ಕಿಚ್ಚ 46 ಸಿನಿಮಾದ ಹೊಸ ಅಪ್‌ಡೇಟ್‌, ಈ ದಿನ ರಿಲೀಸ್‌ ಆಗುತ್ತೆ ಚಿತ್ರದ ಮೊದಲ ಟೀಸರ್‌!

Published : Jun 27, 2023, 08:03 PM ISTUpdated : Jun 29, 2023, 12:48 PM IST
ಕಿಚ್ಚ 46 ಸಿನಿಮಾದ ಹೊಸ ಅಪ್‌ಡೇಟ್‌, ಈ ದಿನ ರಿಲೀಸ್‌ ಆಗುತ್ತೆ ಚಿತ್ರದ ಮೊದಲ ಟೀಸರ್‌!

ಸಾರಾಂಶ

ಡಾರ್ಲಿಂಗ್ ಕೃಷ್ಣ, ನವೀನ್ ಶಂಕರ್, ಕಾಂತಾರ ನಟಿ ಸಪ್ತಮಿ ಗೌಡ ಮತ್ತು ಡಾಲಿ ಧನಂಜಯ ಮುಂತಾದ ಕನ್ನಡದ ಉದಯೋನ್ಮುಖ ಕಲಾವಿದರನ್ನು ಒಳಗೊಂಡ ವಿಶೇಷ ವೀಡಿಯೊದೊಂದಿಗೆ ಚಿತ್ರದ ನಿರ್ಮಾಪಕರು ಸುದೀಪ್‌ ಅವರ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.  


ಬೆಂಗಳೂರು (ಜೂ.27): ಕಿಚ್ಚ ಸುದೀಪ್‌ ಅವರ ನೆಕ್ಟ್ಸ್‌ ಫಿಲ್ಮ್‌ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬಹುನಿರೀಕ್ಷಿತ ಕಿಚ್ಚ-46 ಸಿನಿಮಾದ ಗ್ಲಿಂಪಸ್‌ ಯಾವಾಗ ಹೊರಬೀಳುತ್ತದೆ ಎನ್ನುವುದನ್ನು ಪ್ರಕಟಿಸಲಾಗಿದೆ. ಅಭಿನಯ ಚಕ್ರವರ್ತಿಯ ಕೊನೆಯ ಸಿನಿಮಾ ವಿಕ್ರಾಂತ್‌ ರೋಣ 2022ರ ಜುಲೈನಲ್ಲಿ ರಿಲೀಸ್‌ ಆಗಿತ್ತು. ಆ ಬಳಿಕ ಸುದೀಪ್‌ ನಿರ್ದೇಶನಕ್ಕೆ ಇಳಿಯಲಿದ್ದಾರೆ. ತಮ್ಮ ನಿರ್ದೇಶನದಲ್ಲಿಯೇ ಅವರು ನಟಿಸಲಿದ್ದಾರೆ ಎಂದೆಲ್ಲಾ ವರದಿಗಳಾಗಿದ್ದವು. ಈ ನಡುವೆ ವಿಕ್ರಾಂತ್‌ ರೋಣ ಚಿತ್ರ ಕೂಡ ದೊಟ್ಟ ಮಟ್ಟದ ಯಶಸ್ಸು ಕಂಡಿತ್ತಾದರೂ, ತಾವು ನಿರೀಕ್ಷೆ ಇಟ್ಟಿದ್ದ ಮಟ್ಟಕ್ಕೆ ಹೆಸರು ಮಾಡಲಿಲ್ಲ ಎನ್ನುವ ಬೇಸರ ಕೂಡ ಅವರಲ್ಲಿತ್ತು. ಈ ನಡುವೆ ಸುದೀಪ್‌ ಕೂಡ ಸಿನಿಮಾ ನಿರ್ದೇಶನಕ್ಕೆ ಇಳಿಯುವ ಮನಸ್ಸು ಮಾಡಿದ್ದಾರೆ, ಅದಕ್ಕಾಗಿ ಸ್ಕ್ರಿಪ್ಟ್‌ ಸಿದ್ಧ ಮಾಡುತ್ತಿದ್ದಾರೆ ಎಂದೆಲ್ಲಾ ವರದಿಯಾಗಿದ್ದವು. ಕಿಚ್ಚನ ಅಭಿಮಾನಿಗಳು ಕೂಡ ತಮ್ಮ ಸ್ಟಾರ್‌, ಮರಳಿ ಫಾರ್ಮ್‌ಗೆ ಬಂದೇ ಬರ್ತಾರೆ ಎನ್ನುವ ವಿಶ್ವಾಸ ಇರಿಸಿದ್ದರು. ಹಾಗಾಗಿ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದರ ಬಗ್ಗೆ ಕುತೂಹಲಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದವು.

