ತರುಣ್ ಸುಧೀರ್ ಮತ್ತು ಸೋನಲ್ ಮದುವೆ ನಡೆದಿರುವ ಬೆನ್ನಲ್ಲೇ ಸೊಸೆಯ ಕುರಿತು ತರುಣ್ ಅಮ್ಮ ಹೇಳಿದ ಮಾತೇನು?
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಇಂದು ಬೆಂಗಳೂರಿನ ನಡೆದಿದೆ. ನಿನ್ನೆ ಅಂದ್ರೆ ಆಗಸ್ಟ್ 10ರಂದು ರಿಸೆಪ್ಷನ್ ನಡೆದಿತ್ತು. ಇಂದು ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಬೆಳಗ್ಗೆ 10:30 ರಿಂದ11:00 ಗಂಟೆಗೆ ನಡೆದ ಧಾರೆ ಮುಹೂರ್ತದಲ್ಲಿ ಸೋನಲ್ಗೆ ತಾಳಿ ಕಟ್ಟಿದ ಸುಧೀರ್ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದ್ದು, ಸೋನಲ್ ಮೊಂಥೆರೋ ಅವರ ಹುಟ್ಟೂರು ಮಂಗಳೂರಿನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮದುವೆ ಮುಂದಿನ ತಿಂಗಳು ನಡೆಯಲಿದೆ. ಇಂದು ಸೋನಲ್ ಅವರ ಹುಟ್ಟುಹಬ್ಬವಾಗಿರುವುದು ಕೂಡ ವಿಶೇಷವೇ. ಈ ವಿವಾಹಕ್ಕೆ ಕನ್ನಡದ ಸ್ಟಾರ್ ಕಲಾವಿದರ ದಂಡು, ರಾಜಕೀಯ ಗಣ್ಯರು ಭಾಗಿಯಾದರು. ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿತ್ತು. ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪ ನಿರ್ಮಾಣ ಮಾಡಲಾಗಿತ್ತು. ಕಲಾಂಜನಿ ವೆಡ್ಡಿಂಗ್ಸ್ ನ ಕಿರಣ್ ನೇತೃತ್ವದಲ್ಲಿ ಧಾರೆ ಮುಹೂರ್ತದ ಸೆಟ್ ಹಾಕಲಾಗಿತ್ತು.
ಮದುವೆಗೂ ಮುನ್ನ ತಮ್ಮ ಭಾವಿ ಸೊಸೆ (ಅಂದರೆ ಈಗ ಸೊಸೆ) ಸೋನಲ್ ಮತ್ತು ಮಗ ತರುಣ್ ಕುರಿತು ತರುಣ್ ತರುಣ್ ಸುಧೀರ್ ಅವರ ಅಮ್ಮ ಮಾಲತಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಚಿತ್ರರಂಗನೇ ನನ್ನ ಉಸಿರು, ಸಿನಿಮಾನೇ ಜೀವನೇ ಅಂತಿದ್ದ. ಮದುವೆಯ ಬಗ್ಗೆ ಮಾತೇ ಆಡುತ್ತಿರಲಿಲ್ಲ. ಮನೆಯಲ್ಲಿಯೂ ಜಾಸ್ತಿ ಮಾತನಾಡುವವನಲ್ಲ, ಊಟ ಆಯ್ತಾ, ಊಟ ಹಾಕು, ಊಟ ಮುಗೀತು ಇಷ್ಟೇ ಹೇಳ್ತಿದ್ದ. ಕೇಳಿದ್ರೆ ಚಿತ್ರಗಳಲ್ಲಿ ವಿನಲ್ಗಳಿಗೆ ಹೆಚ್ಚು ಡೈಲಾಗ್ ಇರಲ್ಲ. ಎಸ್ ಬಾಸ್, ನೋ ಬಾಸ್, ಓಕೆ ಬಾಸ್ ಈ ಮೂರೇ ಡೈಲಾಗ್ ಇರ್ತದೆ ಅನ್ನುತ್ತಿದ್ದ. ಇವನು ಮದುವೆನೇ ಆಗಲ್ವೇನೋ ಅಂತ ಬೇಸರವಾಗಿತ್ತು. ಆದರೆ ಈಗ ಮದುವೆಯಾಗಬೇಕು, ಸಂಸಾರ ಮಾಡಬೇಕು ಎನ್ನುವ ಜವಾಬ್ದಾರಿ ಬಂದಿರೋದು ಖುಷಿಯ ವಿಷಯವಾಗಿದೆ. ಒಂದೇ ಒಂದು ನೋವು ಅಂದ್ರೆ ಯಜಮಾನರು ಇಲ್ಲ ಅನ್ನೋದಷ್ಟೇ ಎಂದಿದ್ದಾರೆ.
