ರಾಯಲ್ ಚಾಲೆಂಜರ್ಸ್ ತಂಡದ ರಾಯಭಾರಿ ಆಗಿದ್ದ ಪುನೀತ್ ರಾಜ್‌ಕುಮಾರ್ ಅವರ ಸಾವಿನ ನಂತರ 2024ರಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಗೌರವಿಸಿ ಅವರಿಂದಲೇ ಹೊಸ ಟೀಶರ್ಟ್ ಬಿಡುಗಡೆ ಮಾಡಿಸಲಾಯಿತು.
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್‌ರಾಜ್ (Ashwini Puneeth Rajkumar) ವೇದಿಕೆಗೆ ಬರುತ್ತಿದ್ದಂತೆ ಆರ್‌ಸಿಬಿ ಕ್ರಿಕೆಟರ್ ವಿರಾಟ್ ಕೊಹ್ಲಿ ಚಪ್ಪಾಳೆ ಮೂಲಕ ಸ್ವಾಗತಿಸಿದ್ದಾರೆ. ಆರ್‌ಸಿಬಿ ಗೆದ್ದಾಗ ಟೀಮ್ ಅಂಬಾಸಿಡರ್ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಈ ಸಂಗತಿಯೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆರ್‌ಸಿಬಿ ಸೋತಾಗ, ಸೋಲಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರಣ ಎಂದಿದ್ದ ಕೆಲವು ಕಿಡಿಗೇಡಿಗಳಿಗೆ ಈ ಮೂಲಕ ಸೂಕ್ತ ಉತ್ತರ ದೊರಕಿದೆ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ತಂಡದ ರಾಯಭಾರಿ ಆಗಿದ್ದ ಪುನೀತ್ ರಾಜ್‌ಕುಮಾರ್ ಅವರ ಸಾವಿನ ನಂತರ 2024ರಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಗೌರವಿಸಿ ಅವರಿಂದಲೇ ಹೊಸ ಟೀಶರ್ಟ್ ಬಿಡುಗಡೆ ಮಾಡಿಸಲಾಯಿತು. ಆದರೆ, ಈ ಬಗ್ಗೆ ಗಜಪಡೆ ಎಂಬ ಟ್ವಿಟರ್ ಖಾತೆಯನ್ನು ಹೊಂದಿದ ವ್ಯಕ್ತಿ 'ಗಂಡನಿಲ್ಲದ ಮಹಿಳೆಯಿಂದ ಅನ್‌ಬಾಕ್ಸಿಂಗ್ ಮಾಡಿಸಿದ್ದಕ್ಕೆ ಆರ್‌ಸಿಬಿ ಸೋಲುತ್ತಿದೆ' ಎಂದು ಹೇಳಿ ಟ್ವೀಟ್ ಮಾಡಿದ್ದನು. ಈಗ ಈ ವಿಚಾರ ರಾಜ್ಯಾದ್ಯಂತ ಕ್ರೀಡೆ, ಸಿನಿಮಾ ಕ್ಷೇತ್ರ, ಸಾಮಾಜಿಕ ಜಾಲತಾಣ ಹಾಗೂ ಮಹಿಳಾಪರ ಹೋರಾಟಗಾರರಲ್ಲಿ ಭಾರಿ ಕಿಚ್ಚು ಹೊತ್ತಿಸಿತ್ತು.
ಆಕಾಶ್ ತೊದ್ಲುಎಂಬ ಟೀಕೆ; 'ಬೃಂದಾವನ' ವೀಕ್ಷಕರಿಗೆ ವರುಣ್ ಆರಾಧ್ಯ ತಾಯಿ ಹೇಳಿದ್ದೇನು?
ತಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ಅಸಭ್ಯ (Derogatory Post) ಪೋಸ್ಟ್ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದರು. 'ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ' ಎಂದು ಹೇಳಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪ್ರತಿಕ್ರಿಯೆ ಕೂಡ ಸಾಕಷ್ಟು ವೈರಲ್ ಆಗಿತ್ತು. ಅಶ್ವಿನಿ ವಿರುದ್ಧ ಬಂದಿದ್ದ ಆ ಅಸಭ್ಯ ಸೋಷಿಯಲ್ ಮೀಡಿಯಾ ಕಾಮೆಂಟ್ ವಿರುದ್ಧ ಕೇಸ್ ಕೂಡ ದಾಖಲಾಗಿ ಅದು ರಾಜ್ಯವ್ಯಾಪಿ ಚರ್ಚೆಯ ವಿಷಯವಾಗಿತ್ತು.
ಮ್ಯಾಗಿ ಕೊಟ್ಟಿದ್ದೇಕೆ ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್‌ಗೆ? ಏನಾಯ್ತು ಅಂಥದ್ದು?
ಇದೀಗ ವೈರಲ್ ಆಗುತ್ತಿರುವ ವೀಡಿಯೋದಲ್ಲಿ 'ಸ್ವತಃ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಅಶ್ವಿನಿ ಮೇಡಂ ವೇದಿಕೆಗೆ ಬರುತ್ತಿದ್ದಂತೆ ಗೌರವ ಕೊಟ್ಟು ಚಪ್ಪಾಳೆ ತಟ್ಟುತ್ತಿದ್ದಾರೆ. ಇದಕ್ಕೆ ಅಶ್ವಿನಿ ಮೇಡಂ ವಿರುದ್ಧ ಕಾಮೆಂಟ್ ಹಾಕಿದ್ದ ಕಿಡಿಗೇಡಿ ಏನು ಹೇಳುತ್ತಾರೆ' ಎಂದು ಯಾರೋ ಒಬ್ಬರು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, ಈ ವೀಡಿಯೋ ಈಗ ಅಂದಿನ ಕಿತ್ತಾಟಕ್ಕೆ ಸೂಕ್ತ ಉತ್ತರ ನೀಡಿದೆ ಎನ್ನಬಹುದು.
ಕಾಮ-ಪ್ರೇಮ ಅನೈತಿಕ ಕಥೆಗಳನ್ನೇ ಸಿನಿಮಾ ಮಾಡುತ್ತಿದ್ದ ಪುಟ್ಟಣ್ಣ ಮಡಿವಂತರ ಮಧ್ಯೆ ಗೆದ್ದಿದ್ದು ಹೇಗೆ?