
ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದು
- ಫ್ಯಾಂಟಮ್ ಚಿತ್ರದ ಸೆಟ್‌ನಲ್ಲಿ ನಾನು ಸುದೀಪ್ ಅವರ ಜತೆ ಮಾತನಾಡುವಾಗ ಈ ಚಿತ್ರದ ಒಂದು ಸಾಲಿನ ಕತೆ ಹೇಳಿದೆ. ಕತೆ ಕೇಳಿದ ಅವರು ಪೂರ್ತಿ ಸ್ಕಿ್ರಪ್ಟ್ ರೆಡಿ ಮಾಡಿ. ಕಿಚ್ಚ ಬ್ಯಾನರ್‌ನಲ್ಲೇ ನಿರ್ಮಾಣ ಮಾಡೋಣ ಎಂದಿದ್ದಾರೆ.
'ಫ್ಯಾಂಟಮ್' ಹೊಸ ಪೋಸ್ಟರ್ ರಿಲೀಸ್; ಹೇಗಿದೆ ವಿಕ್ರಾಂತ್ ರೋಣ ಲುಕ್?
- ಅಶ್ವತ್ಥಾಮನಿಗೆ ಸಾವಿಲ್ಲ. ಮಹಾಭಾರತ ಮುಗಿದ ಮೇಲೆ ಆತ ಸತ್ತಿಲ್ಲ. ಆತ ಚಿರಂಜೀವಿ. ಒಂದು ವೇಳೆ ಅಶ್ವತ್ಥಾಮ ಇದ್ದರೆ ಈಗ ಎಲ್ಲಿರುತ್ತಾನೆ, ಹೇಗಿರುತ್ತಾನೆ, ಏನು ಮಾಡುತ್ತಿರುತ್ತಾನೆ ಎಂಬ ಯೋಚನೆಯೇ ಈ ಚಿತ್ರದ ಕತೆ.
- ಅಶ್ವತ್ಥಾಮ ಇದ್ದರೆ ಈಗಿನ ಪ್ರಪಂಚದಲ್ಲಿ ಇರಬೇಕು. ಇಲ್ಲದೆ ಹೋದರೆ ಆತನ ಪ್ರಪಂಚ ಯಾವುದು ಇರಲಿದೆ. ಕೆಲವರ ನಂಬಿಕೆಯಂತೆ ಅಶ್ವತ್ಥಾಮ ಇನ್ನೂ ಸತ್ತಿಲ್ಲ. ಅವನು ಈಗ ಏನೆಲ್ಲ ಮಾಡಲು ಸಾಧ್ಯ?
- ಯಾರು ಅಶ್ವತ್ಥಾಮನಾಗಲಿದ್ದಾರೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಸ್ಕಿ್ರಪ್ಟ್ ಪೂರ್ತಿ ಆದ ಮೇಲೆ ಆ ಬಗ್ಗೆ ಮಾತುಕತೆ ಮಾಡುತ್ತೇವೆ. ಸದ್ಯಕ್ಕೆ ಯಾರನ್ನೂ ಅಂದುಕೊಂಡಿಲ್ಲ.
ಕಿಚ್ಚನ ಮುಂದೆ 5 ಚಿತ್ರಗಳು ಕಾಯುತ್ತಿವೆ;ಫ್ಯಾಂಟಮ್ ನಂತರ ಸುದೀಪ್ ಸಿನಿಮಾ ಯಾವುದು?
- ಸುದೀಪ್ ಸೋದರಳಿಯ ಸಂಚಿತ್ ಈ ಚಿತ್ರದ ಮೂಲಕ ಲಾಂಚ್ ಆಗುತ್ತಿದ್ದಾರೆ ಎಂಬುದು ಸುಳ್ಳು. ಆ ಬಗ್ಗೆ ಯಾವ ತೀರ್ಮಾನವೂ ತೆಗೆದುಕೊಂಡಿಲ್ಲ.
- ಬಿಲ್ಲಾ ರಂಗಾ ಭಾಷಾ ಸಿನಿಮಾ ಕೂಡ ಚಿತ್ರೀಕರಣ ಆಗಲಿದೆ. ಯಾವುದು ಮೊದಲು, ಯಾವುದು ನಂತರ ಅನ್ನುವುದು ನಿರ್ಧಾರವಾಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.