ಲೀಕ್ ಆಗಲಿದೆ 'ಪಾತರಗಿತ್ತಿ' ಸೃಷ್ಟಿಕರ್ತನ ಪೆನ್‌ ಡ್ರೈವ್ ಸ್ಟೋರಿ..! ದೊಡ್ಡವರೆಲ್ಲ ಜಾಣರಲ್ಲ ಅಂದ್ರೇನು?

Published : May 23, 2024, 02:40 PM ISTUpdated : May 23, 2024, 07:18 PM IST
ಲೀಕ್ ಆಗಲಿದೆ 'ಪಾತರಗಿತ್ತಿ' ಸೃಷ್ಟಿಕರ್ತನ ಪೆನ್‌ ಡ್ರೈವ್ ಸ್ಟೋರಿ..! ದೊಡ್ಡವರೆಲ್ಲ ಜಾಣರಲ್ಲ ಅಂದ್ರೇನು?

ಸಾರಾಂಶ

ಸದ್ಯ ರಾಜಕೀಯ ವಲಯ, ಹಲವರ ವೈಯಕ್ತಿಕ ಬದುಕಿನಲ್ಲಿ ಪೆನ್ ಡ್ರೈವ್ ಸಂಚಲನವನ್ನು ಹುಟ್ಟಿಸುತ್ತಾ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಟೈಟಲ್ ಕೇಳಿದ ತಕ್ಷಣ ಕೇವಲ ಒಂದೇ ಕೋನದಿಂದ ಯಾಕೆ ಯೋಚನೆ ಮಾಡುತ್ತೀರಾ? ಅದರೊಳಗಡೆ ದೇವರು, ದೆವ್ವ, ಮನುಷ್ಯ, ಇತಿಹಾಸ, ಸತ್ಯ..

ಪ್ರಚಲಿತ ವಿದ್ಯಾಮಾನದಲ್ಲಿ 'ಪೆನ್‌ ಡ್ರೈವ್' ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ರಾಜಕೀಯದಲ್ಲಿ ಹೆಚ್ಚೇ ಎಂದು ಹೇಳಬಹುದು. ಪ್ರಚಲಿತ ವಿದ್ಯಾಮಾನದಲ್ಲಿ 'ಪೆನ್‌ ಡ್ರೈವ್' ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ರಾಜಕೀಯದಲ್ಲಿ ಹೆಚ್ಚೇ ಎಂದು ಹೇಳಬಹುದು. ಕರ್ನಾಟಕ ಮಾತ್ರವಲ್ಲ, ಇಡೀ ಭಾರತ ಸೇರದಂತೆ ಪೆನ್‌ ಡ್ರೈವ್ ಪದ ಕೇಳಿದರೇ ಬೆಚ್ಚಿ ಬೀಳುವಂತಾಗಿದೆ. ಹಾಸನ, ಹೊಳೆನರಸೀಪುರ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣರ ಪೆನ್‌ ಡ್ರೈವ್ (Pen Drive) ಪ್ರಕರಣ ಈಗ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ ಎನ್ನಬಹುದು.

ಇದೀಗ, ಈ ಪೆನ್‌ ಡ್ರೈವ್‌ ಪದವನ್ನು ಕತೆಯ ಮೂಲಕ, ವಿಡಿಯೋ ಮಾಡಿ ಸಿನಿಮಾ ಹೆಸರಿನಲ್ಲಿ ಬಿಡುಗಡೆ ಮಾಡುವ ಪ್ರಯತ್ನವೊಂದು ನಡೆದಿದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರುತ್ತಿದೆ. 'ದೊಡ್ಡವರಲ್ಲ ಜಾಣರಲ್ಲ' ಎಂಬ ಅಡಿಬರಹವಿದೆ. ಈ ಹಿಂದೆ 'ಪಾತರಗಿತ್ತಿ' ಎನ್ನುವ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದ ಕೆರ್ನಳ್ಳಿ ಈಶ್ವರ್ ಈ Pen Drive ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೂಪರ್ ಮೂವೀಸ್ ಮೇಕರ‍್ಸ್ ಅಡಿಯಲ್ಲಿ ಲೋಕೇಶ್.ಆರ್ ಬಂಡವಾಳ ಹೂಡುತ್ತಿದ್ದಾರೆ. ಮಂಜುನಾಥ.ಎಂ.ಸಿ ಮತ್ತು ಬದ್ದುದ್ದೀನ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 

