
ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅ.6ರಂದು ತಮ್ಮ 38ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಅದ್ದೂರಿಯಾಗಿ ಆಚರಿಸಿಕೊಂಡರು. ಹುಟ್ಟುಹಬ್ಬದ ಅಂಗವಾಗಿ ಧ್ರುವ ಸರ್ಜಾ ಅವರನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಎಲ್ಲಾ ಅಭಿಮಾನಿಗಳ ಜೊತೆಗೆ ಸಂಭ್ರಮದಿಂದ ಕಾಣಿಸಿಕೊಳ್ಳುವ ಮೂಲಕ ಧ್ರುವ ಸರ್ಜಾ ಅವರು ಸಂಭ್ರಮಿಸಿದರು. ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಕುರಿ ಹಾಗೂ ಕಂಬಳಿ ಗಿಫ್ಟ್ ಕೊಟ್ಟು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದು ವಿಶೇಷವಾಗಿತ್ತು.
ಅ.5ರ ಮಧ್ಯ ರಾತ್ರಿಯಿಂದಲೇ ಅಭಿಮಾನಿಗಳ ದಂಡು ಧ್ರುವ ಸರ್ಜಾ ಅವರ ನಿವಾಸಕ್ಕೆ ಆಗಮಿಸಿದ್ದರು. ಮಳೆಯ ನಡುವೆಯೂ ತಮ್ಮನ್ನು ನೋಡಲು ಬಂದ ಅಭಿಮಾನಿಗಳ ಜೊತೆಗೆ ಧ್ರುವ ಸರ್ಜಾ ಅವರು ಕೇಕ್ ಕಟ್ ಮಾಡಿ ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಧ್ರುವ ಸರ್ಜಾ, ‘ಒಳ್ಳೆಯ ಸಿನಿಮಾಗಳನ್ನು ಮಾಡುವ ಮೂಲಕ ನಿಮ್ಮ ಅಭಿಮಾನ, ಪ್ರೀತಿಯನ್ನು ಗೌರವಿಸುತ್ತೇನೆ. ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡಿ ಬೆಂಬಲಿಸಿ’ ಎಂದು ಕಿವಿ ಮಾತು ಹೇಳಿದರು.
ಹುಟ್ಟುಹಬ್ಬದ ಅಂಗವಾಗಿ ಧ್ರುವ ಸರ್ಜಾ ಅವರ ಎರಡು ಹೊಸ ಸಿನಿಮಾಗಳು ಘೋಷಣೆಯಾಗಿವೆ. ‘ಕೆಮಿಸ್ಟ್ರಿ’ ಹಾಗೂ ‘ವಸುದೈವ ಕುಟುಂಬಕಂ’ ಚಿತ್ರಗಳ ಟೈಟಲ್ ಹಾಗೂ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಪೈಕಿ ವಿಶಾಲ್ ಆತ್ರೇಯ ನಿರ್ದೇಶನ, ಪೀಪಲ್ ಮೀಡಿಯಾ ಫ್ಯಾಕ್ಟ್ರಿ ನಿರ್ಮಾಣದ ‘ಕೆಮಿಸ್ಟ್ರಿ’ ಚಿತ್ರವು ಲವ್ ಕಂ ರೊಮ್ಯಾಂಟಿಕ್ ಚಿತ್ರವಾಗಿದೆ. ಈ ಸಿನಿಮಾ ಮೂಲಕ ಪರಭಾಷೆ ಸೇರಿಕೊಂಡಿದ್ದ ನಭಾ ನಟೇಶ್ ವಾಪಸ್ ಕನ್ನಡಕ್ಕೆ ಬಂದಿದ್ದಾರೆ. ನಾಯಕಿಯಾಗಿ ನಟಿಸುತ್ತಿದ್ದಾರೆ.
ಇನ್ನೊಂದು ಸಿನಿಮಾ ‘ವಸುದೈವ ಕುಟುಂಬಕಂ’ ಅನ್ನು ನಂದ ಸುಧೀರ್ ನಿರ್ದೇಶಿಸಿ, ಹರೀಶ್ ಪೆದ್ದಿ ನಿರ್ಮಿಸುತ್ತಿದ್ದಾರೆ. ಬಿ.ಎಸ್. ಸುಧೀಂದ್ರ ಸಹ ನಿರ್ಮಾಣವಿದೆ. ಈ ಸಿನಿಮಾ ಮೂಲಕ ನಂದಕಿಶೋರ್ ನಂದ ಸುಧೀರ್ ಆಗಿದ್ದಾರೆ. ಈ ಚಿತ್ರವು ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಚಿತ್ರವಾಗಿದೆ. ಇದರ ಜೊತೆಗೆ ‘ಪೊಗರು’ ಚಿತ್ರದ ನಿರ್ಮಾಪಕ ಬಿ.ಕೆ.ಗಂಗಾಧರ್ ನಿರ್ಮಾಣದ ಒಂದು ಚಿತ್ರವನ್ನು ಧ್ರುವ ಸರ್ಜಾ ಒಪ್ಪಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.