ಕಾಂತಾರದ 'ಲೀಲಾ' ಸಪ್ತಮಿ ಗೌಡ ನಟನೆಯ ಬಾಲಿವುಡ್‌ ಚಿತ್ರಕ್ಕೆ ಸೆನ್ಸಾರ್‌ ಭರ್ಜರಿ ಕತ್ತರಿ!

By Santosh Naik  |  First Published Aug 21, 2023, 5:41 PM IST


ಕನ್ನಡದ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಕಾಂತಾರ ಚಿತ್ರದ ಮೂಲಕ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡಿರುವ ಅವರು, ವಿವೇಕ್‌ ಅಗ್ನಿಹೋತ್ರಿ ಸಿನಿಮಾದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಲಿದ್ದಾರೆ.


ಬೆಂಗಳೂರು (ಆ.21): ಕನ್ನಡ ನಟಿ, ಕಾಂತಾರ ಚಿತ್ರದ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡ ಸಪ್ತಮಿ ಗೌಡ ನಟನೆಯ ಬಾಲಿವುಡ್‌ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಸಿನಿಮಾದ ಮೂಲಕ ಸಪ್ತಮಿ ಗೌಡ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಇವರು ನಟಿಸಿದ್ದ ಚಿತ್ರವನ್ನು ಸೆನ್ಸಾರ್‌ ಬೋರ್ಡ್‌ ವೀಕ್ಷಣೆ ಮಾಡಿದ್ದು, ಬರೋಬ್ಬರಿ 9 ಕಟ್‌ಗಳನ್ನು ಸೂಚಿಸಿದೆ. ಹೌದು, ನಟಿ ಸಪ್ತಮಿ ಗೌಡ, 'ದಿ ಕಾಶ್ಮೀರ್‌ ಫೈಲ್ಸ್‌' ಸಿನಿಮಾ ಖ್ಯಾತಿಯ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ 'ದಿ ವ್ಯಾಕ್ಸಿನ್‌ ವಾರ್‌' ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇತ್ತೀಚೆಗೆ ಚಿತ್ರ ವೀಕ್ಷಿಸಿದ ಕೇಂದ್ರ ಸೆನ್ಸಾರ್‌ ಬೋರ್ಡ್‌ 9 ಕಟ್‌ಗಳನ್ನು ಸೂಚಿಸಿದೆ. ಚಿತ್ರದಲ್ಲಿ ಪ್ರಧಾನಿ ಪಾತ್ರ ಮಾಡುವ ವ್ಯಕ್ತಿ ಅಡಿರುವ ಡೈಲಾಗ್‌ಗಳನ್ನು ಬದಲಾವಣೆ ಮಾಡುವಂತೆ ಸೂಚನೆ ನೀಡಿದೆ. ಅದರೊಂದಿಗೆ ಕೆಲವೊಂದು ಕಡೆಗಳಲ್ಲಿ ವಿಶ್ವಗುರು ಎನ್ನುವ ಶಬ್ದವನ್ನೂ ಕೂಡ ಸೆನ್ಸಾರ್‌ ಬೋರ್ಡ್‌ ಕತ್ತರಿಸಿದೆ. ಹಾಗೂ ಕೆಲವೊಂದು ನಿಂದನಾರ್ಹ ಪದಗಳನ್ನು ತೆಗೆದುಹಾಕುವಂತೆ ಚಿತ್ರದ ನಿರ್ದೇಶಕರಿಗೆ ಸೂಚನೆ ನೀಡಿದೆ.