ಮನುಷ್ಯನೊಬ್ಬ ಮುಖವಾಡ ಹಾಕಿಕೊಂಡು ಪೆನ್ ಡ್ರೈವ್ ಹಿಡಿದುಕೊಂಡಿರುವುದು. ಮರದ ಬಳ್ಳಿಯಲ್ಲಿ ಎಲೆಗಳ ಬದಲು ಪೆನ್ ಡ್ರೈವ್‌ಗಳು ಇರುವ ಪೋಸ್ಟರ್ ನಿರೀಕ್ಷೆ ಹೆಚ್ಚಿಸಿದೆ. ಶೀರ್ಷಿಕೆಗೂ ಕಥೆಗೂ ಏನು ಸಂಬಂಧ. ಯಾರ‍್ಯಾರು ತಗಲಿಕೊಳ್ತಾರೆ. ಇದೇ ಟೈಟಲ್ ಇಡಲು ಯಾರಿಂದ ಉತ್ತೇಜನ ಸಿಕ್ಕಿತು. ಏನೆಲ್ಲಾ ಅಂಶಗಳು ಇರಲಿದೆ. ಚಿತ್ರದಲ್ಲಿ ಪೋಲೀಸ್, ಕೋರ್ಟು, ವಕೀಲರು, ದಸ್ತಗಿರಿ ಹೀಗೆಲ್ಲ ಇರುತ್ತಾ ಎಂಬುದಕ್ಕೆ ನಿರ್ದೇಶಕರು ದಸ್ತಗಿರಿನೂ ಆಗುತ್ತೆ.

ಕರ್ನಾಟಕದಲ್ಲಿ ಚಿತ್ರಮಂದಿರಗಳ ಬಂದ್ ವಿಚಾರ, ಫಿಲಂ ಚೇಂಬರ್‌ನಲ್ಲಿ ಹೈ ವೋಲ್ಟೇಜ್ ಮೀಟಿಂಗ್!

ಜೈಲು ಊಟನೂ ಇರುತ್ತೆ. ಅದು ಸಿನಿಮಾದ ಮೂಲಕಥೆ. ಒಟ್ಟಿನಲ್ಲಿ ಎಲ್ಲರೂ ಊಹಿಸುವಂತಹ ಪಾತ್ರಗಳು ಬರುತ್ತದೆ ಎಂದಷ್ಟೇ ಹೇಳಿ ಉತ್ತರ ಕೊಡದೆ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ಸದ್ಯ ರಾಜಕೀಯ ವಲಯ, ಹಲವರ ವೈಯಕ್ತಿಕ ಬದುಕಿನಲ್ಲಿ ಪೆನ್ ಡ್ರೈವ್ ಸಂಚಲನವನ್ನು ಹುಟ್ಟಿಸುತ್ತಾ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಟೈಟಲ್ ಕೇಳಿದ ತಕ್ಷಣ ಕೇವಲ ಒಂದೇ ಕೋನದಿಂದ ಯಾಕೆ ಯೋಚನೆ ಮಾಡುತ್ತೀರಾ?

