
ಬಾಲಿವುಡ್ ಸೇರಿ ಸ್ಯಾಂಡಲ್‌ವುಡ್‌ನಲ್ಲಿಯೂ ಡ್ರಗ್ಸ್ ವಿಚಾರ ಸದ್ದು ಮಾಡುತ್ತಿದೆ. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ನಟಿ ರಾಗಿಣಿ, ಸಂಜನಾ ಸೇರಿ ಬರೀ ಹೆಣ್ಮಕ್ಕಳದ್ದೇ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪುರುಷ ಪ್ರಧಾನ ಸಮಾಜ ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು ಎಂದಿದ್ದಾರೆ.
"
ಡ್ರಗ್ ಮಾಫಿಯಾ ಬಗ್ಗೆ ನಟಿ ಪಾರುಲ್ ಯಾದವ್ ಟ್ವೀಟ್ ಮಾಡಿದ್ದು, ಪುರುಷ ಪ್ರಧಾನ ಸಮಾಜ ಎಂದು ಮತ್ತೆ ಫ್ರೂವ್ ಆಯ್ತು. ಈ ಮೂವರು ಮಹಿಳೆಯರು ಮಾತ್ರಾನಾ ಡ್ರಗ್ ಡೀಲಿಂಗ್ ನಲ್ಲಿ ಇರೋದು ? ಯಾವುದೇ ಕಾರ್ಪೊರೇಟ್ ಸಂಸ್ಥೆಯ ಕೆಲಸಗಾರರು ಈ ದಂಧೆಯಲಿಲ್ವಾ ? ಎಂದು ಪ್ರಶ್ನಿಸಿದ್ದಾರೆ.
ಡ್ರಗ್ಸ್ ಮಾಫಿಯಾ: ನಟಿಯರಾಯ್ತು ಈಗ ನಟರ ಸರದಿ, ಸ್ಟಾರ್ ಹೀರೋ ಹೆಸರು ರಿವೀಲ್?
ಬ್ಯುಸಿನೆಸ್ ಮ್ಯಾನ್ ಗಳು, ಕ್ರೀಡಾಪಟುಗಳು ಇಲ್ವಾ ? ಸಿನಿಮಾ ನಟರು ಕೂಡ ಈ ದಂಧೆಯಲ್ಲಿ ಇಲ್ಲವೇ ಇಲ್ವಾ ? ನಾವು ಲಿಂಗ ಸಮಾನತೆಯ ಹೋರಾಟವನ್ನು ಗೆದ್ದಿದ್ದೇವೆ ಎಂದು ಸಂಭ್ರಮಿಸಬೇಕಾ ಎಂದು ಕೇಳಿದ್ದಾರೆ.
ನಮ್ಮಲ್ಲಿ ಕೆಲವರನ್ನು ಮಾತ್ರ ಬೇಟೆಯಾಡುವುದು ಎಷ್ಟು ಸುಲಭ ಎಂದು ನಾವು ಅಳಬೇಕೇ? ಎಂದು ಪ್ರಶ್ನಿಸಿದ ನಟಿ ಹೆಣ್ಣು ಮಕ್ಕಳ ಹೆಸರು ಮಾತ್ರ ಕೇಳಿ ಬರ್ತಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.