
ಚಿತ್ರರಂಗದಲ್ಲಿ ಆಮದು ನೀತಿ ಸದಾ ಜಾರಿಯಲ್ಲಿರುತ್ತದೆ. ಅದರಲ್ಲೂ ಕನ್ನಡದಲ್ಲಂತೂ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ತಾರೆಗಳದ್ದೇ ಹವಾ. ಕನ್ನಡದಲ್ಲಿ ಯಾವುದೇ ಸಿನಿಮಾ ಸೆಟ್ಟೇರಿದರೂ ಅದರ ನಾಯಕಿಯಾಗಿ ಮೊದಲು ಕೇಳಿ ಬರುವುದು ಪಕ್ಕದ ಭಾಷೆಯ ನಟಿಯ ಹೆಸರು. ಆದರೆ, ಕಳೆದ ಒಂದು ವರ್ಷದಿಂದ ಪರಭಾಷೆಯ ನಟಿಯರ ಹೆಸರು ಕೇಳಿ ಬರುತ್ತಿಲ್ಲ. ಆಮದು ಪ್ರಮಾಣ ಬಹುತೇಕ ಕಡಿಮೆ ಆಗಿದೆ. ಮತ್ತೊಂದು ಭಾಷೆಯಿಂದ, ಇನ್ನೊಂದು ಭಾಷೆಗೆ ವಲಸೆ ಹೋಗುವವರೇ ಇಲ್ಲವಾಗಿದೆ.
ಯುಗಾದಿ ಹೋಳಿಗೆ: ನಟಿ ಅದಿತಿ ಪ್ರಭುದೇವ ಜೊತೆ ಬಾಳೆ ಎಲೆ ಭರ್ಜರಿ ಭೋಜನ!
ಪ್ರಸ್ತುತ ಯಾವ ನಿರ್ಮಾಪಕರೂ ಪರಭಾಷೆಗಳಿಂದ ನಟಿಯರನ್ನು ಕರೆಸುತ್ತಿಲ್ಲ. ಒಬ್ಬ ನಟಿ ಆಕೆ ಜತೆಗೆ ಮೇಕಪ್ ಆರ್ಟಿಸ್ಟ್, ಹೇರ್ ಸ್ಟೈಲ್ ಡಿಸೈನರ್, ಮ್ಯಾನೇಜರ್, ಆಕೆಯ ತಂದೆ ಅಥವಾ ತಾಯಿ ಸೇರಿದರೆ ಕನಿಷ್ಟಐದಾರು ಜನರನ್ನು ಸಾಕಬೇಕಿದೆ. ಹೋಟೆಲ್ ಹಾಗೂ ಪ್ರಯಾಣದ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ವಯಸ್ಸಾದ ತಂದೆ- ತಾಯಿಯರಿದ್ದರೆ ನಾಯಕಿ ಕರೆದುಕೊಂಡು ಬರುವಂತಿಲ್ಲ. ನಿರ್ಮಾಪಕರಿಗೆ ಆರ್ಥಿಕ ಸಂಕಷ್ಟವಾದರೆ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವ ನಟಿಯರಿಗೆ ಆರೋಗ್ಯದ ಕಾಳಜಿ ಮತ್ತು ಕೊರೋನಾ ಭಯ. ಈ ಎಲ್ಲಾ ಕಾರಣಗಳಿಗಾಗಿ ಕನ್ನಡ ಚಿತ್ರರಂಗ ಸ್ಥಳೀಯ ಪ್ರತಿಭೆಗಳೇ ಸಾಕೆನ್ನುತ್ತಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್ ತಾರೆಗಳು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.
ಯಾರ‍್ಯಾರ ಕೈಲಿ ಎಷ್ಟೆಷ್ಟು ಚಿತ್ರಗಳಿವೆ ಗೊತ್ತೇ?
1. ಅದಿತಿ ಪ್ರಭುದೇವ: 12 ಚಿತ್ರಗಳು
ದಿಲ್ ಮಾರ್, ತೋತಾಪುರಿ 1 ಮತ್ತು 2, ಗಜಾನನ ಗ್ಯಾಂಗ್, ಆನಾ, ಚಾಂಪಿಯನ್, ಒಂಭತ್ತನೇ ದಿಕ್ಕು, ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಓಲ್ಡ್‌ಮಾಂಕ್, ಭಗವಾನ್ ಶ್ರೀಕೃಷ್ಣ ಪರಮಾತ್ಮ, ತ್ರಿಬಲ್ ರೈಡಿಂಗ್, 5ಡಿ, ಅಂದೊಂದಿತ್ತು ಕಾಲ ಚಿತ್ರಗಳು ಶೂಟಿಂಗ್ ಹಂತದಲ್ಲಿವೆ.