ತರುಣ್-ಸೋನಲ್ ಮದುವೆಗೆ ಮುನ್ನ ನಟಿಯ ಭರ್ಜರಿ ಬ್ಯಾಚುಲರ್ ಪಾರ್ಟಿ ಹೇಗಿತ್ತು ನೋಡಿ...!
ಇನ್ನು ಸೊಸೆ ಸೋನಲ್ ಕುರಿತು ಮಾತನಾಡಿದ ಮಾಲತಿ ಅವರು, ಅವಳನ್ನು ನೋಡಿದ್ರೆ ಖುಷಿಯಾಗಿದ್ತೆ. ನಮ್ ಯಜಮಾನ್ರು ಕೂಡ ಚಿತ್ರರಂಗ ಉಸಿರು ಎಂದು ಬದುಕಿದವರು. ಅವರ ಆಶೀರ್ವಾದ ಈ ದಂಪತಿ ಮೇಲೆ ಇರುತ್ತದೆ ಎಂದರು. ಇದೇ ಸಮಯದಲ್ಲಿ ತರುಣ್ ಪ್ರೀತಿಯನ್ನು ಹೇಗೆ ತಿಳಿಸಿದ್ದು ಎಂಬ ಬಗ್ಗೆ ಹೇಳಿದ ಮಾಲತಿ ಅವರು, ನೇರವಾಗಿ ತರುಣ್ ನಮಗೆ ವಿಷಯ ತಿಳಿಸಲಿಲ್ಲ. ಅವನ ಸ್ನೇಹಿತ ಜಯಸಿಂಹ ಅಂತ ಲ್ಯಾಪ್ಟಾಪ್ನಲ್ಲಿ ಸೋನಲ್ ಫೋಟೋ ತೋರಿಸಿ, ಮದುವೆಯ ಬಗ್ಗೆ ಹೇಳಿದ. ದೊಡ್ಡವರು (ದರ್ಶನ್) ಈ ಮದುವೆಗೆ ಕಾರಣ ಆದವರು. ಅವರೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಕೇಳಿ ಖುಷಿಯಾಯ್ತು ಎಂದರು.
ಸೋನಲ್ ಕುರಿತು ಏನು ಅನ್ನಿಸ್ತದೆ ಎಂದು ಕೇಳಿದಾಗ ಮಾಲತಿ ಅವರು, ಸದ್ಯ ನಮ್ ಕೈಯಲ್ಲಿ ಗೊಂಬೆ ಇದೆ ಅಷ್ಟೇ... ಅದನ್ನು ನೋಡ್ತಾ ಇದ್ದೇನೆ ಸದ್ಯದ ಮಟ್ಟಿಗೆ. ಅವಳ ಬಗ್ಗೆ ಹೆಚ್ಚು ಏನೂ ಗೊತ್ತಿಲ್ಲ. ಚೆನ್ನಾಗಿ ಬಾಳುತ್ತಾರೆ ಎನ್ನೋ ನಂಬಿಕೆ ಇದೆ. ಸಂಸಾರ ಮಾಡಿದ್ಮೇಲೆ ಗೊತ್ತಾಗಬೇಕಷ್ಟೇ. ನಾನಂತೂ ನನ್ನ ಸೊಸೆಯನ್ನು ಮಗಳಂತೆಯೇ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ಹಿಂದೊಮ್ಮೆ ಮಾಲತಿ ಅವರು ಮಗನಿಗೆ ಮದುವೆಯಾಗದ ಕುರಿತು ಬೇಸರ ವ್ಯಕ್ತಪಡಿಸಿದ್ದರು. 'ತರುಣ್ಗೆ ಯಾವುದೇ ಕೆಟ್ಟ ಚಟ ಇಲ್ಲ, ಗುಟ್ಕಾ ಹಾಕಲ್ಲ, ಸಿಗರೇಟು ಮುಟ್ಟಿಲ್ಲ, ಇಷ್ಟು ಒಳ್ಳೆ ಗುಣ ಇರುವ ಹುಡುಗನಿಗೆ ಒಂದು ಹೆಣ್ಣು ಯಾಕೆ ಸಿಗ್ತಿಲ್ಲ. ಇವನಿಗೆ ಯಾಕೆ ಸೆಟ್ ಆಗುತ್ತಿಲ್ಲ ಎನ್ನೋದೇ ಆಲೋಚನೆಯಾಗಿತ್ತು. ಆದರೆ ಈಗ ಕನಸು ನನಸಾಗಿದೆ. ಅವನೂ ಮದುವೆಯಾಗ್ತಿರೋದು ಖುಷಿ ತಂದಿದೆ ಎಂದಿದ್ದರು.
ಈ ನಟಿಯರಿಗೆ ಅಪ್ಪನೂ ಸೈ- ಮಕ್ಕಳೂ ಸೈ... ತಂದೆ-ಮಗನ ಜೊತೆ ಲಿಪ್ಲಾಕ್ ಮಾಡಿದ ತಾರೆಯರು ಇವರೇ...