೊದಲು ತುಂಬಾ ಜವಾಬ್ದಾರಿ ಇರುವ ಪಾತ್ರವನ್ನು ಅಯ್ಕೆ ಮಾಡಿಕೊಂಡಿರುವುದು. ಧನು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ ಅವರ ಎದುರು ನಟಿಸಲು ತುಂಬಾ ಭಯ ಆಗುತ್ತಿತ್ತು ಏಕಂದರೆ ಪೊಲೀಸ್ ಆಫೀಸರ್‌ ಹೆಂಡ್ತಿ ರೂಲ್‌ನ ಮ್ಯಾನೇಜ್ ಮಾಡುವುದು ಕಷ್ಟ ಆಯ್ತು. ನಮ್ಮ ನಿರ್ದೇಶಕರು ಭರತನಾಟ್ಯಕ್ಕೆ ಸೇರಿಸಿ ಟೀಚರ್ ರೂಲ್‌ನ ಅದ್ಭುತವಾಗಿ ತೆರೆ ಮೇಲೆ ತಂದಿದ್ದಾರೆ'  ಎಂದು ಅಮೃತಾ ವೇದಿಕೆ ಮೇಲೆ ಮಾತನಾಡಿದ್ದಾರೆ.

ಇಬ್ರು ಸ್ಟಾರ್ ನಟಿಯರ ನಡುವೆ ಜಗಳನೇ ಜಾಸ್ತಿ?; ರಮ್ಯಾ ಬಗ್ಗೆ ಮೌನ ಮುರಿದ ಅಮೃತಾ ಅಯ್ಯಂಗಾರ್

ವೇದಿಕೆ ಮೇಲೆ ಆಗಮಿಸಿದ ಕಿಚ್ಚ ಸುದೀಪ್ ಅಮೃತಾ ಮತ್ತು ಧನಂಜಯ್‌ರನ್ನು ಚೆನ್ನಾಗಿ ರೇಗಿಸಿದ್ದಾರೆ. ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿ ಅಂದ್ರೆ ಧನು ಧನು ಎಂದು ಹತ್ತು ಸಲ ಅವರ ಹೆಸರು ಹೇಳಿದ್ದಾರೆ. 'ಸಿನಿಮಾ ವಿಚಾರಕ್ಕಿಂತ ಧನಂಜಯ್ ಬಗ್ಗೆ ಹೆಚ್ಚಿಗೆ ಮಾತನಾಡಿದ್ದು ಅಮೃತಾ. ಪಾತ್ರವನ್ನು ಹೊಗಳುತ್ತಿದ್ರಾ ಅಥವಾ ಪರ್ಸನಲ್ ಆಗಿ ಹೇಳುತ್ತಿದ್ರಾ ಗೊತ್ತಿಲ್ಲ. ಏನೇ ಇರಲಿ ನಿಮ್ಮ ಮಾತುಗಳನ್ನು ಕೇಳಿ ಧನಂಜಯ್ ಖುಷಿ ಪಟ್ಟಿದ್ದಾರೆ. ಆದರೆ ಬೇಸರ ಆಗಿದ್ದು ಏನೆಂದರೆ ಧನು ನಿಮ್ಮ ಬಗ್ಗೆ ಒಂದು ಸಾಲು ಕೂಡ ಹೇಳಲಿಲ್ಲ. ಈಗ ಧನುಗೆ ಅವಕಾಶ ಕೊಡೋಣ ಅಮೃತಾ ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದಾರೆಂದು ಹೇಳಬೇಕು..ಅಮೃತಾ ಗುರು ಗುರು ಅಂತ ಶುರು ಮಾಡಿ ಧನಂಜಯ್ ಎನ್ನುತ್ತಿದ್ದರು ಆದರೆ ಅಮೃತಾ ಜೊತೆ ನಟಿಸಿ ಖುಷಿ ಆಯ್ತು ಅಂತ ಧನು ಹೇಳಲೇ ಇಲ್ಲ. ಹೊಯ್ಸಳ ಚಿತ್ರಕ್ಕೆ ಅಮೃತಾ ನಾಯಕಿ ಹೀಗಾಗಿ ನಾಯಕಿ ಬಗ್ಗೆ ಒಂದೆರಡು ಸಾಲು ಹೇಳಿ' ಎಂದು ಸುದೀಪ್ ವೇದಿಕೆ ಮೇಲೆ ಕಾಲೆಳೆಯುತ್ತಾರೆ. 'ಅಮೃತಾ ಅವರ ಜೊತೆ ಮೂರನೇ ಸಿನಿಮಾ ಮಾಡುತ್ತಿರುವುದು ತುಂಬಾ ಚೆನ್ನಾಗಿ ನಟಿಸಿದ್ದಾರೆ' ಎಂದು ಧನಂಜಯ್ ವೇದಿಕೆ ಮೇಲೆ ಹೇಳಿದ್ದಾರೆ. 

