ರಚಿತಾ ರಾಮ್‌ ಸಿನಿಮಾದಲ್ಲಿ ರಾಗಿಣಿ ದ್ವಿವೇದಿಯ 20 ನಿಮಿಷದ ಸೀನ್ ಡಿಲೀಟ್ ?; ತುಪ್ಪದ ಬೆಡಗಿ ಗರಂ

Published : Feb 12, 2025, 02:53 PM ISTUpdated : Feb 12, 2025, 03:11 PM IST
ರಚಿತಾ ರಾಮ್‌ ಸಿನಿಮಾದಲ್ಲಿ ರಾಗಿಣಿ ದ್ವಿವೇದಿಯ 20 ನಿಮಿಷದ ಸೀನ್ ಡಿಲೀಟ್ ?; ತುಪ್ಪದ ಬೆಡಗಿ ಗರಂ

ಸಾರಾಂಶ

ರಾಗಿಣಿ ದ್ವಿವೇದಿ 'ಗಜರಾಮ' ಚಿತ್ರದ 'ಸಾರಾಯಿ ಶಾಂತಮ್ಮ' ಹಾಡಿನಲ್ಲಿ ಮಿಂಚಿದ್ದಾರೆ. 'ಸಂಜು ವೆಡ್ಸ್ ಗೀತಾ 2' ಚಿತ್ರದಲ್ಲಿ ತಮ್ಮ ಪಾತ್ರದ ಕೆಲವು ದೃಶ್ಯಗಳನ್ನು ತೆಗೆದುಹಾಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದ ಪುನರ್‌ ಬಿಡುಗಡೆ ವೇಳೆ ಆ ದೃಶ್ಯಗಳನ್ನು ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. ತಮ್ಮ ಪಾತ್ರಕ್ಕೆ ನ್ಯಾಯ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 7ರಂದು ಗಜರಾಮ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದಲ್ಲಿರುವ 'ಸಾರಾಯಿ ಶಾಂತಮ್ಮ' ಹಾಡಿನಲ್ಲಿ ನಟಿ ರಾಗಿಣಿ ದ್ವಿವೇದಿ ಸಖತ್ ಆಗಿ ಮಿಂಚಿದ್ದಾರೆ. ಹಾಡಿನಲ್ಲಿ ಇದ್ದರೂ ಕೂಡ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ, ಇದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ಈ ಪ್ರಚಾರದ ನಡುವೆ ತಮ್ಮ ಸಂಜು ವೆಡ್ಸ್‌ ಗೀತಾ 2 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಯಾಕೆ ಸಿನಿಮಾ ಶೂಟಿಂಗ್ ಮಾಡಿ ಸೀನ್ ಡಿಲೀಟ್ ಮಾಡಿದ್ದು? ಅನ್ನೋ ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ ರೀ-ರಿಲೀಸ್‌ ಸಮಯದಲ್ಲಿ ಆ ಸೀನ್ ಹಾಕಬೇಕು ಅಂತಿದ್ದಾರೆ.

'ನಾನು ಕಮ್ ಬ್ಯಾಕ್ ಮಾಡಿದಾಗ ಅಫೀಶಿಯಲ್ ಆಗಿ ಫುಲ್ ಫ್ಲೆಡ್ಜ್‌ನಲ್ಲಿ ಆಗಿದ್ದು ಸಂಜು ವೆಡ್ಸ್‌ ಗೀತಾ 2 ಸಿನಿಮಾ. ಆದರೆ ಯಾವುದೋ ಕಾರಣದಿಂದ ಕೆಲವೊಂದು ಭಾಗಗಳು ಮಿಸ್ ಆಗಿತ್ತು. ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನೆಗೆಟಿವ್ ಪಾತ್ರ. ಅದು ನನ್ನ ದೊಡ್ಡ ರಿಲೀಸ್ ಆಗಬೇಕಿತ್ತು ಆದರೆ ಸೀನ್‌ಗಳನ್ನು ಡಿಲೀಟ್ ಮಾಡಿರುವುದಕ್ಕೆ ಸರಿಯಾಗಿ ಕಾರಣ ಗೊತ್ತಿಲ್ಲ.  ಗಜರಾಮ ಸಿನಿಮಾದಲ್ಲಿ ಕೇವಲ ಹಾಡಿನಲ್ಲಿ ಕಾಣಿಸಿಕೊಂಡಿದ್ದೀನಿ. ಶೀಘ್ರದಲ್ಲಿ ಒಂದೆರಡು ಕನ್ನಡ ಸಿನಿಮಾಗಳು ಬರಲಿದೆ. ಕನ್ನಡ ಸಿನಿಮಾಗಳ ಜೊತೆ ಎರಡು ತೆಲುಗು, ಒಂದು ತಮಿಳು ಮತ್ತು ಒಂದು ಹಿಂದಿ ಸಿನಿಮಾ ಮಾಡುತ್ತಿದ್ದೀನಿ. ಕನ್ನಡ ಸಿನಿಮಾದಲ್ಲಿ ಇರಬೇಕು ಅನ್ನೋ ಉದ್ದೇಶದಲ್ಲಿ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಟಿಸಿದ್ದು. ಆದರೆ ಯಾವ ಕೈವಾಡ ಏನ್ ಅಯ್ತು ಯಾವ ಉದ್ದೇಶಕ್ಕೆ ಡಿಲೀಟ್ ಆಯ್ತು ಅನ್ನೋದು ಗೊತ್ತಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಾಗಿಣಿ ದ್ವಿವೇದಿ ಮಾತನಾಡಿದ್ದಾರೆ.