ಕಿಚ್ಚ-46 ಸಿನಿಮಾವನ್ನು ಅನೂಪ್‌ ಭಂಡಾರಿ ಜೊತೆಗೆ ಮಾಡಲಿದ್ದಾರೆ ಎಂದೂ ವರದಿಯಾಗಿದ್ದವು. ಅದರೊಂದಿಗೆ ತಮಿಳು ನಿರ್ದೇಶಕ ವೆಂಕಟ್‌ ಪ್ರಭು ಅವರು ಸುದೀಪ್‌ ಅವರ 46ನೇ ಚಿತ್ರ ಡೈರೆಕ್ಷನ್‌ ಮಾಡ್ತಾರೆ ಅನ್ನಲಾಗಿತ್ತು. ಮಾಸ್‌ ಡೈರೆಕ್ಟರ್‌ ನಂದಕಿಶೋರ್‌ ಹೆಸರು ಕೂಡ ಲಿಸ್ಟ್‌ನಲ್ಲಿತ್ತು. ಈ ನಡುವೆ ಇತ್ತೀಚೆಗೆ ತಮಿಳು ಸಿನಿಮಾ ಡೈರೆಕ್ಟರ್‌ ಹಾಗೂ ಪ್ರೊಡ್ಯೂಸರ್‌ ಚೇರನ್‌ ಅವರ ಹೆಸರೂ ಕೂಡ ಚಾಲ್ತಿಗೆ ಬಂದಿತ್ತು.


ರಜನಿಕಾಂತ್‌ ಅವರ ಕಬಾನಿ, ಕರ್ಣನ್‌ ಸೇರಿದಂತೆ ಹೆಸರಾಂತ ಚಿತ್ರಗಳನ್ನಿ ನಿರ್ಮಾಣ ಮಾಡಿರುವ ಪ್ರಸಿದ್ಧ ತಮಿಳು ನಿರ್ಮಾಪಕ ಕಲೈಪುಲಿ ಎಸ್‌.ತನು ತಮ್ಮ ವಿ.ಕ್ರಿಯೇಷನ್ಸ್‌ ಬ್ಯಾನರ್‌ ಅಡಿಯಲ್ಲಿ ಕಿಚ್ಚ 46 ಸಿನಿಮಾಗೆ ಹಣ ಹಾಕಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸುದೀಪ್‌, ಚೊಚ್ಚಲ ನಿರ್ದೇಶಕ ವಿಜಯ್‌ ಕಾರ್ತಿಕೇಯನ್‌ ಅವರ ಕನ್ನಡ-ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.ಇದರ ಬೆನ್ನಲ್ಲಿಯೇ ಮುಂದಿನ ಸಿನಿಮಾದ ಫರ್ಸ್ಟ್‌ ಲುಕ್‌ಗೆ ವೇದಿಕೆ ಸಿದ್ದವಾಗಿದೆ.

ಅಂದಾಜು ಒಂದು ವರ್ಷಗಳ ಕಾಯುವಿಕೆಯ ಬಳಿಕ ಸುದೀಪ್‌ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಹೊಸ ಅಪ್‌ಡೇಟ್‌ನ ಪ್ರಕಾರ, ಕಿಚ್ಚ-46 ನ ಮೊದಲ ಟೀಸರ್‌ ಇದೇ ಜುಲೈ 2 ರಂದು ಬೆಳಗ್ಗೆ 11.46ಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟವಾಗಿದೆ.  ಡಾರ್ಲಿಂಗ್ ಕೃಷ್ಣ, ನವೀನ್ ಶಂಕರ್, ಕಾಂತಾರ ನಟಿ ಸಪ್ತಮಿ ಗೌಡ, ವಾಸುಕಿ ವೈಭವ್, ಅನುಪ್ ಭಂಡಾರಿ, ವಿನಯ್ ರಾಜ್‌ಕುಮಾರ್ ಮತ್ತು ಡಾಲಿ ಧನಂಜಯ ಮುಂತಾದ ಕನ್ನಡದ ಪ್ರಮುಖ ಕಲಾವಿದರನ್ನು ಒಳಗೊಂಡ ವಿಶೇಷ ವೀಡಿಯೊದೊಂದಿಗೆ ಚಿತ್ರ ನಿರ್ಮಾಪಕರು ಈ ಘೋಷಣೆ ಮಾಡಿದ್ದಾರೆ.

'ಜಿಮ್ಮಿ' ಅವತಾರದಲ್ಲಿ ಸಖತ್ತಾಗಿದೆ ಸಂಚಿತ್ ಖದರ್: ವಾರ್ನಿಂಗ್ ಕೊಡುತ್ತಾ ಎಂಟ್ರಿ ಕೊಟ್ಟ ಜ್ಯೂ.ಕಿಚ್ಚ!

ಟೀಸರ್‌ ಬಿಡುಗಡೆ ದಿನಾಂಕ ಘೋಷಣೆ ಆದ ಬೆನ್ನಲ್ಲಿಯೇ 51 ವರ್ಷದ ಕಿಚ್ಚ ಸುದೀಪ್‌ ಈ ಚಿತ್ರದಲ್ಲಿ ಯಾವ ಪಾತ್ರ ನಿರ್ವಹಿಸುತ್ತಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಮುಂದಿನ ಫಿಲ್ಮ್‌ನಲ್ಲಿ ಸುದೀಪ್‌ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ನಟಸಲಿದ್ದಾರೆಯೇ? ಸಿಮ್ರತ್‌ ಕೌರ್‌ ಈ ಸಿನಿಮಾಕ್ಕೆ ನಾಯಕಿಯೇ? ಎನ್ನುವ ಕುತೂಹಲಗಳು ಮುಂದಿನ ದಿನದಲ್ಲಿ ಬಹಿರಂಗವಾಗಲಿದೆ.

ಹಾಡು ಕೇಳಿ ಸಾನ್ವಿಯನ್ನು ತಬ್ಬಿಕೊಂಡ ಕಿಚ್ಚ ಸುದೀಪ್: ತಂದೆ ಮಗಳ ಬಾಂಧವ್ಯದ ಕತೆ ಕೇಳಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್