2 ಗಂಟೆ 40 ನಿಮಿಷದ ಚಿತ್ರ ಇದಾಗಿದ್ದು, ನಿಗದಿಯಂತೆ ಆಗಸ್ಟ್‌ನಲ್ಲಿಯೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ನಿರ್ಮಾಪಕರು ಚಿತ್ರದ ಬಿಡುಗಡೆಯನ್ನು ಸೆಪ್ಟೆಂಬರ್‌ 28ಕ್ಕೆ ಮುಂದೂಡಿದ್ದಾರೆ.  ಕರೋನಾ ಸಮಯದಲ್ಲಿ ತಯಾರಿಸಲಾದ ಭಾರತದ ಮೊದಲ ಸ್ಥಳೀಯ ಲಸಿಕೆಯ ಸುತ್ತ ಚಿತ್ರದ ಥೀಮ್ ಹೆಣೆಯಲಾಗಿದೆ. ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ ಮತ್ತು ರೈಮಾ ಸೇನ್ ಜೊತೆ ಸಪ್ತಮಿ ಗೌಡ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೆನ್ಸಾರ್‌ ಬೋರ್ಡ್‌ ಚಿತ್ರದಲ್ಲಿ ಮಾಡಿರುವ ಬದಲಾವಣೆಗಳು
- ಚಿತ್ರದ ಶೀರ್ಷಿಕೆಯನ್ನು ಹಿಂದಿಗೆ ಬದಲಾಯಿಸಬೇಕು. ಅಲ್ಲದೆ, ಡಿಸ್‌ಕ್ಲೈಮರ್‌ ಸಮಯವನ್ನು ಪ್ರೇಕ್ಷಕರು ಸರಿಯಾಗಿ ಓದುವಂತೆ ಹೆಚ್ಚಿಸಬೇಕು.
- ಕೆಲವು ಆಕ್ಷೇಪಾರ್ಹ ಪದಗಳನ್ನು ಬದಲಾಯಿಸಲಾಗಿದೆ ಮತ್ತು ತೆಗೆದುಹಾಕಲಾಗಿದೆ.
- ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಅವರನ್ನು ಉಲ್ಲೇಖಿಸುವ ಸಂಭಾಷಣೆಯನ್ನು ತೆಗೆದುಹಾಕಲಾಗಿದೆ.
- 'ಔರ್ ಬನಾವೋ ಮಂದಿರ್' ಎಂಬ ಡೈಲಾಗ್ ಅನ್ನು 'ಐಸೆ ಬನೇಂಗೆ ಹಮ್ ವಿಶ್ವಗುರು' ಎಂದು ಬದಲಿಸಲಾಗಿದೆ.
- ವಿಶ್ವ ಗುರು ಎಂಬ ಪದವನ್ನು ಡೈಲಾಗ್‌ನಿಂದ ತೆಗೆದುಹಾಕಲಾಗಿದೆ.
- ಕೆಲವು ಸಂವಾದಗಳಲ್ಲಿ ಪ್ರಧಾನಮಂತ್ರಿ ಎನ್ನುವ ಶಬ್ದವನ್ನು ಬಳಸದಂತೆ ತಡೆಹಿಡಿಯಲಾಗಿದೆ.

ಫ್ಯಾನ್ಸಿ ಸೀರೆಯಲ್ಲೂ ನೀನೇ ಬ್ಯೂಟಿ; ಕಾಂತಾರ ಲೀಲಾ ಬ್ಲ್ಯಾಕ್‌ ಬ್ಯೂಟಿ ಲುಕ್!

Latest Videos

ಅಮೆರಿಕದಲ್ಲಿ ಪ್ರೀಮಿಯರ್‌ಗೆ ಅದ್ಭುತ ಪ್ರತಿಕ್ರಿಯೆ: ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಪತ್ನಿ ಪಲ್ಲವಿ ಜೋಶಿ ಅವರೊಂದಿಗೆ ಅಮೆರಿಕದಲ್ಲಿದ್ದಾರೆ. ಅಲ್ಲಿ ಅವರು ತಮ್ಮ ಮುಂಬರುವ ಚಿತ್ರ 'ದಿ ವ್ಯಾಕ್ಸಿನ್ ವಾರ್' ಪ್ರೀಮಿಯರ್‌ನಲ್ಲಿ ಪಾಲ್ಗೊಂಡಿದ್ದಾರೆ. ಅವರ ಚಿತ್ರದ ಈ ಪ್ರಿ-ರಿಲೀಸ್ ಪ್ರೀಮಿಯರ್ ಸೆಪ್ಟೆಂಬರ್ 3 ರವರೆಗೆ ನಡೆಯಲಿದೆ. ಅಗ್ಮಿಹೋತ್ರಿ ಇದಕ್ಕೆ ಇಂಡಿಯಾ ಫಾರ್ ಹ್ಯುಮಾನಿಟಿ ಟೂರ್ ಎಂದು ಹೆಸರಿಟ್ಟಿದ್ದಾರೆ. ಇದಕ್ಕೆ ಅಮೆರಿಕದಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮಾಡರ್ನ್‌ vs ಟ್ರೆಡಿಷನಲ್; ಸಪ್ತಮಿ ಗೌಡ ವೈರಲ್ ಫೋಟೋಗಳು!

click me!