'ನಮಸ್ತೆ ಗೋಷ್ಟ್' ನೋಡಿ ಮೆಚ್ಚಿದ 6 ಸಾವಿರ ವಿದ್ಯಾರ್ಥಿಗಳು; ಪ್ರೇಕ್ಷಕರನ್ನ ಥಿಯೇಟರ್‌‌ಗೆ ಕರೆತರಲು ತಂಡದ ಮಸ್ತ್ ಪ್ಲಾನ್

Published : Jun 27, 2023, 06:39 PM IST
'ನಮಸ್ತೆ ಗೋಷ್ಟ್' ನೋಡಿ ಮೆಚ್ಚಿದ 6 ಸಾವಿರ ವಿದ್ಯಾರ್ಥಿಗಳು; ಪ್ರೇಕ್ಷಕರನ್ನ ಥಿಯೇಟರ್‌‌ಗೆ ಕರೆತರಲು ತಂಡದ ಮಸ್ತ್ ಪ್ಲಾನ್

ಸಾರಾಂಶ

'ನಮಸ್ತೆ ಗೋಷ್ಟ್' ನೋಡಿ 6 ಸಾವಿರ ವಿದ್ಯಾರ್ಥಿಗಳು ಮೆಚ್ಚಿಕೊಂಡಿದ್ದಾರೆ.ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಸಿನಿಮಾತಂಡ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. 

ಸಾಮಾನ್ಯವಾಗಿ ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುನ್ನ ಪ್ರಿಮಿಯರ್‌ ಶೋ ಮಾಡಿ ಸೆಲಬ್ರೆಟಿಗಳಿಗೆ ಹಾಗೂ ಮಾಧ್ಯಮದವರಿಗೆ ಮುಂಚಿತವಾಗಿ ಸಿನಿಮಾ ತೋರಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಸಿನಿಮಾ ತಂಡ ಬಿಡುಗಡೆಗೆ ತಿಂಗಳುಗಳ ಕಾಲ ಟೈಂ ಇರುವಾಗಲೇ ಕಾಲೇಜ್ುಗಳಲ್ಲಿ ಸುಮಾರು 6000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಸಿನಿಮಾವನ್ನ ತೋರಿಸುವ ಮೂಲಕ ವಿಭಿನ್ನ ರೀತಿಯ ಪ್ರಚಾರಕ್ಕೆ ಮುಂದಾಗಿದೆ. ಸಿಂಗಲ್ ಪೋಸ್ಟರ್ ಮೂಲಕವೇ ಬಾರಿ ಸದ್ದು ಮಾಡಿದಂತಹ ನಮಸ್ತೆ ಗೋಷ್ಟ್‌ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆದಾಗ ಸಾಕಷ್ಟು ಜನರು ಕನ್ಫ್ಯೂಸ್ ಮಾಡಿಕೊಂಡು ಇದು ಕಿಚ್ಚ ಸುದೀಪ್ ಅಭಿನಯದ ಮುಂದಿನ ಸಿನಿಮಾ ಎಂದುಕೊಂಡಿದ್ದರು. ಪೋಸ್ಟರ್‌ ನಲ್ಲಿ ಕಿಚ್ಚ ಕ್ಯಾಂಡಲ್‌ ಸ್ಟ್ಯಾಂಡ್‌ ಹಿಡಿದು ನಿಂತಿರುವಂತೆಯೇ ಕಾಣುತ್ತಿತ್ತು ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್. ಬಳಿಕ ಚಿತ್ರತಂಡ ಇದು ಸುದೀಪ್‌ ಅಭಿನಯದ ಚಿತ್ರ ಅಲ್ಲ ಎಂದು ಕ್ಲ್ಯಾರಿಟಿ ಕೊಟ್ಟಿತ್ತು.

ನಮಸ್ತೆ ಗೋಷ್ಟ್ ಸಿನಿಮಾವನ್ನ ಭರತ್ ನಂದ ನಿರ್ದೇಶನ ಮಾಡೋದ್ರ ಜೊತೆಗೆ ನಾಯಕನಾಗಿ ಕೂಡ ಭರತ್ ನಂದ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯಾಗಿ ವಿದ್ಯಾ ರಾಜ್‌ ಅಭಿನಯ ಮಾಡಿದ್ದು, ಬಾಲ ರಾಜುವಾಡಿ, ಶಿವಕುಮಾರ್ ಆರಾಧ್ಯ, ಶಿವಮೊಗ್ಗ ಹರೀಶ್ ಹೀಗೆ ಸಾಕಷ್ಟು ಜನರು ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ಟೈಟಲ್ ಹೇಳುವಂತೆಯೇ ಇದೊಂದು ಹಾರರ್ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಸಿನಿಮವಾಗಿದ್ದು ಈ ಚಿತ್ರವನ್ನು ರಮೇಶ್ ನಿರ್ಮಾಣ ಮಾಡಿದ್ದಾರೆ. ಯದುನಂದನ್ ಮ್ಯೂಸಿಕ್ ಹಾಗೂ ವಿನಯ್ ಕುಮಾರ್ ಚಿತ್ರದಲ್ಲಿ ಸಂಕಲನಕಾರರಾಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

ಚಿತ್ರತಂಡದ ಒತ್ತಾಯಕ್ಕೆ ಮಣಿದ ಮಾಲೀಕ: ಅಂತೂ ಉಳಿಯಿತು ಕುರುಬಾನಿ ಆಗ್ಬೇಕಿದ್ದ 'ಟಗರು ಪಲ್ಯ' ಸುಲ್ತಾನ ಜೀವ

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನ ಥಿಯೇಟರ್ ಗೆ ಕರೆ ತರುವುದೇ ಸಾಕಷ್ಟು ಕಷ್ಟದ ಸಂಗತಿಯಾಗಿದೆ. ಹಾಗಾಗಿ ನಮಸ್ತೆ ಗೋಷ್ಟ್ ಸಿನಿಮಾ ತಂಡ ಈ ರೀತಿಯ ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ.. ಈಗಿನ ಸಿನಿಮಾಗಳು ಹೆಚ್ಚಾಗಿ ಪ್ರಚಾರ ಪಡೆದುಕೊಳ್ಳುವುದೇ ಮೌತ್ ಪಬ್ಲಿಸಿಟಿಯಿಂದಾಗಿ ಹಾಗಾಗಿ ಕಾಲೇಜ್ ಯುವಕ ಯುವತಿಯರಿಗೆ ಸಿನಿಮಾ ತೋರಿಸಿದರೆ ಅವರು ಮತ್ತಷ್ಟು ಜನರಿಗೆ ಸಿನಿಮಾದ ಬಗ್ಗೆ ಹೇಳುವ ಮೂಲಕ ಸಿನಿಮಾ ಜನರಿಗೆ ತಲುಪ್ಪುತ್ತೆ ಎನ್ನುವ ಉದ್ದೇಶದಿಂದ ಸಿನಿಮಾ ತಂಡ ಈ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಸದ್ಯ ಸಿನಿಮಾ ತಂಡ ಸಿನಿಮಾದ ಪ್ರಚಾರಕ್ಕಾಗಿ ವಿಭಿನ್ನ ರೀತಿಯ ಟ್ರೈಲರ್ ಅನ್ನ ಬಿಡುಗಡೆ ಮಾಡಿದ್ದು ಜುಲೈ 14 ಸಿನಿಮಾವನ್ನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!