ಒಂದು ಗಂಡು ಮಗು ಬೇಕು ಕಣೋ ನಮ್ಮ ಲೆಗೆಸಿ ಮುಂದುವರೆಸಲು; ರಾಮ್ ಚರಣ್‌ಗೆ ಡಿಮ್ಯಾಂಡ್ ಮಾಡಿದ ಚಿರಂಜೀವಿ

'ದೊಡ್ಡ ಆರ್ಟಿಸ್ಟ್‌ ಆಗಿ ಒಂದು ಸಿನಿಮಾದಲ್ಲಿ ಪ್ರೀತಿ ವಿಶ್ವಾಸಕ್ಕೆ ಮಾಡುತ್ತೀನಿ ಆದರೆ ಅದನ್ನು ಅವರು ಉಳಿಸಿಕೊಂಡಿಲ್ಲ ಅಂದ್ರೆ ಬೇಸರ ಆಗುತ್ತದೆ. ನಾನು ನಟಿಸಿರುವ ಬಹುತೇಕ ಸೀನ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಈಗ ಮತ್ತೆ ಸಿನಿಮಾವನ್ನು ರೀ-ರಿಲೀಸ್ ಮಾಡುತ್ತಿದ್ದಾರೆ ಅಂತ ಕೇಳಿಪಟ್ಟೆ...ಈಗ ಆ 20 ನಿಮಿಷವನ್ನು ಸೇರಿಸುತ್ತಿದ್ದೀರಿ ಆದರೆ ಆಗ ಯಾಕೆ ತೆಗೆದಿದ್ದು? ಏಕೆಂದರೆ ನನ್ನ ಪಾತ್ರಕ್ಕೆ ಈ ವರ್ಷ ತುಂಬಾನೇ ಹೈಪ್ ಇತ್ತು ದೊಡ್ಡ ಮಟ್ಟದಲ್ಲಿ ಅನೌನ್ಸ್‌ಮೆಂಟ್ ಆಗಿದೆ. ನಾನು ಇಲ್ಲಿ ಇಲ್ಲದೇ ಇರುವ ಸಮಯದಲ್ಲಿ ಸಿನಿಮಾ ರಿಲೀಸ್ ಮತ್ತು ಪ್ರಮೋಷನ್ ನಡೆದಿದೆ. ಇದೆಲ್ಲಾ ಕರ್ಮ...ಕೆಟ್ಟ ಪ್ರಪಂಚದಲ್ಲಿ ನಾವು ಒಳ್ಳೆಯವರಾಗಿದ್ದೀವಿ ಅಷ್ಟೇ. ಯಾಕೆ 20 ನಿಮಿಷ ಸೀಟ್ ಡಿಲೀಟ್ ಮಾಡಿದ್ದು ಎಂದು ನಾನು ಪ್ರಶ್ನೆ ಮಾಡಿಲ್ಲ ಏಕೆಂದರೆ ಸಿನಿಮಾದಲ್ಲಿ ನಟಿಸಿರುವ ಕಲಾವಿದರಿಗೆ ನೀವು ಬೆಲೆ ಕೊಡಲು ಆಗಿಲ್ಲ. ಮೋಹನ್‌ಲಾಲ್‌ ಸರ್‌ ಜೊತೆ ದೊಡ್ಡ ಸಿನಿಮಾ ಮಾಡುತ್ತಿದ್ದೀನಿ ನಾನು ತುಂಬಾ ಬ್ಯುಸಿಯಾಗಿದ್ದೀನಿ. ನನಗೆ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನಾನು ದೊಡ್ಡವರು ಎಂದು ಮಾತನಾಡುವುದಕ್ಕಿಂತ ಕೆಲಸ ಮಾಡಿ ತೋರಿಸುವುದ ಬೆಸ್ಟ್‌ ಅನಿಸುತ್ತದೆ' ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ. 

ಇದ್ದಕ್ಕಿದ್ದಂತೆ 'ಸೀತಾರಾಮ' ಧಾರಾವಾಹಿಯಿಂದ ಹೊರ ನಡೆಯಲು ಕಾರಣ ಬಿಚ್ಚಿಟ್ಟ ಡಾಕ್ಟರ್ ಶ್ಯಾಮ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