ಸದ್ಯ ನಟ ಯಶ್ ಅವರು ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗದ್ದಾರೆ. ಜತೆಗೆ, ಬಾಲಿವುಡ್ ಸಿನಿಮಾ ರಾಮಾಯಣದಲ್ಲಿ ರಾವಣನ ಪಾತ್ರವನ್ನು ಮಾಡುತ್ತಿದ್ದು, ಅದಕ್ಕೆ ನಿರ್ಮಾಪಕರಾಗಿಯೂ ಜತೆಯಾಗಿದ್ದಾರೆ.
ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರನ್ನು ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ (Anupama Gowda) ಅವರು ಸಂದರ್ಶನ ಮಾಡಿರುವ ವೀಡೀಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅನುಪಮಾ ಯಶ್‌ಗೆ 'ನೀವು ಯಾವತ್ತಾದ್ರೂ ಅಡುಗೆ ಮಾಡಿದ್ದು ಇದ್ಯಾ?' ಎಂದು ಕೇಳಿದ್ದಾರೆ. ಅದಕ್ಕೆ ಯಶ್ ;ಹೂಂ, ಒಮ್ಮೆ ನನ್ನ ಹೆಂಡ್ತಿಗೆ ಮ್ಯಾಗಿ ಮಾಡಿ ಕೊಟ್ಟಿದ್ದೆ' ಎಂದಿದ್ದಾರೆ. ಅದಕ್ಕೆ ಅನುಪಮಾ 'ಮ್ಯಾಗಿ..' ಎಂದಿದ್ದಾರೆ. ಯಶ್ ಪಕ್ಕ ಕುಳಿತಿದ್ದರವರು ರಾಕಿಂಗ್ ಸ್ಟಾರ್ ಉತ್ತರ ಕೇಳಿ ನಕ್ಕಿದ್ದಾರೆ.
ಎಷ್ಟೋ ಗಂಡಸರು ಮ್ಯಾಗಿ ಮಾಡುವುದು ಅಡುಗೆ ಮಾಡುವುದೇ ಆಗಿದೆ ಎಂದುಕೊಂಡಿದ್ದಾರೆ. ಆದರೆ, ರೆಡಿಮೇಡ್ ಮ್ಯಾಗಿಯನ್ನು 2 ನಿಮಿಷದಲ್ಲಿ ತಿನ್ನುವುದಕ್ಕೆ ಸಿದ್ಧಪಡಿಸುವುದು ಅಡುಗೆ ಎಂದಾಗುವುದಿಲ್ಲ ಎಂಬ ಅನಿಸಕೆ ಹಲವರಲ್ಲಿದೆ. ಅದಿರಲಿ, ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಮ್ಯಾಗಿ ಮಾಡಿಕೊಟ್ಟಿರುವುದು ಸಹ ದೊಡ್ಡ ಸಂಗತಿಯೇ. ಏಕೆಂದರೆ, ಜಗದ್ವಿಖ್ಯಾತ ನಟ ಯಶ್, ತಮ್ಮ ಹೆಂಡತಿಗೆ ಮ್ಯಾಗಿ ಮಾಡಿಕೊಟ್ಟಿರುವುದು ಚಿಕ್ಕ ವಿಷಯ ಹೇಗಾಗುತ್ತದೆ? ಅಷ್ಟೇ ಅಲ್ಲ, 'ಅಡುಗೆಗೆ ಅತ್ಯಂತ ಮುಖ್ಯ ವಸ್ತು ಯಾವುದು' ಎಂಬ ಪ್ರಶ್ನೆಗೆ ಯಶ್ 'ಉಪ್ಪು ಎನ್ನುವ ಬದಲು, ಪ್ರೀತಿಯಿಂದ ಅಡುಗೆ ಮಾಡಿದರೆ ಅದೇ ಅತ್ಯಂತ ದೊಡ್ಡದು' ಎಂದಿದ್ದಾರೆ.
undefined
ಕಾಮ-ಪ್ರೇಮ ಅನೈತಿಕ ಕಥೆಗಳನ್ನೇ ಸಿನಿಮಾ ಮಾಡುತ್ತಿದ್ದ ಪುಟ್ಟಣ್ಣ ಮಡಿವಂತರ ಮಧ್ಯೆ ಗೆದ್ದಿದ್ದು ಹೇಗೆ?
