ಕರ್ನಾಟಕ ಮಿಲ್ಕ್‌ ಫೆಡರೇಷನ್‌ ಪರೀಕ್ಷೆ ಪತ್ರಿಕೆಯಲ್ಲಿ ಕಾಂತಾರ ಸಿನಿಮಾ ಪ್ರಶ್ನೆ; ನಿಮ್ಮ ಉತ್ತರ ಗೊತ್ತಾ?

Published : Dec 20, 2022, 09:15 AM ISTUpdated : Dec 20, 2022, 10:19 AM IST
ಕರ್ನಾಟಕ ಮಿಲ್ಕ್‌ ಫೆಡರೇಷನ್‌ ಪರೀಕ್ಷೆ ಪತ್ರಿಕೆಯಲ್ಲಿ ಕಾಂತಾರ ಸಿನಿಮಾ ಪ್ರಶ್ನೆ; ನಿಮ್ಮ ಉತ್ತರ ಗೊತ್ತಾ?

ಸಾರಾಂಶ

ಪರೀಕ್ಷೆಯಲ್ಲೂ ಕಾಂತಾರ ಎಫೆಕ್ಟ್‌. ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಪತ್ರಿಕೆ ಹಂಚಿಕೊಂಡ ಲೀಲಾ..... 

400 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗವನ್ನು ದೊಡ್ಡ ಹಂತಕ್ಕೆ ಕೊಂಡೊಯ್ದ ಕಾಂತಾರ ಸಿನಿಮಾದ ಬಗ್ಗೆ ಇತ್ತೀಚಿಗೆ ನಡೆದ ಕರ್ನಾಟಕ ಮಿಲ್ಕ್‌ ಫೆಡರೇಷನ್‌ ಇಲಾಖೆ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ. ಪ್ರಶ್ನೆ ಪತ್ರಿಕೆಯನ್ನು ಇನ್‌ಸ್ಟಾಗ್ರಾಂನಲ್ಲಿ ಲೀಲಾ ಉರ್ಫ್‌ ಸಪ್ತಮಿ ಗೌಡ ಹಂಚಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಯಾರು ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಗೊತ್ತಿಲ್ಲ ಆದರೆ ಲೀಲಾ ಫೀಡ್‌ ತುಂಬಾ ಮೆಸೇಜ್‌ಗಳು ತುಂಬಿದೆ...

ಪ್ರಶ್ನೆ ಏನು?

ಇತ್ತೀಚಿಗೆ ಬಿಡುಗಡೆಗೊಂಡ 'ಕಾಂತಾರ' ಚಲನಚಿತ್ರವು ಇದಕ್ಕೆ ಸಂಬಂಧಿಸಿದುದಾಗಿದೆ?

1) ಜಲ್ಲಿಕಟ್ಟು
2) ಭೂತಕೋಲ
3) ಯಕ್ಷಗಾನ
4)ದಮ್ಮಾಮಿ

ಖಂಡಿತ ಪ್ರತಿಯೊಬ್ಬ ಕನ್ನಡಿಗನೂ ಕಾಂತಾರ ಸಿನಿಮಾ ನೋಡಿ ಸರಿಯಾದ ಉತ್ತರ ಕೊಟ್ಟಿರುತ್ತಾರೆ. 'ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವ ಬೆಸ್ಟ್‌ ಪ್ರಶ್ನೆ ಇದು. ಕಾಂತಾರ ಚಿತ್ರದ ಬಗ್ಗೆ ಇತ್ತೀಚಿಗೆ ನಡೆದ ಕೆಎಮ್‌ಎಫ್‌ ಪರೀಕ್ಷೆಯಲ್ಲಿ ಕೇಳಲಾಗಿದೆ' ಎಂದು ಸಪ್ತಮಿ ಬರೆದುಕೊಂಡಿದ್ದಾರೆ. ಈ ಪ್ರಶ್ನೆಗೆ ಸರಿಯಾದ ಉತ್ತರ ಭೂತಕೋಲ. 

ಇದೊಂದೇ ಅಲ್ಲ ಕಾಂತಾರ ಎಫೆಕ್ಟ್‌ ಎಷ್ಟರ ಮಟ್ಟಕ್ಕೆ ಇದೆ ಅಂದ್ರೆ 3ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಪರೀಕ್ಷೆಯಲ್ಲೂ ಕಾಂತಾರದ ಉತ್ತರ ಬರೆದು ಶಿಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ. 'ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ತಿಳಿದು ಬರೆ' ಎಂದು 3ನೇ ತರಗತಿ ಪರೀಕ್ಷೆಯಲ್ಲಿ ಕೇಳಲಾಗಿದೆ. ಇದಕ್ಕೆ ವಿದ್ಯಾರ್ಥಿಯೊಬ್ಬ  'ಕ್ಷೇತ್ರಪಾಲ, ಗುಳಿಗಾ ಮತ್ತು ದೈವ' ಎಂದು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಬರೆದು ಬಂದಿದ್ದಾನೆ. 

ಕರ್ನಾಟಕ ರಾಜ್ಉ ಪೊಲೀಸ್  ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ಪ್ರವೇಶ ಪತ್ರದ 2021-22ರಲ್ಲೂ ಕಾಂತಾರ ಚಿತ್ರದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

ಪ್ರಶ್ನೆ:  ಇತ್ತೀಚಿಗೆ ಬಿಡುಗಡೆಯಾದ ಚಲನಚಿತ್ರ 'ಕಾಂತಾರ'ದ ಕಥೆ ಯಾವುದಕ್ಕೆ ಸಂಬಂಧಿಸಿದ್ದು
1) ನಾಗರಾಧನೆ
2) ಭೂತಾರಾಧನೆ
3) ಹುಲಿ ಕುಣಿತ
4) ಯಕ್ಷಗಾನ 

ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಪ್ರಶ್ನೆ ಕೇಳಲಾಗಿತ್ತು, ಸರಿಯಾದ ಉತ್ತರ ಭೂತಾರಾಧನೆ. 

