
ನಿರ್ದೇಶಕ ಪ್ರೇಮ್ ಅವರು, ‘ಕೆಡಿ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva surja) ಅವರೇ ನಾಯಕ. ಪ್ರತಿ ಸಿನಿಮಾದಲ್ಲಿಯೂ ಏನಾದರೂ ಒಂದು ವಿಶೇಷತೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರೇಮ್ ಅವರು, ಕೆಡಿ ಸಿನಿಮಾದ ಟೈಟಲ್ ಅನ್ನು ಕೂಡ ಇತ್ತೀಚೆಗೆ ಅದ್ಧೂರಿಯಾಗಿ ಲಾಂಛ್ ಮಾಡಿದ್ದರು. ಈ ಸಮಯದಲ್ಲಿ ಅವರು ಸಿನಿಮಾದ ಪಾತ್ರಗಳನ್ನು ಪರಿಚಯಿಸಿದ್ದರು. ಅವರು ಮೊದಲು ಪರಿಚಯಿಸಿದ್ದ ಪಾತ್ರ ಅಣ್ಣಯ್ಯಪ್ಪ. ಈ ಪಾತ್ರವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ವಹಿಸುತ್ತಿದ್ದು, ಅವರ ಭರ್ಜರಿ ಲುಕ್ (Look) ಅನ್ನು ಹೊಸ ವರ್ಷದಂದು ಚಿತ್ರತಂಡ ರಿವೀಲ್ ಮಾಡಿತ್ತು. ‘ಈ ಸಿನಿಮಾದಲ್ಲಿ ಭಾರತದ ವಿವಿಧ ಭಾಷೆಗಳ ಪ್ರಮುಖ ಕಲಾವಿದರು ನಟಿಸಲಿದ್ದು, ಪ್ರತಿಯೊಬ್ಬರ ಪಾತ್ರವನ್ನು ಹೀಗೆ ಪರಿಚಯಿಸುತ್ತಾ ಹೋಗುತ್ತೇವೆ. ಸಿನಿಮಾದ ಬಗ್ಗೆ ಸದ್ಯಕ್ಕೆ ಬೇರೆ ಯಾವುದೇ ಮಾಹಿತಿ ನೀಡುವುದಿಲ್ಲ. ಈಗ ಏನಾದರೂ ಮಾಹಿತಿ ಹೇಳಿದರೆ ತೆರೆಮೇಲೆ ನಾವು ಹೇಳುವುದಾದರೂ ಏನು? ಯಾವ ಪಾತ್ರ ಏನು ಮಾಡುತ್ತದೆ ಎಂದು ಕೇಳಿದರೆ ಸಿನಿಮಾ ನೋಡಿ ಎಂದಷ್ಟೇ ನಾನು ಹೇಳುತ್ತೇನೆ‘ ಎಂದು ಸಸ್ಪೆನ್ಸ್ (Suspence) ಕ್ರಿಯೇಟ್ ಮಾಡಿದ್ದರು.
ಸಿನಿಮಾ ಚಿತ್ರೀಕರಣ ಇತ್ತೀಚಿಗಷ್ಟೆ ಶುರುವಾಗಿದ್ದು, ಶೂಟಿಂಗ್ನ ಮಾಹಿತಿ ಕೂಡ ಭರ್ಜರಿಯಾಗಿಯೇ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಈಗಾಗಲೇ ಸಖತ್ ಟೆರರ್ ಲುಕ್ನಲ್ಲಿ ಕಾಣಿಸಿಕೊಂಡ ನಟ ಧ್ರುವ ಸರ್ಜಾರ (Dhruva Sarja) ಅವರ ಪೋಸ್ಟರ್ ಈಗಾಗಲೇ ಟ್ರೆಂಡ್ ಆಗಿದೆ. ಕೆವಿಎನ್ ಪ್ರೊಡಕ್ಷನ್ನ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಮಾಸ್ ಲುಕ್ ರಿವೀಲ್ ಆಗಿದೆ. ವಿವಿಧ ಭಾಷೆಗಳ ಪ್ರಮುಖ ಕಲಾವಿದರು ನಟಿಸಲಿದ್ದು, ಪ್ರತಿಯೊಬ್ಬರ ಪಾತ್ರವನ್ನು ಹೀಗೆ ಪರಿಚಯಿಸುತ್ತಾ ಹೋಗುತ್ತೇವೆ ಎಂದಷ್ಟೇ ಪ್ರೇಮ್ (Prem)ಹೇಳಿರುವ ನಡುವೆಯೇ ಇದೀಗ ಬಾಲಿವುಡ್ ಬೆಡಗಿ, ಕನ್ನಡತಿ ಶಿಲ್ಪಾ ಶೆಟ್ಟಿಯವರ ಹೆಸರು ಜೋರಾಗಿ ಕೇಳಿಬರುತ್ತಿದೆ.