ಸದ್ಯ ನಟ ಯಶ್ ಅವರು ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗದ್ದಾರೆ. ಜತೆಗೆ, ಬಾಲಿವುಡ್ ಸಿನಿಮಾ ರಾಮಾಯಣದಲ್ಲಿ ರಾವಣನ ಪಾತ್ರವನ್ನು ಮಾಡುತ್ತಿದ್ದು, ಅದಕ್ಕೆ ನಿರ್ಮಾಪಕರಾಗಿಯೂ ಜತೆಯಾಗಿದ್ದಾರೆ. ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಕಂಡು ಕೇಳರಿಯದ ಬಿಗ್ ಬಜೆಟ್ ಸಿನಿಮಾ ರಾಮಾಯಣ ಎನ್ನಲಾಗಿದೆ. ಕಾರಣ ಬಾಲಿವುಡ್‌ನಡ್‌ನಲ್ಲಿ ಬಂದಿರುವ ಇದುವರೆಗಿಗ ಅತ್ಯಂತ ಹೆಚ್ಚು ಬಜೆಟ್ ಹೊಂದಿರುವ ಚಿತ್ರವೆಂದರೆ ಅದು ರಣಬೀರ್ ಕಪೂರ್-ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ'. ಈ ಚಿತ್ರದ ಬಜೆಟ್ 420 ಕೋಟಿ.
'ಚೈತ್ರದ ಪ್ರೇಮಾಂಜಲಿ' ನಟಿ ಬಾಳಲ್ಲಿ ಘೋರ ದುರಂತ; ಪತಿಗೆ ಏನಾಗಿದೆ, ಎಲ್ಲಿದ್ದಾರೆ ಶ್ವೇತಾ?
ಆದರೆ, ಮುಂದೆ ಬಾಲಿವುಡ್‌ನಲ್ಲಿ ಬರುತ್ತಿರುವ ರಾಮಾಯಣ ಚಿತ್ರದ ಬಜೆಟ್ ಬರೋಬ್ಬರಿ 835 ಕೋಟಿ. ಅಂದರೆ ಬ್ರಹ್ಮಾಸ್ತ್ರ ಸಿನಿಮಾದ ಎರಡು ಪಟ್ಟು. ಅಚ್ಚರಿ ಹಾಗೂ ಕಾಕತಾಳೀಯ ಎಂದರೆ, ಎರಡೂ ಚಿತ್ರಗಳ ಹೀರೋ ರಣಬೀರ್ ಕಪೂರ್. ಆದರೆ, ಮುಂಬರುವ ಬಾಲಿವುಡ್ ಚಿತ್ರ ರಾಮಾಯಣವನ್ನು ರಾವಣನ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನ ಇದಾಗಿದೆ ಎಂಬ ಮಾಹಿತಿ ಇದೆ. ಹಾಗಿದ್ದರೆ, ಮುಂಬರುವ ಬಾಲಿವುಡ್ ರಾಮಾಯಣವನ್ನು 'ರಾಮಾಯಣ' ಹೆಸರಿನ 'ರಾವಣಾಯಣ' ಎನ್ನಬಹುದೇ?
ತುಂಬಿದ ಅಸೆಂಬ್ಲಿಯಲ್ಲಿ ಸೀರೆ-ಬ್ಲೌಸ್ ಕಿತ್ತ ದೊರೆ ಮುರುಗನ್; ಜಯಲಲಿತಾ ಅಂದು ಹೇಳಿದ್ದೇನು?
ಗೊತ್ತಿಲ್ಲ, ಸಿನಿಮಾದ ಕಥೆ ಗೊತ್ತಿಲ್ಲದೇ ಹಾಗೆ ಹೇಳಲು ಅಸಾಧ್ಯವಾದರೂ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇರಲಿ, ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ ರಾಮಾಯಣ ತೆರೆಗೆ ಬಂದಾಗ ಅದು ನಿಜವಾಗಿಯೂ ರಾಮಾಯಣವೇ ಅಥವಾ ರಾವಣಾಯಣವೇ ಎಂಬುದು ನಿರ್ಧಾರವಾಗುತ್ತದೆ. ಒಟ್ಟಿನಲ್ಲಿ, ಸದ್ಯ ಯಶ್ ಅಡುಗೆ ವಿಷಯ ಭಾರೀ ವೈರಲ್ ಆಗುತ್ತಿದೆ.
ಭಾಷೆ ಬಗ್ಗೆ ಮತ್ತೆ 'ಕಿರಿಕ್' ಮಾಡಿಕೊಂಡ್ರಾ ರಶ್ಮಿಕಾ ಮಂದಣ್ಣ; ಎಲ್ಲೇ ಹೋದ್ರೂ ಬೆಂಬಿಡದ ವಿವಾದ!