2022ರ ಅತ್ಯಂತ ಜನಪ್ರಿಯ ಚಲನಚಿತ್ರಗಳು ಮತ್ತು ವೆಬ್‌ ಸೀರಿಸ್‌ ಪ್ರಕಟಿಸಿದ IMDB 2022

ಕಾಂತಾರ 2 ಬರುತ್ತಾ?

ಕಾಂತಾರ ಸಿನಿಮಾ ಸೂಪರ್ ಹಿಟ್ ಆದ್ಮೇಲೆ ಹೊಂಬಾಳೆ ನಿರ್ಮಾಣ ಸಂಸ್ಥೆ ಮೇಲೆ ಒತ್ತಡ ಹೆಚ್ಚಾಗಿದೆ. ಕಾಂತಾರ 2 ಸಿನಿಮಾ ಬರುತ್ತಾ? ಯಾರು ನಟಿಸಲಿದ್ದಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಪದೇ ಪದೇ ಕೇಳುತ್ತಿದ್ದಾರೆ. ಕಾಂತಾರ 2 ಬಗ್ಗೆ ರಿಷಬ್ ಶೆಟ್ಟಿ ಎಲ್ಲಿಯೂ ಕೇಳಿಲ್ಲ ಹಾಗೂ ಮಾತನಾಡಿಲ್ಲ ಆದರೆ ಅಭಿಮಾನಿಗಳೇ ಬರಲಿದೆ ಎನ್ನುವ ಹೈಪ್ ಕೊಡುತ್ತಿದ್ದಾರೆ. 

ಕೆಲವು ದಿನಗಳ ಹಿಂದೆ ರಿಷಬ್ ಶೆಟ್ಟಿ ದಂಪತಿ  ದೈವ ಅನುಮತಿ ಕೇಳಿದ್ದಾರೆ ಎನ್ನಲಾಗಿದೆ.  ದೈವ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ ಎನ್ನಲಾಗಿದೆ. 'ಕಾಂತಾರ' ಚಿತ್ರತಂಡಕ್ಕೆ ಅಭಯ ನೀಡಿರುವ ಅಣ್ಣಪ್ಪ ಪಂಜುರ್ಲಿ 'ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ' ಎಂದು ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ. 

Rishab Shetty: ರಿಷಬ್ ಶೆಟ್ಟಿ ಜೀವನ ಬದಲಿಸಿದ ಕಾಂತಾರ: ಈಗ ಡಿವೈನ್ ಸ್ಟಾರ್ ಸಂಭಾವನೆ ಎಷ್ಟು ಗೊತ್ತಾ?

ನಟ ರಿಷಬ್ ಶೆಟ್ಟಿ ಅನುಮತಿ ಪಡೆದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ದೈವ ನರ್ತಕ ಉಮೇಶ್ ಗಂಧಕಾಡು ಮಾಹಿತಿ ನೀಡಿದ್ದಾರೆ. 'ತಿಂಗಳ ಮೊದಲು ಹರಕೆ ನೇಮ ಕೊಡುವುದಾಗಿ ಹೇಳಿ ವೀಳ್ಯ ಕೊಟ್ಟಿದ್ದರು. ಮೊನ್ನೆ ರಿಷಬ್ ಮತ್ತು ಅವರ ತಂಡ ಬಂದು ದೈವದ ಹರಕೆ ಕೊಟ್ಟರು. ದೈವ ಅವರಿಗೆ ಅಭಯ ಕೊಟ್ಟಿದೆ. ನಮಗೆ ಅವರ ಪರಿಚಯ ಇರಲಿಲ್ಲ, ನಡೆಸಿಕೊಟ್ಟವರು ಮಡಿವಾಳ ಕುಟುಂಬ. ದೈವದ ನಡೆಯಲ್ಲಿ ಆದ ವಿಷಯ ನನಗೆ ಗೊತ್ತಿರಲ್ಲ, ಅದು ದೈವಕ್ಕೆ ‌ಮಾತ್ರ ಗೊತ್ತಿರುತ್ತೆ. ದೈವದ ನೇಮೋತ್ಸವ ಆದ ನಂತರ ನನಗೆ ಭಕ್ತರು ಬಂದು ಈ ಬಗ್ಗೆ ಹೇಳಿದರು' ಎಂದು ಹೇಳಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡ ನಟರು ಬೇರೆ ಭಾಷೆಗಳಲ್ಲಿ ಅತಿಥಿ ಪಾತ್ರ ಮಾಡುತ್ತಾರೆ, ಆದ್ರೆ, ಪರಭಾಷೆಯವರು ಇಲ್ಲಿಗೆ ಬರುವುದಿಲ್ಲ: ಕಿಚ್ಚ ಸುದೀಪ್
ವಿಜಯಲಕ್ಷ್ಮಿ ದರ್ಶನ್ ದೂರು: ಜಗಳಕ್ಕಲ್ಲ, ಎಂಟರ್ಟೈನಮೆಂಟ್‌ಗಾಗಿ ನಾನು ಸಿನೆಮಾಗೆ ಬಂದವನೆಂದ ಕಿಚ್ಚ