Anushka Shetty; ಭೂತಕೋಲ ವೀಕ್ಷಿಸಿದ ನಟಿ ಅನುಷ್ಕಾ ಶೆಟ್ಟಿ; ವಿಡಿಯೋ ವೈರಲ್

Published : Dec 19, 2022, 05:39 PM IST
Anushka Shetty; ಭೂತಕೋಲ ವೀಕ್ಷಿಸಿದ ನಟಿ ಅನುಷ್ಕಾ ಶೆಟ್ಟಿ; ವಿಡಿಯೋ ವೈರಲ್

ಸಾರಾಂಶ

ಟಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ತನ್ನ ಹುಟ್ಟೂರಿನಲ್ಲಿ ಭೂತಕೋಲ ವೀಕ್ಷಿಸಿದ ವಿಡಿಯೋ ವೈರಲ್ ಆಗಿದೆ.

ಕರಾವಳಿ ಮೂಲದ ನಟಿ ಅನುಷ್ಕಾ ಶೆಟ್ಟಿ ಟಾಲಿವುಡ್​ ಸಿನಿಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ನಟಿ ಅನುಷ್ಕಾ ಎಷ್ಟೇ ಜನಪ್ರಿಯತೆ, ಯಶಸ್ಸು ಸಿಕ್ಕರೂ ಅವರು ತಮ್ಮ ಮೂಲ ಸಂಸ್ಕೃತಿಯನ್ನು ಮರೆತಿಲ್ಲ. ಕನ್ನಡದ ಬಗ್ಗೆ, ಕರುನಾಡಿನ ಆಚಾರ ವಿಚಾರಗಳ ಬಗ್ಗೆ ಅವರಿಗೆ ಅಪಾರ ಗೌರವ. ತುಳುನಾಡಿನವರಾದ ಅನುಷ್ಕಾ ಶೆಟ್ಟಿ ಅವರು ಪ್ರತಿ ವರ್ಷ ತಮ್ಮ ಕುಟುಂಬದವರ ಜೊತೆ ಭೂತಕೋಲದಲ್ಲಿ ಭಾಗಿ ಆಗುತ್ತಾರೆ. ಈ ಬಾರಿ ಕೂಡ ಅವರು ಮಿಸ್ ಮಾಡದೇ ಭೂತಕೋಲದಲ್ಲಿ ಪಾಲ್ಗೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಭೂತಕೋಲದಲ್ಲಿ ಭಾಗಿಯಾದ ವಿಡಿಯೋ ವೈರಲ್ ಆಗಿದೆ. ಭಕ್ತಿಯಿಂದ ನಿಂತು ಭೂತಕೋಲ ವೀಕ್ಷಿಸಿದ ಅನುಷ್ಕಾ ಶೆಟ್ಟಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಕಾಂತಾರ ಸಿನಿಮಾ ಬಳಿಕ ಭೂತಕೋಲದ ಬಗ್ಗೆ ದೇಶದ ಜನತೆಗೆ ಪರಿಚಯವಾಗಿದೆ. ಕಾಂತಾರ ಸಿನಿಮಾದಲ್ಲಿ ವಿವರವಾಗಿ ಭೂತಕೋಲದ ಬಗ್ಗೆ ತೋರಿಸಲಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಅಂದಾಹಗಾ ಸಿನಿಮಾ ನೋಡಿ ನಟಿ ಅನುಷ್ಕಾ ಶೆಟ್ಟಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕರಾವಳಿ ಮಂದಿಗೆ ದೈವಾರಾಧನೆ ಬಗ್ಗೆ ಅಪಾರ ಶ್ರದ್ಧೆ ಇದೆ. ಅನುಷ್ಕಾ ಶೆಟ್ಟಿ ಕೂಡ ಇದರಲ್ಲಿ ನಂಬಿಕೆ ಇಟ್ಟಿದ್ದು ಕೋಲದಲ್ಲಿ ಭಾಗಿಯಾಗಿದ್ದಾರೆ.

ರಿಷಬ್ ಶೆಟ್ಟಿ ನೀವು ಅದ್ಭುತ; 'ಕಾಂತಾರ' ನೋಡಿ ವಿಮರ್ಶೆ ಮಾಡಿದ ಅನುಷ್ಕಾ ಶೆಟ್ಟಿ

ತನ್ನ ಊರಿನ ಭೂತಕೋಲದಲ್ಲಿ ಭಾಗಿಯಾಗಿದ್ದ ಅನುಷ್ಕಾ ಶೆಟ್ಟಿ ಭಕ್ತಿ ವೀಕ್ಷಿಸಿದ್ದಾರೆ. ದೈವ ನರ್ತನವನ್ನು ತಮ್ಮ ಮೊಬೈಲ್​ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಅನುಷ್ಕಾ ಅವರ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಅನುಷ್ಕಾ ಶೆಟ್ಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದೇವರು ಒಳ್ಳೆಯದು ಮಾಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Kantara Effect: ಭೂತಕೋಲ ಕಣ್ಣಾರೆ ನೋಡಲು ಧರ್ಮಸ್ಥಳಕ್ಕೆ ಬರ್ತಾರಂತೆ ನಟ ವಿಶಾಲ್‌!

‘ಬಾಹುಬಲಿ’ ಸಿನಿಮಾದ ನಂತರ ಅನುಷ್ಕಾ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡರು. ಅನುಷ್ಕಾ ಶೆಟ್ಟಿ ಕೊನೆಯದಾಗಿ ಮಾಧವನ್​ ಜೊತೆ ನಿಶಬ್ದಂ ಮೂಲಕ ಅಭಿಮಾನಿಗಳ ಮುಂದೆ ಬಂದರು. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಿಲ್ಲ. ಸದ್ಯ ಅನುಷ್ಕಾ ನವೀನ್​ ಪೊಲಿಶೆಟ್ಟಿ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷದ ಅವರ ಬರ್ತ್​ಡೇ ಪ್ರಯುಕ್ತ ಹೊಸ ಸಿನಿಮಾದ ಫಸ್ಟ್​ ಲುಕ್ ಬಿಡುಗಡೆ ಮಾಡಲಾಗಿತ್ತು. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರು ಮಾಸ್ಟರ್​ ಶೆಫ್​ ಪಾತ್ರ ಮಾಡುತ್ತಿದ್ದಾರೆ. ಅನುಷ್ಕಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?