ಟಾಕ್ಸಿಕ್ ಚಿತ್ರವನ್ನು ಬೆಂಗಳೂರಿನ ವಿದ್ಯಾರಣ್ಯಪುರ ಬಳಿಯಿರುವ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಹಾಕಿರುವ ಸೆಟ್‌ನಲ್ಲಿ ಶೂಟಿಂಗ್ ಮಾಡಲಾಗುವುದು. ಮೊನ್ನೆ ನಡೆದ ಮುಹೂರ್ತ ಸಮಾರಂಭದಲ್ಲಿ ನಟ ಯಶ್, ನಿರ್ಮಾಪಕ ವೆಂಕಟ್ ಕೆ ರೆಡ್ಡಿ ಹಾಗು ನಿರ್ದೇಶಕಿ ಗೀತೂ ಮೋಹನ್‌ದಾಸ್ ಸೇರಿದಂತೆ...
ಮೊನ್ನೆ ಆಗಷ್ಟ್ 8ಕ್ಕೆ, (08 August 2024) ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮುಂಬರುವ 'ಟಾಕ್ಸಿಕ್ ಸಿನಿಮಾಗೆ ಮುಹೂರ್ತ ನೆರವೇರಿದೆ. ಈ ಚಿತ್ರವನ್ನು ನಟ ಯಶ್ ಹಾಗೂ ಕೆ ವೆಂಕಟ್ ನಾರಾಯಣ ಅವರು ಜಂಟಿಯಾಗಿ ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಮಾನ್‌ಸ್ಟರ್ ಮೈಂಡ್ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಮಲಯಾಳಂನ ಗೀತೂ ಮೋಹನ್‌ದಾಸ್ ನಿರ್ದೇಶನ ಮಾಡಲಿದ್ದಾರೆ.
ಟಾಕ್ಸಿಕ್ ಚಿತ್ರವನ್ನು ಬೆಂಗಳೂರಿನ ವಿದ್ಯಾರಣ್ಯಪುರ ಬಳಿಯಿರುವ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಹಾಕಿರುವ ಸೆಟ್‌ನಲ್ಲಿ ಶೂಟಿಂಗ್ ಮಾಡಲಾಗುವುದು. ಮೊನ್ನೆ ನಡೆದ ಮುಹೂರ್ತ ಸಮಾರಂಭದಲ್ಲಿ ನಟ ಯಶ್, ನಿರ್ಮಾಪಕ ವೆಂಕಟ್ ಕೆ ರೆಡ್ಡಿ ಹಾಗು ನಿರ್ದೇಶಕಿ ಗೀತೂ ಮೋಹನ್‌ದಾಸ್ ಸೇರಿದಂತೆ ಚಿತ್ರತಂಡ ಹಾಜರಿತ್ತು. ಪೂಜೆ ನಡೆದ ಬಳಿಕ ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಕೂಡ ಮಾಡಿಸಲಾಯ್ತು. ಅದಕ್ಕೆ ಯಾವುದೇ ಸ್ಪೆಷಲ್ ಗೆಸ್ಟ್ ಬಂದಿರಲಿಲ್ಲ.
ದರ್ಶನ್ ಜೊತೆ ಸ್ನೇಹ ಬೆಳಸೋದು ಕಷ್ಟ, ಉಳಿಸಿಕೊಳ್ಳೋದು ಕಷ್ಟ ಅಂತಾರಲ್ಲ, ಯಾಕಿರಬಹುದು..!?
ಸಿನಿಮಾ ಶೂಟಿಂಗ್ ಮೂಹೂರ್ಥದ ದಿನ ಮೊದಲ ದೃಶ್ಯದ ಕ್ಲ್ಯಾಪ್ ಮಾಡಿದ್ದು ಅದೇ ಚಿತ್ರದಲ್ಲಿ ಕೆಲಸ ಮಾಡಲಿರುವ ಸೆಟ್ ಬಾಯ್. ಈ ಮೊದಲು ಕೂಡ ಹಲವು ಚಿತ್ರಗಳಿಗೆ ನಟ ಯಶ್ ತಮ್ಮ ಅಚ್ಚುಮೆಚ್ಚಿನ ಸೆಟ್ಬಾಯ್ ಅವರಿಂದಲೇ ಕ್ಲಾಪ್ ಮಾಡಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಅಂದೂ ಸಹ ತಮ್ಮ ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ ಚಿತ್ರದ ಮುಹೂರ್ತಕ್ಕೆ ಅದೇ ಸೆಟ್ ಬಾಯ್ ಅವರಿಂದಲೇ ಕ್ಲ್ಯಾಪ್ ಮಾಡಿಸಿದ್ದಾರೆ. ಈ ಮೂಲಕ ಸಿನಿ ಕಾರ್ಮಿಕರ ಮೇಲೆ ತಮಗಿರುವ ಗೌರವ, ಕಾಳಜಿಯನ್ನ ತೋರಿಸಿದ್ದಾರೆ.
