ಮಳೆಯ ನಡುವೆಯೂ ನಂದಿಬೆಟ್ಟಕ್ಕೆ ಹೋದ ಯಶ್ ದಂಪತಿ; ಫೋಟೋ ವೈರಲ್

Published : Dec 11, 2022, 11:01 AM IST
ಮಳೆಯ ನಡುವೆಯೂ ನಂದಿಬೆಟ್ಟಕ್ಕೆ ಹೋದ ಯಶ್ ದಂಪತಿ; ಫೋಟೋ ವೈರಲ್

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನಂದಿಬೆಟ್ಟಕ್ಕೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಕಳೆದ ಎರಡು-ಮೂರು ದಿನಗಳಿಂದ ಬೆಂಗಳೂರು ಚಳಿಯಿಂದ ನಡುಗುತ್ತಿದೆ. ತುಂತುರ ಮಳೆಯಾಗುತ್ತಿದೆ.  ಸೈಕ್ಲೋನ್ ಎಫೆಕ್ಟ್‌ನಿಂದ ಬೆಂಗಳೂರು ಜನತೆಗೆ ಮನೆಯಿಂದ ಹೊರಬರಲು ಕಷ್ಟವಾಗುತ್ತಿದೆ. ಈ ನಡುವೆ ರಾಕಿಂಗ್‍ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ನಂದಿಗಿರಿಧಾಮದ ಸೌಂದರ್ಯ ಸವಿದಿದ್ದಾರೆ. ಹೌದು, ಇತ್ತೀಚಿಗಷ್ಟೆ ಯಶ್ ಮತ್ತು ರಾಧಿಕಾ 6ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಈ ಜೋಡಿ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಯಶ್ ಮತ್ತು ರಾಧಿಕಾ ದಂಪತಿ ನಂದಿ ಬೆಟ್ಟಕ್ಕೆ ಭೇಟಿ ನೀಡಿ ಕೆಲ ಹೊತ್ತು ಸಮಯ ಕಳೆದಿದ್ದಾರೆ. ನಂದಿಗಿರಿಧಾಮ ಪ್ರೇಮಿಗಳ ಪಾಲಿನ ಹಾಟ್ ಫೇವರೆಟ್ ತಾಣ, ಬೆಂಗಳೂರಿಗರ ಪಾಲಿನ ವಿಕೇಂಡ್ ಹಾಟ್ ಸ್ಪಾಟ್. ವೀಕೆಂಡ್‌ನಲ್ಲಿ ನಂದಿಬೆಟ್ಟ ತುಂಬಿರುತ್ತೆ. ಇದೀಗ ರಾಕಿಂಗ್ ಸ್ಟಾರ್ ಮತ್ತು ರಾಧಿಕಾ ಪಂಡಿತ್ ಜೋಡಿ ನಂದಿಬೆಟ್ಟಕ್ಕೆ ಹೋಗಿ ನಂದಿಗಿರಿಧಾಮದ ಸೌಂದರ್ಯ ಕಣ್ತುಂಬಿಕೊಂಡಿದ್ದಾರೆ.

ಬೆಳಿಗ್ಗೆ 6.30 ರ ಸುಮಾರಿಗೆ ನಂದಿಗಿರಿಧಾಮಕ್ಕೆ ಭೇಟಿ ನೀಡಿದ ಯಶ್ ದಂಪತಿ ನಂದಿಬೆಟ್ಟದ ಮೇಲಿ ಸಂಚರಿಸಿದರು. ಬಳಿಕ ಮಯೂರ ಹೋಟೆಲ್ ನಲ್ಲಿ ತಿಂಡಿ ತಿಂದರು. ಹೋಟಲ್ ಸಿಬ್ಬಂದಿಯ ಸವಿರುಚಿಗೆ ದಂಪತಿ ಅಭಿನಂದನೆ ಸಲ್ಲಿಸಿದರು. ಬಳಿಕ ಯಶ್ ಮತ್ತು ರಾಧಿಕಾ ದಂಪತಿ ಜೊತೆ ಹೋಟಲ್ ಸಿಬ್ಬಂದಿಗಳು ಪೋಟೊ ತೆಗೆಸಿಕೊಂಡು ಸಂತಸ ಪಟ್ಟರು. ಯಶ್ ಮತ್ತು ರಾಧಿಕಾ ದಂಪತಿ ನೋಡಿ ಪ್ರವಾಸಿಗರು ಫುಲ್ ಖುಷ್ ಆದರು. ಸ್ಟಾರ್ ದಂಪತಿಯನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗೆ ಮುಗಿ ಬಿದ್ದಿದ್ದರು. ರಾಕಿಂಗ್ ದಂಪತಿ ಕೂಲ್ ಆಗಿಯೇ ಅಭಿಮಾನಿಗಳಿಗೆ ಸೆಲ್ಫಿ ನೀಡಿ ಮಾತನಾಡಿಸಿದರು. ಯಶ್ ಮತ್ತು ರಾಧಿಕಾ ದಂಪತಿಯ ನಂದಿಬೆಟ್ಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸ್ವಲ್ಪ ಫಿಲ್ಮಿ, ಸ್ವಲ್ಪ ತುಂಟಾಟ, ನಾವು ತುಂಬಾ ರಿಯಲ್: ವಿವಾಹ ವಾರ್ಷಿಕೋತ್ಸವಕ್ಕೆ ರಾಧಿಕಾ ಪಂಡಿತ್ ವಿಶ್

