
ಸ್ಯಾಂಡಲ್‌ವುಡ್ ಯಂಗ್ ಆ್ಯಂಡ್ ಎನರ್ಜಿಟಿಕ್ ಬಾಯ್ ಕಿರಣ್ ಶ್ರೀನಿವಾಸ್ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ನಿರೂಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು 'ಕಾಲ್ ಕೇಜಿ ಪ್ರೀತಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹಿತಾ ಚಂದ್ರಶೇಖರ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಗುರು-ಹಿರಿಯರ ಸಮ್ಮುಖದಲ್ಲಿ ಡಿಸೆಂಬರ್ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಸಪ್ತಪದಿ ತುಳಿದ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಮದುವೆ ಪೋಟೋಗಳಿವು!
ಮದುವೆಯಾದ ನಂತರ ಪತಿಯೊಂದಿಗೆ Seychelles ಗೆ ತೆರಳಿದ ನವ ದಂಪತಿಗಳು ರೋಮ್ಯಾಂಟಿಕ್ ಲೈಫ್ ನಡುವೆ ಕೊಂಚ ತುಂಟಾಟ ಮಾಡಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಕಪಲ್ ಗೋಲ್ ಫೋಟೋವನ್ನು ಇಮಿಟೇಟ್ ಮಾಡಿದ್ದಾರೆ. ಹಿತಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೊದಲ ಫೋಟೋದಲ್ಲಿ ಪತಿ ಕೈ ಹಿಡಿದಿದ್ದಾರೆ. ಎರಡನೇ ಫೋಟೋದಲ್ಲಿ ಕಾಲಲ್ಲಿ ಒದ್ದಿದ್ದಾರೆ. ಆ ನಂತರ ಕಿರಣ್ ನೆಲದ ಮೇಲೆ ಬಿದ್ದಿದ್ದಾರೆ.
ಇದನ್ನು ಕಿರಣ್ ಶ್ರೀನಿವಾಸ್ ಕೂಡ ಪತ್ನಿಗೆ ಒದ್ದಿರುವ ಹಾಗೆ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಕೇವಲ ತಮಾಷೆಗಾಗಿ ಮಾಡಿದ್ದಾರೆಯೇ ಹೊರತು ಸೀರಿಯಸ್ ಆಗಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.