ಈ ಬೆಳವಣಿಗೆ ಒಂದು ಕಡೆಯಾದರೆ, ಯಶ್ ನಟನೆಯ ಟಾಕ್ಸಿಕ್ ಚಿತ್ರ ಮುಹೂರ್ತ ಕಂಡ ಮಾರನೆಯ ದಿನವೇ, ಅಂದರೆ 09 ಆಗಸ್ಟ್ 2024ರಂದು ಯಶ್ ನಟನೆಯ 'ಕೆಜಿಎಫ್' ಸರಣಿ ಚಿತ್ರಗಳ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮುಹೂರ್ತಕ್ಕೆ ಚಾಲನೆ ನೀಡಿದ್ದಾರೆ. ಪ್ರಶಾಂತ್ ನೀಲ್ ಅವರು ತೆಲುಗಿನ ಜೂನಿಯರ್ ಎನ್‌ಟಿಆರ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಮೂಲಕ, ಯಶ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಸದ್ಯ ಬೇರೆಯದೇ ದಾರಿಯಲ್ಲಿ ಹೊರಟಿರುವ ಪ್ರಯಾಣಿಕರು ಎನ್ನಬಹುದು. ನಟ ಯಶ್ ಅವರು ಕೆಜಿಎಫ್ ಬಳಿಕ ಬೇರೆ ಯಾವುದೇ ಚಿತ್ರವನ್ನು ಕೈಗೆತ್ತಿಕೊಂಡಿರಲಿಲ್ಲ, ಕಥೆಯ ಆಯ್ಕೆಯಲ್ಲೇ ಸಾಕಷ್ಟು ಸಮಯ ಕಳೆದಿದ್ದಾರೆ. ಆದರೆ, ಪ್ರಶಾಂತ್ ನೀಲ್ ಅವರು ಅದಾಗಲೇ ಸಲಾರ್ ಚಿತ್ರವನ್ನು ಡಾರ್ಲಿಂಗ್ ಪ್ರಭಾಸ್ ನಾಯಕತ್ವದಲ್ಲಿ ತೆರೆಗೆ ತಂದು ಯಶಸ್ವಿಯೂ ಆಗಿದ್ದಾರೆ. ಹೀಗಾಗಿ, ಮುಂಬರುವ ಟಾಕ್ಸಿಕ್ ಚಿತ್ರ ಯಶ್ ಅವರಿಗೆ ಅಗ್ನಿ ಪರೀಕ್ಷೆ ಎನ್ನಬಹುದು.
ಡಾ ರಾಜ್‌ಕುಮಾರ್ ಈ ದಾಖಲೆ ನಿಮಗೆ ಗೊತ್ತಿದ್ಯಾ? ನೋಡಿದ್ರೆ ಪಕ್ಕಾ ಶಾಕ್ ಆಗಿ ಹೌಹಾರ್ತೀರಾ!
ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮುಂಬರುವ ಟಾಕ್ಸಿಕ್ ಸಂಪೂರ್ಣ ಹೊಸ ಟೀಮ್ ಆಗಿದೆ. ಪ್ರಶಾಂತ್ ನೀಲ್ ಇಲ್ಲದ ಯಶ್ ಸಿನಿಮಾ ಇದಾಗಲಿದೆ. ಮಲಯಾಳಂ ನಿರ್ದೇಶಕಿ ತಾವೇ ಕಥೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಯಶ್ ಅವರಿಗೆ ಖಂಡಿತವಾಗಿಯೂ ಮುಂಬರುವ ಟಾಕ್ಸಿಕ್ ಚಿತ್ರ ಅಗ್ನಿ ಪರೀಕ್ಷೆ ಎಂದೇ ಹೇಳಬಹುದು. ಪ್ರಶಾಂತ್ ನೀಲ್ ಅವರಿಗೂ ಚಿತ್ರ ಗೆಲ್ಲಬೇಕಿದೆ. ಆದರೆ, ಅದನ್ನು ಅಗ್ನಿ ಪರೀಕ್ಷೆ ಎಂದು ಕರೆಯಬೇಕಿಲ್ಲ, ಏಕೆಂದರೆ ಯಶ್ ಇಲ್ಲದೆಯೂ ಪ್ರಭಾಸ್ ನಟನೆಯ್ಲಲಿ ಸಲಾರ್ ಹಿಟ್ ಅಗಿದೆ!