ಹಿರಿಯ ನಟಿ ಉಮಾಶ್ರೀ ಜೊತೆ ಕ್ಯಾರವಾನ್‌ನಲ್ಲಿ ಸಮಯ ಕಳೆದ ವಿಡಿಯೋ ಶೇರ್ ಮಾಡಿಕೊಂಡ ನಟಿ ಶ್ರುತಿ ಕೃಷ್ಣ.
ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ, ಫೇವರೆಟ್ ಮಮ್ಮಿ ಉಮಾಶ್ರೀ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ, ಇಷ್ಟವಿಲ್ಲ ಹೇಳಿ? 1984ರಿಂದ ಸಿನಿ ಪ್ರೇಮಿಗಳನ್ನು ಮನೋರಂಜಿಸುತ್ತಾ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಜಕೀಯ ಚಟುವಟಿಕೆಗಳಿಂದ ಬ್ಯುಸಿಯಾಗಿದ್ದ ಕಾರಣ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದರು. ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಖ್ಯಾತ ನಟಿಯ ಪುತ್ರಿ ಹೀಗಿದ್ದಾಳೆ ನೋಡಿ
ಶ್ರುತಿ ಪೋಸ್ಟ್:
'ನಮ್ಮಿಬ್ಬರ ಬಾಂಧವ್ಯವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ನನ್ನ ಹಾಗೂ ನನ್ನ ಮಗಳನ್ನು ಅಪರೂಪಕ್ಕೆ ಕಂಡಾಗ, ಬಾವುಕರಾಗಿ ಕಣ್ತುಂಬಿ ಕೊಳ್ಳುವ ಏಕೈಕ ಕಲಾವಿದೆ ನನ್ನ ಪ್ರೀತಿಯ ಅಮ್ಮ ಉಮಾಶ್ರೀ ಹಲವಾರು ಬಾರಿ ಹೆತ್ತಮ್ಮನಂತೆ ಮರುಗಿದ, ಪ್ರೀತಿಸಿದ, ಸಂಭ್ರಮಿಸಿದ, ಅಪರೂಪದ ಜೀವ,' ಎಂದು ಶ್ರುತಿ ಬರೆದುಕೊಂಡಿದ್ದಾರೆ.
ನಟಿ ಶ್ರುತಿ ಮತ್ತು ಪುತ್ರಿ ಗೌರಿ ಉಮಾಶ್ರೀ ಇದ್ದ ಕ್ಯಾರವಾನ್‌ಗೆ ಭೇಟಿ ನೀಡಿ ಸಮಯ ಕಳೆದಿದ್ದಾರೆ. ಉಮಾಶ್ರೀ ಶ್ರುತಿ ಪುತ್ರಿಯನ್ನು ಸ್ವಂತ ಮಗಳಂತೆ ಮುದ್ದಾಡಿದ್ದಾರೆ. 'ನೀವಿಬ್ಬರು ಕಲ್ಪನಾ ಚಿತ್ರದಲ್ಲಿ ಸೂಪರ್ ಆಗಿ ಅಭಿನಯಿಸಿದ್ದೀರಾ ಮತ್ತೆ ಆನ್‌ಸ್ಕ್ರೀನ್‌ನಲ್ಲಿ ಯಾವಾಗ ಕಾಣಿಸಿಕೊಳ್ಳುವುದು?' ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.