
ಕಾಂತಾರ ಸಿನಿಮಾ ನಟ ಪ್ರಭಾಕರ್ ಕೆ ಕಲ್ಯಾಣಿ ಅವರು ( Kantara Movie Actor Prabhakar Kalyani ) ಹೃದಯಘಾತದಿಂದ ನಿಧನರಾಗಿದ್ದಾರೆ. ಹಿರಿಯಡ್ಕದಲ್ಲಿರುವ ಮನೆಯಲ್ಲಿ ಅಸುನೀಗಿದ್ದಾರೆ. ಮೂಲತಃ ಇವರು ಪೆರ್ಡೂರಿನವರು. ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲಸ ಮಾಡಿದ್ದರು. ಕಾಂತಾರ ಸಿನಿಮಾದಲ್ಲಿ ವಕೀಲನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಸಿನಿಮಾ ಮಾಡಿದ ದಾಖಲೆ ಎಲ್ಲರಿಗೂ ಗೊತ್ತಿದೆ.
ಕಳೆದ ಮೂರು ದಿನಗಳ ಹಿಂದೆ ಹಿರಿಯಡ್ಕದಲ್ಲಿ ಅವರು ತಲೆ ಸುತ್ತಿ ಬಿದ್ದದ್ದರು. ಆಗಸ್ಟ್ 8ರಂದು ಅವರು ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಜಾರಿ ಬಿದ್ದಿದ್ದರು. ಇವರಿಗೆ ಮೈ ಕೈ ನೋವು ಇತ್ತಂತೆ. ಹೀಗಾಗಿ ಆಸ್ಪತ್ರೆಗೆ ಸೇರಿಸಬೇಕು ಎನ್ನುತ್ತಿರುವಾಗಲೇ ಜೀವ ಬಿಟ್ಟಿದ್ದಾರೆ. ಪ್ರಭಾಕರ್ ಅವರು ಓರ್ವ ಮಗ, ಪತ್ನಿಯನ್ನು ಅಗಲಿದ್ದಾರೆ. ಇಂದು ಬೀಡಿನಗುಡ್ಡೆ ಚಿತಾಗಾರದಲ್ಲಿ ಇವರ ಅಂತ್ಯಕ್ರಿಯೆ ನಡೆಯಲಿದೆಯಂತೆ. ರಂಗಭೂಮಿ ಕಲಾವಿದನ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.
ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ನಟ ಹಾಗೂ ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.