ಇತ್ತೀಚಿಗಷ್ಟೆ ಸ್ಟಾರ್ ದಂಪತಿ 6ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ನಟಿ ರಾಧಿಕಾ ಪಂಡಿತ್ ಒಂದಿಷ್ಟು ಫೋಟೋಗಳನ್ನು ಸಹ ಹಂಚಿಕೊಂಡಿದ್ದರು. ‘ಇದು ನಾವೇ, ಸಿನಿಮಾಗಳು, ಸಂತಸದ ಜೀವನ,  ಗಂಭೀರ ಆದರೆ ತುಂಬಾ ರಿಯಲ್ ಎಲ್ಲವೂ ಈ ಜೀವನದ ಮ್ಯಾಜಿಕಲ್ ವರ್ಷಗಳಾಗಿವೆ. ಈ ಆರು ವರ್ಷಗಳ ವೈವಾಹಿಕ ಜೀವನವನ್ನು ನಿಮ್ಮೊಂದಿಗೆ ನೈಜವಾಗಿಸಿದ್ದಕ್ಕಾಗಿ ಧನ್ಯವಾದಗಳು, ಮದುವೆ ವಾರ್ಷಿಕೋತ್ಸವದ ಶುಭಾಶಯಗಳು’ ಎಂದು ರಾಧಿಕಾ ಪಂಡಿತ್ ತಮ್ಮ ಪತಿ ಯಶ್​ಗೆ ಶುಭಕೋರಿದ್ದರು. 

Popular Indian Stars; ಅತ್ಯಂತ ಜನಪ್ರಿಯ ಸ್ಟಾರ್‌ಗಳ ಪಟ್ಟಿಯಲ್ಲಿ ಧನುಷ್ ನಂ.1; ಯಶ್‌ಗೆ ಎಷ್ಟನೆ ಸ್ಥಾನ?

ರಾಧಿಕಾ ಪಂಡಿತ್ ಮದುವೆ ಬಳಿಕ ನಟನೆಯಿಂದ ದೂರ ಉಳಿದಿದ್ದಾರೆ. ಇಬ್ಬರೂ ಮುದ್ದಾದ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಸೂಪರ್ ಸಕ್ಸಸ್ ಬಳಿಕ ಮುಂದಿನ ಸಿನಿಮಾ ಇನ್ನೂ ಘೋಷಣೆ ಮಾಡಿಲ್ಲ. ಅಭಿಮಾನಿಗಳು ಯಶ್ ಮುಂದಿನ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು, ಯಾವಾಗ ಅನೌನ್ಸ್ ಮಾಡಲಿದ್ದಾರೆ ಎಂದು ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Ramayana: ರಾವಣ ಪಾತ್ರದಿಂದ ಯಶ್​ ಮನೆಯಲ್ಲಿ ದೊಡ್ಡ ಸಮಸ್ಯೆ! ರಾಮ ಯಾಕಾಗಿಲ್ಲ? ಮಗನ ಪ್ರಶ್ನೆಗೆ ಪೇಚಿನಲ್ಲಿ ನಟ
ಕರುನಾಡ ಸಾಧಕರಿಗೆ 'ಪುನೀತ್ ರಾಜ್‌ಕುಮಾರ್ ಪ್ರಶಸ್ತಿ' ಗರಿ: ಕನ್ನಡ ನವೆಂಬರ್ ಆಚರಣೆಯಾಗದೆ ನಿತ್ಯೋತ್ಸವವಾಗಲಿ-ನಾಗಾಭರಣ!