ಕುದುರೆ ರೇಸ್‌ನಲ್ಲಿ ಕರ್ಣ ಸೀರಿಯಲ್ ನಟ: ಏನಿದು ಕಿರಣ್ ರಾಜ್ ‘ಜಾಕಿ 42’ ಹೊಸ ವಿಷ್ಯ?

Published : Oct 07, 2026, 03:49 PM IST
Kiran Raj Jackie 42

ಸಾರಾಂಶ

ಕರ್ಣ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ಅಭಿನಯದ ‘ಜಾಕಿ 42’ ಸಿನಿಮಾ ನವೆಂಬರ್ 20ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಕಿರಣ್ ರಾಜ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕರ್ಣ ಸೀರಿಯಲ್‌ ಮೂಲಕ ಮನೆಮಾತಾಗಿರುವ ನಟ ಕಿರಣ್ ರಾಜ್ ಈಗ ಸಿನಿಮಾದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ, ಅವರು ಅಭಿನಯಿಸಿರುವ ‘ಜಾಕಿ 42’ ಸಿನಿಮಾದಲ್ಲಿ ಡಬಲ್ ರೋಲ್ ಮಾಡಿದ್ದಾರೆ. ಗುರುತೇಜ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಇದೀಗ ಸಂಪೂರ್ಣವಾಗಿ ಸಿದ್ಧವಾಗಿದ್ದು, ರಿಲೀಸ್ ಡೇಟ್ ಕೂಡ ಅಧಿಕೃತವಾಗಿ ಘೋಷಣೆಯಾಗಿದೆ.

‘ಜಾಕಿ 42’ ರಿಲೀಸ್ ಡೇಟ್ ಫಿಕ್ಸ್

ಕಿರಣ್ ರಾಜ್ ಅಭಿನಯದ ‘ಜಾಕಿ 42’ ಸಿನಿಮಾ ನ.20ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಸಿನಿಮಾ ತಂಡವೇ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದು, ಈ ಮೂಲಕ ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ‘ಪ್ರೇಮದ ಊರಲಿ’ ಚಿತ್ರದ ವಿತರಕರಾಗಿದ್ದ ಜಯಣ್ಣ ಅವರು ‘ಜಾಕಿ 42’ ಸಿನಿಮಾದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಜ್ಯದಾದ್ಯಂತ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡುವ ಸಿದ್ಧತೆ ನಡೆಯುತ್ತಿದೆ.

ಕುದುರೆ ರೇಸ್ ಸುತ್ತ ಹೆಣೆದ ಕಥೆ

‘ಜಾಕಿ 42’ ಸಿನಿಮಾದ ಪ್ರಮುಖ ಆಕರ್ಷಣೆ ಕುದುರೆ ರೇಸ್. ಕುದುರೆ ರೇಸ್‌ ಹಿನ್ನೆಲೆಯಲ್ಲೇ ಚಿತ್ರದ ಕಥೆ ಸಾಗಲಿದ್ದು, ಇದರ ಜೊತೆಗೆ ಕೌಟುಂಬಿಕ ಮೌಲ್ಯಗಳು, ಭಾವನಾತ್ಮಕ ಸನ್ನಿವೇಶಗಳು ಮತ್ತು ಹಾಸ್ಯಕ್ಕೂ ಸಿನಿಮಾದಲ್ಲಿ ಮಹತ್ವ ನೀಡಲಾಗಿದೆ. ಈ ಸಿನಿಮಾದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿವೆ. ದಸರಾ ಹಬ್ಬದ ಸಂದರ್ಭದಲ್ಲಿ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಡಬಲ್ ರೋಲ್‌ನಲ್ಲಿ ಕಿರಣ್ ರಾಜ್

‘ಜಾಕಿ 42’ ಸಿನಿಮಾದ ಮತ್ತೊಂದು ಪ್ರಮುಖ ವಿಶೇಷತೆ ಕಿರಣ್ ರಾಜ್ ಅವರ ಡಬಲ್ ರೋಲ್. ಸಿನಿಮಾದ ಟೀಸರ್‌ನಲ್ಲೇ ಅವರ ಎರಡು ಪಾತ್ರಗಳ ಝಲಕ್ ತೋರಿಸಲಾಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಕುದುರೆ ರೇಸ್‌ ಹಿನ್ನೆಲೆಯ ಕಥೆಯಲ್ಲಿ ಕಿರಣ್ ರಾಜ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಅಭಿನಯದ ಎರಡು ಆಯಾಮಗಳನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

200ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ

‘ಜಾಕಿ 42’ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಬರೋಬ್ಬರಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಭಾರತಿ ಸತ್ಯನಾರಾಯಣ್ ತಿಳಿಸಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ನಟಿಸಿದ್ದಾರೆ. ಯುಕ್ತ, ರಾಜೇಂದ್ರ ಕಾರಂತ್, ಬಲರಾಜ್ ವಾಡಿ, ಗಿರೀಶ್ ಹೆಗ್ಡೆ, ಅರುಣ್ ಆಚಾರ್, ಯಶ್ ಶೆಟ್ಟಿ, ದೀಪಕ್ ರೈ ಪಣಜೆ, ಶಾಂತಲಾ ಕಾಮತ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಆ್ಯಕ್ಷನ್, ಫ್ಯಾಮಿಲಿ ಎಮೋಷನ್, ಕಾಮಿಡಿ

‘ಜಾಕಿ 42’ ಕೇವಲ ಕುದುರೆ ರೇಸ್‌ ಕಥೆಯ ಸಿನಿಮಾ ಮಾತ್ರವಲ್ಲ. ಇದರಲ್ಲಿ ಆ್ಯಕ್ಷನ್ ಸನ್ನಿವೇಶ, ಕುಟುಂಬದ ಭಾವನೆಗಳು ಹಾಗೂ ಹಾಸ್ಯದ ಸನ್ನಿವೇಶಗಳಿಗೂ ಜಾಗವಿದೆ. ಸಿನಿಮಾದಲ್ಲಿ ಒಂದು ಪ್ರಮುಖ ಆ್ಯಕ್ಷನ್ ಸೀಕ್ವೆನ್ಸ್ ಕೂಡ ಇರಲಿದೆ. ಚಿತ್ರದ ಸಂಪೂರ್ಣ ಕಥೆಯೇ ಕುದುರೆ ರೇಸ್‌ ಹಿನ್ನೆಲೆಯಲ್ಲೇ ನಡೆಯಲಿದ್ದು, ನಿರ್ದೇಶಕ ಗುರುತೇಜ್ ಶೆಟ್ಟಿ ಅವರ ಪ್ರಕಾರ, ಪೂರ್ಣ ಪ್ರಮಾಣದಲ್ಲಿ ಹಾರ್ಸ್ ರೇಸ್‌ ಹಿನ್ನೆಲೆಯನ್ನು ಹೊಂದಿರುವ ಭಾರತದ ಮೊದಲ ಸಿನಿಮಾ ಎಂಬ ವಿಶೇಷತೆಯನ್ನು ‘ಜಾಕಿ 42’ ಹೊಂದಿದೆ.

ತಾಂತ್ರಿಕ ತಂಡ ಹೇಗಿದೆ?

ಗುರುತೇಜ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ವಿನೋದ್ ಯಜಮಾನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಘವೇಂದ್ರ ಕೋಲಾರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಕಿರಣ್ ರಾಜ್ ಅವರ ಡಬಲ್ ರೋಲ್, ಕುದುರೆ ರೇಸ್‌ ಹಿನ್ನೆಲೆಯ ಕಥೆ, ಫ್ಯಾಮಿಲಿ ಎಮೋಷನ್, ಆ್ಯಕ್ಷನ್ ಮತ್ತು ಕಾಮಿಡಿಯೊಂದಿಗೆ ‘ಜಾಕಿ 42’ ಸಿನಿಮಾ ವಿಭಿನ್ನ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ. ಇದೀಗ ಸಿನಿಮಾ ಮುಂದಿನ ತಿಂಗಳು 20ರಂದು ತೆರೆಗೆ ಬರಲು ಸಜ್ಜಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಸ್, ಆಕ್ಷನ್ ಬಿಟ್ಟು ಲವರ್ ಬಾಯ್ ಆದ ಧ್ರುವ ಸರ್ಜಾ: ಇನ್ಮುಂದೆ ‘ಕೆಮಿಸ್ಟ್ರಿ’, ‘ವಸುದೈವ ಕುಟುಂಬಕಂ’
‘ಪ್ರೇಮದ ಊರಲಿ’ ಸ್ಮಾಲ್ ಬಜೆಟ್ ಸಿನಿಮಾ ಭಾರತದಾದ್ಯಂತ ಟ್ರೆಂಡ್ ಆಗ್ತಿರೋದು ಹೇಗೆ? ಆ ಸೀಕ್ರೆಟ್ ಇಲ್ಲಿದೆ ನೋಡಿ!