Yash ಹುಟ್ಟುಹಬ್ಬಕ್ಕೆ ಬ್ರೇಕ್; ಕ್ಷಮಿಸಿ ಎಂದು ಅಭಿಮಾನಿಗಳಿಗೆ ಪತ್ರ ಬರೆದ ರಾಕಿ

Published : Jan 06, 2023, 09:56 AM ISTUpdated : Jan 06, 2023, 10:31 AM IST
Yash ಹುಟ್ಟುಹಬ್ಬಕ್ಕೆ ಬ್ರೇಕ್; ಕ್ಷಮಿಸಿ ಎಂದು ಅಭಿಮಾನಿಗಳಿಗೆ ಪತ್ರ ಬರೆದ ರಾಕಿ

ಸಾರಾಂಶ

ಮೂರು ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದ ಯಶ್. ಅಭಿಮಾನಿಗಳಿಗೆ ಪತ್ರ ಬರೆದ ರಾಕಿಂಗ್ ಸ್ಟಾರ್...

ಕಿರಾತಕ, ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ, ಲಕ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಕಿಂಗ್ ಸ್ಟಾರ್ ಯಶ್ ಆಗಿ ಪರಿಚಯವಾದ ನವೀನ್ ಕುಮಾರ್ ಗೌಡ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಮೂಲಕ ವಿಶ್ವಾದ್ಯಂತ ರಾಕಿ ಬಾಯ್ ಆಗಿ ಪರಿಚವಾದರು. ಪರ್ಫೆಕ್ಟ್‌ ಮಗ ಗಂಡ ಅಪ್ಪ ಹಾಗೂ ಸಹೋದರನಾಗಿರುವ ಯಶ್‌ ಇಸ್‌ ದಿ ರಿಯಲ್ ಜೆಂಟಲ್‌ಮ್ಯಾನ್ ಎನ್ನುತ್ತಾರೆ ಕನ್ನಡಿಗರು. ಆದರೆ ಈ ವರ್ಷವೂ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ ಎಂದು ಅಭಿಮಾನಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ. 

ಜನವರಿ 8ರಂದು 37ರ ವಸಂತಕ್ಕೆ ಕಾಲಿಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನ ಊರಿನಲ್ಲಿ ಇರುವುದಿಲ್ಲ ಎಂದಿದ್ದಾರೆ. ಪತ್ರ ಓದಿದ ಅಭಿಮಾನಿಗಳು ಕೊಂಚ ಬೇಸರ ಮಾಡಿಕೊಂಡಿದ್ದಾರೆ ಆದರೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ. 

ಯಶ್ ಪತ್ರ:

ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ.

ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೆ ಇತ್ತೀಚಿನ ವರ್ಷಗಳಲ್ಲಿ. ಯಾವಾಗ ನೀವು ನನ್ನ ದಿನವನ್ನು ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ. ಹಾಗಾಗಿ ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನು ನೋಡಬೇಕು..ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲ್ಲಿ ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರೋದೆನನ್ನೊ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ. 

ಕ್ಷಮಿಸಿ..ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ. 

ನಿಮ್ಮ ಪ್ರೀತಿಯ 
ಯಶ್

 

ಮುಂದಿನ ಸಿನಿಮಾ:

ಸಾಮಾನ್ಯವಾಗಿ ಸೆಲೆಬ್ರಿಟಿ ಹುಟ್ಟುಹಬ್ಬದ ತಮ್ಮ ಚಿತ್ರದ ಬಗ್ಗೆ ವಿಶೇಷ ಮಾಹಿತಿಯನ್ನು ಬಹಿರಂಗ ಪಡಿಸುತ್ತಾರೆ. ಕೆಜಿಎಫ್ ಎರಡು ಭಾಗಗಳ ನಂತರ ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ಸುಳಿವು ಕೊಟ್ಟಿಲ್ಲ. ಈಗಾಗಿ ಮೂರ್ನಾಲ್ಕು ಸ್ಟಾರ್ ನಿರ್ದೇಶಕರ ಜೊತೆ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಈ ನಿರೀಕ್ಷೆಯಲ್ಲಿ ಜನವರಿ 8ರಂದು ಹೊಸ ಸಿನಿಮಾ ಘೋಷಣೆ ಮಾಡಬಹುದು.  ಕೆಲವು ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ತಮಿಳು ನಿರ್ದೇಶಕರ ಜೊತೆ ಯಶ್ ಕೈ ಜೋಡಿಸಿ ಸುಮಾರು 400 ಕೋಟಿ ರೂಪಾಯಿ ಬಜೆಟ್ ಸಿನಿಮಾ ಚರ್ಚೆ ಮಾಡಿದ್ದಾರಂತೆ. ಇದೊಂದು ಆಕ್ಷನ್ ಡ್ರಾಮಾ ಸಿನಿಮಾ ಆಗಲಿದ್ದು ಸೈಂಟಿಫಿಕ್ ಫಿಕ್ಷನ್‌ ಥ್ರಿಲ್ ಶೇಡ್‌ ಇರಲಿದೆ. ಪೂಜೆ ಹೆಗ್ಡೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಮಾತುಗಳಿದೆ. 

ನೆಪೊಟಿಸಂ ಅಂದ್ರೆ ಬಲದಿಂದ ತುಳಿಯೋದು; ಗೇಲಿ ಮಾಡಬೇಡಿ ಎಂದ ಯಶ್

ರಾಮಚಾರಿನೇ ಫಸ್ಟ್‌?

ಕೆಲವು ದಿನಗಳ ಹಿಂದೆ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಅಭಿನಯಿಸಿರುವ ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಚಿತ್ರಕ್ಕೆ 8 ವರ್ಷಗಳ ಸಂಭ್ರಮ. ಈ ಚಿತ್ರವನ್ನು ಅಗಲೇ ನಿರ್ದೇಶಕ ರಾಜಮೌಳಿ ನೋಡಿ ಮೆಚ್ಚಿಕೊಂಡಿದ್ದರು. ಚಿತ್ರದ ನಿರ್ಮಾಪಕರಾದ ಜಯಣ್ಣ ಮಾತನಾಡಿದ್ದಾರೆ.  ‘ಒಳ್ಳೆಯ ಚಿತ್ರವನ್ನು ಕೊಟ್ಟಹೆಮ್ಮೆ ನಮ್ಮ ಸಂಸ್ಥೆಗೆ ಇದೆ. ಬಾಕ್ಸ್‌ ಅಫೀಸ್‌ನ ಎಲ್ಲ ದಾಖಲೆಗಳನ್ನು ಮೀರಿ ಗೆದ್ದ ಸಿನಿಮಾ ಇದು. ಈ ಯಶಸ್ಸು ನಟ ಯಶ್‌ ಅವರಿಗೆ ಸೇರಬೇಕು. ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರಿಗೆ ಮೊದಲ ನಿರ್ದೇಶನದ ಚಿತ್ರವಾಗಿತ್ತು. ಯಶ್‌ ಅವರೇ ನಿರ್ದೇಶಕರನ್ನು ಕರೆದು ಒಳ್ಳೆಯ ಕತೆ ಮಾಡಿಸಿ, ಎಲ್ಲ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಲಾಭದ ಲೆಕ್ಕಾಚಾರ ನೋಡಿದರೆ ‘ಕೆಜಿಎಫ್‌’ ಸಿನಿಮಾ ಬರುವವರೆಗೂ ‘ರಾಮಾಚಾರಿ’ ಚಿತ್ರವೇ ಗಳಿಕೆಯಲ್ಲಿ ನಂಬರ್‌ ವನ್‌ ಸ್ಥಾನದಲ್ಲಿತ್ತು’ ಎನ್ನುತ್ತಾರೆ ಜಯಣ್ಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್