ಮಾರುವೇಷದಲ್ಲಿ ಡಿಂಪಲ್ ಕ್ವೀನ್ .. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಏನೆಲ್ಲಾ ತಗೊಂಡ್ರು?
2. ರಚಿತಾರಾಮ್: 14 ಚಿತ್ರಗಳು
ಏಕ್ ಲವ್ ಯಾ, 100, ಸೂಪರ್ ಮಚ್ಚಿ (ತೆಲುಗು) ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಏಪ್ರಿಲ್ 1, ಮಾನ್‌ಸೂನ್ ರಾಗ, ಲಿಲ್ಲಿ, ಡಾಲಿ, ವೀರಂ, ರವಿ ಬೋಪಣ್ಣ, ಲವ್ ಯೂ ರಚ್ಚು, ಬ್ಯಾಡ್‌ಮ್ಯಾನರ್ಸ್, ಪಂಕಜ್ ಕಸ್ತೂರಿ, ಮ್ಯಾಟ್ನಿ ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. ಶಬರಿ ಸರ್ಚಿಂಗ್ ಫಾರ್ ರಾವಣ ಸಿನಿಮಾ ಘೋಷಣೆಯಾಗಿದೆ. ಅಲ್ಲಿಗೆ 14 ಚಿತ್ರಗಳು ಡಿಂಪಲ್ ಕ್ವೀನ್ ಕೈಯಲ್ಲಿವೆ.
3. ಹರಿಪ್ರಿಯಾ: 8 ಚಿತ್ರಗಳು
ಪೆಟ್ರೋಮ್ಯಾಕ್ಸ್, ಅಮೃತಮತಿ, ಹ್ಯಾಪಿ ಎಂಡಿಂಗ್ ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಉಳಿದಂತೆ ಬೆಲ್ ಬಾಟಮ್ 2, ಲಗಾಮ್, ಹೆಸರಿಡದ ಶಶಾಂಕ್ ನಿರ್ದೇಶನದ ಚಿತ್ರ, ಕಸ್ತೂರ್ ಬಾ ಚಿತ್ರಗಳು ಶೂಟಿಂಗ್‌ಗೆ ಹೊರಡಬೇಕಿದೆ. ತೆಲುಗಿನ ‘ಎವರು’ ಚಿತ್ರದ ರೀಮೇಕ್ ಶೂಟಿಂಗ್ ನಡೆಯುತ್ತಿದೆ.
4. ಸಂಜನಾ ಆನಂದ್: 5 ಚಿತ್ರಗಳು
ಸಲಗ ಹಾಗೂ ಕ್ಷತ್ರಿಯ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. ಅದ್ದೂರಿ ಲವರ್ ಶೂಟಿಂಗ್‌ಗೆ ಹೊರಡಬೇಕಿದೆ. ವಿಂಡೋ ಸೀಟ್ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
5. ಸೋನಲ್ ಮೊಂತೆರೋ: 4 ಚಿತ್ರಗಳು
ಗಾಳಿಪಟ 2, ಶುಗರ್ ಫ್ಯಾಕ್ಟ್ರಿ, ಬುದ್ಧಿವಂತ 2 ಚಿತ್ರಗಳಿವೆ.
ಇವರಲ್ಲದೇ ಶಾನ್ವಿ ಶ್ರೀವಾಸ್ತವ್, ಮಿಲನಾ ನಾಗರಾಜ್, ಶ್ರೀಲೀಲಾ, ಖುಷಿ ರವಿ... ಹೀಗೆ ಕನ್ನಡದ ಬಹುತೇಕ ನಟಿಯರು ಸರಾಸರಿ ಮೂರರಿಂದ ನಾಲ್ಕು ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ. ಬಹುತೇಕ ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಅಥವಾ ಶೂಟಿಂಗ್ ಹಂತದಲ್ಲಿವೆ. ಕೊರೋನಾ ಕನ್ನಡ ನಟಿಯರ ಪಾಲಿಗೆ ಹೀಗೆ ಅದೃಷ್ಟತಂದಿಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.