'ಪಿಸ್ತೂಲ್ ಇವನ ದೋಸ್ತಿ': ಧೂಳ್ ಎಬ್ಬಿಸಿದೆ 'ಹೊಯ್ಸಳ' ಸಿನಿಮಾದ ಹಾಡು

ತಕ್ಷಣವೇ ಸುದೀಪ್ 'ಯಾಕೆ ಅಮೃತಾ ನೀವು ಧನಂಜಯ್‌ ಜೊತೆನೇ ಸಿನಿಮಾ ಮಾಡುತ್ತಿರುವುದು? ಬೇರೆ ಕಲಾವಿದರಿಗೆ ಡೇಟ್‌ ಕೊಡಿ ಬೇರೆ ಕಲಾವಿದರಿಗೆ ಅವಕಾಶ ಕೊಡಿ. ನೀವು ಇಷ್ಟೆಲ್ಲಾ ಮಾಡಿದ್ದರೂ ನಿಮ್ಮ ಬಗ್ಗೆ ಒಂದು ಸಾಲು ಹೇಳುತ್ತಿಲ್ಲ. ನನ್ನ ಜೊತೆ ಸಿನಿಮಾ ಮಾಡಿದರೆ ನೀವು ಅರ್ಧ ಗಂಟೆ ನಿಮ್ಮ ಪಾತ್ರ ನಿಮ್ಮ ನಟನೆ ಬಗ್ಗೆ ಹೇಳುತ್ತಿದ್ದೆ. ಅಮೃತಾ ಮತ್ತು ಧನು ಕಾಂಬಿನೇಷನ್‌ ತುಂಬಾ ಚೆನ್ನಾಗಿದೆ' ಎಂದು ಸುದೀಪ್ ಹೇಳುತ್ತಾರೆ.

'ಅಮೃತಾ ಅವರ ಜೊತೆ ಸುದೀಪ್ ಸರ್ ನೀವು ಕೂಡ ಸಿನಿಮಾ ಮಾಡಬೇಕು ಆಕೆ ತುಂಬಾ ಒಳ್ಳೆಯ ಕಲಾವಿದೆ. ನಾನು ಅಮೃತಾ ಒಟ್ಟಿಗೆ ಮೂರು ಸಿನಿಮಾ ಮಾಡಲು ನಿರ್ಮಾಪಕರು ಕಾರಣ...ಪಾಪ್ ಕಾರ್ನ್‌ ಮಂಕಿ ಟೈಗರ್‌ ಸಿನಿಮಾ ನೋಡಿ ಶಂಕರ್‌ ಅವರು ಬಡವ ರಾಸ್ಕಲ್ ಚಿತ್ರಕ್ಕೆ ಅವಕಾಶ ಕೊಟ್ಟರು ಬಡವ ರಾಸ್ಕಲ್ ಹಿಟ್ ಆಯ್ತು ಅಂತ ಹೊಯ್ಸಳಾ ಚಿತ್ರಕ್ಕೆ ಯೋಗಿ ಮತ್ತು ಕಾರ್ತಿಕ್ ಅವಕಾಶ ಕೊಟ್ಟರು' ಎಂದು ಧನಂಜಯ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