Kantara Chapter 1 Heroine: ರಿಷಬ್‌ ಶೆಟ್ಟಿ 'ಕಾಂತಾರ ಸಿನಿಮಾ' ಹೀರೋಯಿನ್ ಹೆಸರು ರಿವೀಲ್‌ ಮಾಡಿದ ಹೊಂಬಾಳೆ ಫಿಲ್ಮ್ಸ್

Published : Aug 08, 2025, 10:47 AM IST
kantara movie heroine

ಸಾರಾಂಶ

Kantara Movie 1 Heroine Rukmini Vasanth: ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿರುವ ರಿಷಬ್‌ ಶೆಟ್ಟಿ ನಟನೆಯ ಬಹುನಿರೀಕ್ಷಿತ 'ಕಾಂತಾರ' ಸಿನಿಮಾದ ನಾಯಕಿ ಯಾರು ಎನ್ನೋದು ರಿವೀಲ್‌ ಆಗಿದೆ. 

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿರುವ ಬಹುನಿರೀಕ್ಷಿತ 'ಕಾಂತಾರ ಚಾಪ್ಟರ್ 1' ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್ 'ಕನಕವತಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಈ ಶುಭದಿನದಂದು, ಚಿತ್ರತಂಡವು ಫಸ್ಟ್‌ ಲುಕ್‌ ರಿಲೀಸ್‌ ಮಾಡಿದೆ. ಈ ಸಿನಿಮಾವು 2022ರಲ್ಲಿ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದ 'ಕಾಂತಾರ' ಸಿನಿಮಾದ ಕಥೆಗೆ ಮತ್ತಷ್ಟು ಆಳವಾದ ಹಿನ್ನೆಲೆಯನ್ನು ನೀಡಲಿದೆ.

ಈಗಾಗಲೇ ಶೂಟಿಂಗ್‌ ಮುಗಿಸಿರುವ ಸಿನಿಮಾ ತಂಡ!

ನಾಯಕ ನಟ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಅವರ ಫಸ್ಟ್‌ಲುಕ್ ಮತ್ತು ನಂತರ ಬಂದ ಶೂಟಿಂಗ್ ಮುಕ್ತಾಯದ ವೀಡಿಯೋಗಳು ಈಗಾಗಲೇ ಭಾರೀ ಕುತೂಹಲ ಮೂಡಿಸಿವೆ. ಇದೀಗ 'ಕನಕವತಿ'ಯ ಪಾತ್ರದ ಪರಿಚಯ, ಸಿನಿಮಾದ ಕುರಿತಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರದಲ್ಲಿನ ಅದ್ಭುತ ದೃಶ್ಯ ವೈಭವಕ್ಕೆ ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಜೀವ ತುಂಬಲಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್, ಸದಾ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮತ್ತು ಭಾವನಾತ್ಮಕ ಕಥೆಗಳನ್ನು ಹೇಳುವ ತನ್ನ ಬದ್ಧತೆಯನ್ನು ಈ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರದರ್ಶಿಸಿದೆ.

ವಿಶ್ವಾದ್ಯಂತ ರಿಲೀಸ್‌ ಆಗಲಿರೋ ಸಿನಿಮಾ!

'ಕಾಂತಾರ ಚಾಪ್ಟರ್ 1' ಚಿತ್ರವು ಅಕ್ಟೋಬರ್ 2, 2025 ರಂದು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ವರಮಹಾಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ, ಹೊಂಬಾಳೆ ಫಿಲ್ಮ್ಸ್ ಕನಕವತಿಯ ಫಸ್ಟ್‌ಲುಕ್‌ನ್ನು ಹೆಮ್ಮೆಯಿಂದ ಪ್ರಸ್ತುತಪಡಿಸಿದೆ. ಈ ಪಾತ್ರವು ಜಗತ್ತಿನಾದ್ಯಂತ ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಛಾಪು ಮೂಡಿಸುವುದು ಖಚಿತ.

ಬೇರೆ ಭಾಷೆಯ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್‌ ನಟನೆ

ʼಸಪ್ತಸಾಗರದಾಚೆ ಎಲ್ಲೋʼ ಸಿನಿಮಾದಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್‌ ಅವರು ದೊಡ್ಡ ಮಟ್ಟದಲ್ಲಿ ಜನರಿಂದ ಪ್ರೀತಿ ಗಳಿಸಿದ್ದರು. ʼಬೀರ್‌ಬಲ್‌ʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ರಕ್ಷಿತ್‌ ಶೆಟ್ಟಿ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದರು. ʼಅಪ್‌ಸ್ಟೇರ್ಸ್‌ʼ ಎನ್ನುವ ಹಿಂದಿ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. 'ಬಾನದಾರಿಯಲ್ಲಿ', 'ಬಘೀರ', 'ಭೈರತಿ ರಣಗಲ್'‌, 'ಅಪ್ಪುಡೋ ಇಪ್ಪುಡೋ ಎಪ್ಪುಡೋ', 'Ace' ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

ಬೆಂಗಳೂರಿನ ಮೂಲದ ರುಕ್ಮಿಣಿ ವಸಂತ್‌ ಅವರ ತಂದೆ ವಸಂತ್‌ ವೇಣುಗೋಪಾಲ್‌ ಅವರು ಆರ್ಮಿಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾಗಿದ್ದಾರೆ. ಅಂದಹಾಗೆ ತಾಯಿ ಭರತನಾಟ್ಯಂ ಡ್ಯಾನ್ಸರ್.‌

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