Kantara ಸಿಂಗಾರ ಸಿರಿಯೇ ಹಾಡಿನಲ್ಲಿರುವ 'ಕೊಂಗಾಟ' ಪದಕ್ಕೇನರ್ಥ? ಪ್ರಮೋದ್ ಹೇಳ್ತಾರೆ ಕೇಳಿ..
ಚಿತ್ರದಲ್ಲಿ ಈಗಾಗಲೇ ಬಾಲಿವುಡ್ ನಟ ಸಂಜಯ್ ದತ್ತ್ (Sanjay Datt) ಬರುವ ಸುದ್ದಿ ತಿಳಿಸಿಯಾಗಿದೆ. ಈಗ ಬಾಲಿವುಡ್ನ ಇನ್ನೋರ್ವ ನಟಿ ಶಿಲ್ಪಾ ಸದ್ದು ಜೋರಾಗಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಪ್ರೀತ್ಸೋದ ತಪ್ಪಾ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಇದೀಗ 18 ವರ್ಷದ ಬಳಿಕ ಕೆಜಿ ಚಿತ್ರದ ಮೂಲಕ ಕಮ್ಬ್ಯಾಕ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 1998ರಲ್ಲಿ ಬಿಡುಗಡೆಯಾಗಿದ್ದ ಪ್ರೀತ್ಸೋದ ತಪ್ಪಾ ಮೂಲಕ ಹೊಸ ಅಲೆ ಎಬ್ಬಿಸಿದ್ದ ಶಿಲ್ಪಾ ಶೆಟ್ಟಿ, ಮತ್ತೆ ರವಿಚಂದ್ರನ್ ಜೊತೆ ನಾಯಕಿಯಾಗಿ ಮತ್ತೊಮ್ಮೆ ಸುನಾಮಿ ಎಬ್ಬಿಸಲಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಪ್ರೀತ್ಸೋದ ತಪ್ಪಾ ಬಳಿಕ 2003 ರಲ್ಲಿ ಒಂದಾಗೋಣ ಬಾ ಚಿತ್ರದಲ್ಲಿಯೂ ಶಿಲ್ಪಾ ನಟಿಸಿದ್ದರು. ಕುತೂಹಲದ ಸಂಗತಿ ಎಂದರೆ ಇದರಲ್ಲಿಯೂ ನಾಯಕ ರವಿಚಂದ್ರನ್ ಅವರೇ. ನಂತರ ಶಿಲ್ಪಾ ಶೆಟ್ಟಿ (Shilpa Shetty) 2005 ರಲ್ಲಿ ಉಪೇಂದ್ರ ನಟನೆಯ ಆಟೋ ಶಂಕರ್ನಲ್ಲಿ ನಟಿಸಿದ್ದರು. ಈಗ ಕೊನೆಯ ಚಿತ್ರ ಬಿಡುಗಡೆಯಾಗಿ 18 ವರ್ಷಗಳಾಗಿದ್ದು, ಮತ್ತೆ ಸ್ಯಾಂಡಲ್‌ವುಡ್ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 20 ವರ್ಷಗಳ ಬಳಿಕ ರವಿಚಂದ್ರನ್ಗೆ ಪುನಃ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಇದೆ. ಆದರೆ ಈ ಸುದ್ದಿ ಸದ್ಯ ಗುಸುಗುಸು ಅಷ್ಟೇ. ಶಿಲ್ಪಾರನ್ನು ಕನ್ನಡಕ್ಕೆ ಪುನಃ ಕರೆತರಲಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಇದರ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.
ಮಂಗಳೂರಿನಲ್ಲಿ ದೀಪಿಕಾ ದಾಸ್ ಬೆಕ್ಕು ಪತ್ತೆ; 15 ಸಾವಿರ ಬಹುಮಾನ ಯಾರ ಕೈ ಸೇರಿತ್ತು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.