ಬಳ್ಳಾರಿ: ಶಿವಣ್ಣ ನೋಡಲು ನೂಕು ನುಗ್ಗಲು, ಲಾಠಿ ಏಟಿನ ರುಚಿ ನೋಡಿದ ಅಭಿಮಾನಿಗಳು..!

By Girish Goudar  |  First Published Jan 5, 2023, 1:30 AM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದ ಯಶಸ್ಸು ಹಿನ್ನಲೆಯಲ್ಲಿ ಬಳ್ಳಾರಿಯ ನಟರಾಜ್ ಹಾಗೂ ಉಮಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಶಿವಣ್ಣ ದಂಪತಿ ಹಾಗೂ ವೇದ ಚಿತ್ರ ತಂಡ. 


ಬಳ್ಳಾರಿ(ಜ.05): ಸ್ಯಾಂಡಲ್‌ವುಡ್‌ ನಟ ಶಿವರಾಜ್ ಕುಮಾರ್ ಅವರನ್ನ ನೋಡಲು ಮುಗಿಬಿದ್ದ ಘಟನೆ ನಿನ್ನೆ(ಬುಧವಾರ) ನಗರದಲ್ಲಿ ನಡೆದಿದೆ. ಈ ವೇಳೆ ಪರಿಸ್ಥಿತಿಯನ್ನ ನಿಯಂತ್ರಿಸಲು ಪೊಲೀಸರು ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದ ಯಶಸ್ಸು ಹಿನ್ನಲೆಯಲ್ಲಿ ಬಳ್ಳಾರಿಯ ನಟರಾಜ್ ಹಾಗೂ ಉಮಾ ಚಿತ್ರಮಂದಿರಕ್ಕೆ ಶಿವಣ್ಣ ದಂಪತಿ ಹಾಗೂ ವೇದ ಚಿತ್ರ ತಂಡ ಭೇಟಿ ನೀಡಿತ್ತು. ಈ ವೇಳೆ ಶಿವಣ್ಣನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾದ ಪರಿಣಾಮ ಪೊಲೀಸರು ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ್ದಾರೆ.

Tap to resize

Latest Videos

undefined

'ವೇದ'ನ ಗೆಲುವು ಮತ್ತೆ ಒಂದಾದ ಶಿವಣ್ಣ-ಹರ್ಷ: ಮತ್ತೆ ಡೈರೆಕ್ಷನ್ ಮಾಡಲು ಹೇಳಿದ ಸೆಂಚುರಿ ಸ್ಟಾರ್

ಬಹಳಷ್ಟು ಜನರಿದ್ದ ಕಾರಣ ಅಭಿಮಾನಿಗಳನ್ನು ನಿಯಂತ್ರಣ ಮಾಡಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಶಿವಣ್ಣ ಅವರಿಗೆ ಹೂಮಳೆ ಗರೆದು ಸ್ವಾಗತ ಕೋರಿದ್ದಾರೆ ಅಭಿಮಾನಿಗಳು. ಶಿವಣ್ಣ ದಂಪತಿ ಅಭಿಮಾನಿಗಳ ಜೊತೆಗೆ ಕೆಲ ಕಾಲ ಸಿನಿಮಾ ನೋಡಿ ಎಂಜಾಯ್‌ ಮಾಡಿದ್ದಾರೆ. 

click me!