
ಗಣರಾಜ್ಯೋತ್ಸವದ ದಿನದಂದೇ ಕನ್ನಡ ಸಿನಿಮಾ ಕೇಳು ಜನಮೇಜಯ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಡೈರಕ್ಟರ್ ಮತ್ತು ರೈಟರ್ ಚಕ್ರವರ್ತಿ ಚಂದ್ರಚೂಡ್ ಅವರು ಕೇಳು ಜನಮೇಜಯದ ಮೂಲಕ ಪೂರ್ಣ ಪ್ರಮಾಣದ ಕಥಾನಾಯಕರಾಗುತ್ತಿದ್ದಾರೆ.
ಸಂತೋಷ್ ಕೊಡಂಕೇರಿ ನಿರ್ದೇಶನದ ಈ ಸಿನಿಮಾದ ಪೋಸ್ಟರ್ ನಲ್ಲೇ ರಾಧಿಕಾ ಸುಪಾರಿ ವಾಟ್ಸಪ್ ಲೀಕ್ಡ್ ಚಾಟ್ ಆರ್ ಹೌಸ್ ಮುಂತಾದ ತಲೆ ಬರಹಗಳು ಕುತೂಹಲ ಮೂಡಿಸಿವೆ.
ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಸ್ವಾತಂತ್ರ್ಯ ಇರುವುದಿಲ್ಲ; ಜಯಶ್ರೀ ಸಾವಿನ ಬಗ್ಗೆ ಟಿಎನ್ ಸೀತಾರಾಮ್ ಮಾತು
ಜೀವನ್ ಪ್ರಕಾಶ್ ಕ್ಯಾಮರಾ, ವಿನಯ್ ಸಂಗೀತವಿರುವ ಈ ಚಿತ್ರಕ್ಕೆ ದೃಷ್ಠಿ ಮೀಡಿಯಾ ಮತ್ತುರಘುನಾಥ್ ನಿರ್ಮಾಪಕರು. ಕ್ರೈಂ ಥ್ರಿಲ್ಲರ್ ಕಥಾ ಹಂದರವಿರುವ ಈ ಸಿನಿಮಾದ ನಾಯಕನಾಗಿ ಚಕ್ರವರ್ತಿ ಚಂದ್ರಚೂಡ್ ಬರುತ್ತಿರುವುದೇ ವಿಶೇಷ.
ರಾಜಕಾರಣವಾ.. ಡ್ರಗ್ಸಾ..? ನಟಿಯೊಬ್ಬಳ ಕಥೆಯ ಚಕ್ರವರ್ತಿ ಅಸಲಿ ಕಥೆಯಾ ಎಂಬುದೆಲ್ಲ ಈಗ ಸದ್ಯ ಕುತೂಹಲದ ವಿಚಾರಗಳಾಗಿಯೇ ಉಳಿದಿದೆ.
ಡಾಲಿ ಧನಂಜಯ, ವಸಿಷ್ಠ ಸಿಂಹ, ಸಂಚಾರಿ ವಿಜಯ್, ತಾರಾ, ವಿಕ್ಕಿ ವರುಣ್, ರಾಜವರ್ಧನ್ ನಿರ್ದೇಶಕರಾದ ರವಿ ಶ್ರೀವತ್ಸ, ದಯಾಳ್ ಪದ್ಮನಾಭನ್, ಅರವಿಂದ್ ಕೌಶಿಕ್ ಇದ್ದರು.
ಡಿಕೆಡಿ ವೇದಿಕೆಯಲ್ಲಿ ಅನುಶ್ರೀ ಬರ್ತಡೇ; ಇವನನ್ನು ನೋಡುತ್ತಿದ್ದಂತೆ ಮುದ್ದಾಡಿದ ಚೆಲುವೆ!
ಡಾ.ವಿ ನಾಗೇಂದ್ರಪ್ರಸಾದ್, ಸಿಂಪಲ್ ಸುನಿ, ವಿ ಎಸ್ ಎಸ್ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರಿಂದ ನವನಾಯಕ ದುಶ್ಯಂತ್ ತನಕ ಚೇತನ್ ಗೌಡ ಕಬ್ಬಾಳ್ ಉಮೇಶ್ ಸೇರಿದಂತೆ ನಾನಾ ಪಕ್ಷದ ಮುಖಂಡರು ಕರ್ನಾಟಕ ರಕ್ಷಣಾ ವೇದಿಕೆಯಿಂದ ನಿರ್ಮಾಪಕ ರಾಮಪ್ರಸಾದ್ ತನಕ ಹಲವಾರು ವರ್ಗದ ಸೆಲೆಬ್ರೆಟಿಗಳು ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.