ಸ್ಯಾಂಡಲ್‌ವುಡ್ ಬಾದ್‌ಶಾ ಮೆಚ್ಚಿದ ‘ಆಕ್ಟ್ 1978’ ಚಿತ್ರ

By Suvarna NewsFirst Published Nov 20, 2020, 2:03 PM IST
Highlights

ಕೊರೋನಾ ವೈರಸ್ ಲಾಕ್‌ಡೌನ್ ನಂತರ ಇದೇ ಮೊದಲು ಆ್ಯಕ್ಟ್ 1978 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 'ನಾತಿ ಚರಾಮಿ'ಯಂಥ ವಿಭಿನ್ನ ಕಥಾವಸ್ತುವುಳ್ಳು ಮಂಸೋರೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಿಚ್ಚು ಸುದೀಪ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಂಸೋರೆ ನಿರ್ದೇಶನದ ‘ACT 1978’ ಚಿತ್ರ ಬಿಡುಗಡೆಯಾಗಿದೆ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 

ಇದರ ನಡುವೆಯೇ ಸ್ಯಾಂಡಲ್‌ವುಡ್ ಬಾದ್ ಶಾ ‘ಆಕ್ಟ್ 1978’ ಚಿತ್ರಕ್ಕೆ ಫಿದಾ ಆಗಿದ್ದಾರೆ. ಸಿನಿಮಾ ನೋಡಿ ಖುಷಿ ಪಟ್ಟಿರೋ ಸುದೀಪ್ ಟ್ವಿಟರ್‌ನಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದು, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸುದೀಪ್ ಶುಭ ಹಾರೈಕೆಯಿಂದ ಇಡೀ ‘ಆಕ್ಟ್ 1978’ ಚಿತ್ರತಂಡದ ಸಂಭ್ರಮ ಇಮ್ಮಡಿಯಾಗಿದೆ.

 

Saw the film,,,fantastic effort and fabulous performances by all.
My bst wshs for the release ,team .
🤗🥂...cheers. pic.twitter.com/hxGfbL13vX

— Kichcha Sudeepa (@KicchaSudeep)

 

ಸೋಶಿಯಲ್ ಥ್ರಿಲ್ಲರ್ ಕಥಾಹಂದರ ‘ಆಕ್ಟ್ 1978’ ಚಿತ್ರದಲ್ಲಿದ್ದು, ಪ್ರತಿಯೊಬ್ಬ ಸಾಮಾನ್ಯ ಜನರಿಗೂ ಈ ಸಿನಿಮಾ ಕನೆಕ್ಟ್ ಆಗಲಿದೆ ಎನ್ನುವುದು ಚಿತ್ರ ತಂಡದ ಮಾತು. ಚಿತ್ರದಲ್ಲಿ ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರ ನಟಿಸಿದ್ದು, ಅಚ್ಯುತ್ ಕುಮಾರ್, ದತ್ತಣ್ಣ, ಬಿ.ಸುರೇಶ್, ಅವಿನಾಶ್, ಶ್ರುತಿ, ಸುಧಾ ಬೆಳವಾಡಿ, ಸಂಚಾರಿ ವಿಜಯ್, ಶೋಭರಾಜ್ ಸೇರಿದಂತೆ ಅನುಭವಿ ನಟ-ನಟಿಯರ ಚಿತ್ರದ ಮೌಲ್ಯ ಹೆಚ್ಚಿಸಿದ್ದಾರೆ.

ಆಕ್ಟ್ 1978 ಕಥೆ ಕೇಳಿದಾಗ ಒಪ್ಪದಿರಲು ಆಗಲಿಲ್ಲ: ಯಜ್ಞಾ ಶೆಟ್ಟಿ

ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ದೇವರಾಜ್.ಆರ್ ಬಂಡವಾಳ ಹೂಡಿದ್ದಾರೆ. ಸತ್ಯ ಹೆಗ್ಡೆ ಕ್ಯಾಮೆರಾ ನಿರ್ದೇಶನ, ರೋನಡ ಬಕ್ಕೇಶ್, ರಾಹುಲ್ ಶಿವಕುಮಾರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ‘ಆಕ್ಟ್ 1978’ ಚಿತ್ರ ಮಂಸೋರೆ ನಿರ್ದೇಶನದ ಮೂರನೇ ಸಿನಿಮಾವಾಗಿದ್ದು, ಈ ಹಿಂದೆ ನಿರ್ದೇಶಿಸಿದ್ದ ಹರಿವು, ನಾತಿಚರಾಮಿ ಸಿನಿಮಾಗಳು ಪ್ರಶಂಸೆ ಪಡೆದುಕೊಂಡಿದ್ದವು. ಅಂದ್ಹಾಗೆ ‘ಆಕ್ಟ್ 1978’ ಚಿತ್ರ ಅನ್ಲಾಕ್ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿರುವ ಮೊಟ್ಟ ಮೊದಲ ಸಿನಿಮಾವಾಗಿದೆ.

ಜನರ ಸಿಟ್ಟು, ನೋವು ಸಿನಿಮಾವಾಗಿದೆ: ಮಂಸೋರೆ
 

click me!