ನಾನಿನ್ನೂ ಮದುವೆಯಾಗಿಲ್ಲ, ಉಪೇಂದ್ರರ 'A'ಸಿನಿಮಾ ನನ್ನ ತಲೆ ಹಾಳು ಮಾಡಿದೆ; ನಟಿ ಚಾಂದಿನಿ

ಅದರೊಳಗಡೆ ದೇವರು, ದೆವ್ವ, ಮನುಷ್ಯ, ಇತಿಹಾಸ, ಸತ್ಯ, ಸಹಿ ಘಟನೆಗಳು, ಕೆಲವೊಂದು ಮುಖ್ಯ ಕಂತುಗಳು ಇರಬಹುದು. ಹಾಗಾಗಿ ಪೆನ್ ಡ್ರೈವ್ ಎನ್ನುವುದು ಒಂದು ವಿಶ್ವ. ಅದರೊಳಗಡೆ ಏನನ್ನಾದರೂ ತುಂಬಿಸಬಹುದು. ಆದರೆ ಅದರ ಒಳಗಡೆ ಜನರು ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚಾಗಿ ವಿಷಯಗಳು ಇರುತ್ತವೆ. ಅದು ದೊಡ್ಡವರು ಅಥವಾ ಚಿಕ್ಕವರು ಇರಬಹುದು. ಸಮಾಜದ ಎಲ್ಲಾ ಮುಖಗಳು ಸಿಗುತ್ತದೆ.

ಕ್ರಿಕೆಟ್ ಮ್ಯಾಚ್ ನಂತರದ ಕಿಚ್ಚ ಸುದೀಪ್ ಹೊಸ ಹೇರ್‌ಸ್ಟೈಲ್‌ಗೆ ಚಪ್ಪಾಳೆ ಸುರಿಮಳೆ!

ಇದನ್ನು ಸಕರಾತ್ಮಕವಾಗಿ ನೋಡಿದರೆ ಆಗುವುದಾದರೂ ಏನು? ಒಟ್ಟಿನಲ್ಲಿ ಯಾರಿಗೂ ಅನ್ವಯವಾಗುವಂತ ಸನ್ನಿವೇಶಗಳು ಇರುವುದಿಲ್ಲ. ದೃಶ್ಯಗಳು ಸತ್ಯವೋ, ಮಿಥ್ಯವೋ ಎಂಬುದು ತೆರೆಕಂಡ ನಂತರ ತಿಳಿಯಲಿದೆ. ಅದ್ದೂರಿ ತಾರಾಗಣ ಇರುತ್ತದೆ. ಎಲ್ಲವನ್ನು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎನ್ನುತ್ತಾರೆ ಈಶ್ವರ್.

ಯಶ್ ನಿರ್ಮಾಣ-ನಟನೆಯ 'ರಾಮಾಯಣ' ಮೇಲೆ ಬಿತ್ತು ಕೇಸ್; ಶೂಟಿಂಗ್‌ ಮುಂದೂಡಿದ ಟೀಮ್!
 
ಬೆಂಗಳೂರು, ಬಳ್ಳಾರಿ, ಹಾಸನ, ಸಕಲೇಶಪುರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸಂಗೀತ ಹಂಸರಾಗ, ಛಾಯಾಗ್ರಹಣ ವಿಜಯ್ ರಾಘವ್, ಸಂಭಾಷಣೆ ಶ್ರೀಹರ್ಷ ಚಿತ್ರದುರ್ಗ, ಸಂಕಲನ ಜೀವನ್‌ರಾಂ ಅವರದಾಗಿದೆ. ಪ್ಯಾನ್ ಮಟ್ಟದ ಅಂಶಗಳು ಆಗಿರುವುದರಿಂದ, ಎನ್‌ಆರ್‌ಎ ಫಿಲಂ ಸಂಸ್ಥೆಯು ಕಥೆಯ ಏಳೆಯನ್ನು ತಿಳಿದುಕೊಂಡು, ವಿತರಣೆ ಮಾಡಲು ಆಸಕ್ತಿ ವಹಿಸಿರುವುದು ತಂಡಕ್ಕೆ ಶಕ್ತಿ ಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್