ಸಹನೆ, ಸರ್ವಸ್ವಗಳಾಗಿ ಸದಾ ಜೊತೆಗಿರು.. ಪತ್ನಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ ರಿಷಬ್ ಶೆಟ್ಟಿ

Published : Feb 10, 2025, 11:10 AM ISTUpdated : Feb 10, 2025, 11:15 AM IST
ಸಹನೆ, ಸರ್ವಸ್ವಗಳಾಗಿ ಸದಾ ಜೊತೆಗಿರು.. ಪತ್ನಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ ರಿಷಬ್ ಶೆಟ್ಟಿ

ಸಾರಾಂಶ

ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಒಂಭತ್ತನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ತಿದ್ದಾರೆ. ಮಕ್ಕಳೊಂದಿಗೆ ಕಡಲತೀರದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ರಿಷಬ್, ಪ್ರಗತಿಯವರನ್ನು ಪ್ರೀತಿಯಿಂದ ಸ್ಮರಿಸಿದ್ದಾರೆ. "ಸಹನೆ, ಶಕ್ತಿ, ಸರ್ವಸ್ವ" ಎಂದು ಬಣ್ಣಿಸಿದ್ದಾರೆ.  

ಸ್ಯಾಂಡಲ್ವುಡ್ ಸ್ಟಾರ್, ಕಾಂತಾರ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ (Sandalwood star, actor and director Rishab Shetty) ಮದುವೆ ವಾರ್ಷಿಕೋತ್ಸವ (wedding anniversary)ದ ಸಂಭ್ರಮದಲ್ಲಿದ್ದಾರೆ. ಸುಂದರ ಸಂಸಾರಕ್ಕೆ ಒಂಭತ್ತು ವರ್ಷ ತುಂಬಿದೆ. ರಿಷಬ್ ಶೆಟ್ಟಿ, ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಪತ್ನಿ ಪ್ರಗತಿ ಶೆಟ್ಟಿ (Pragati Shetty )ಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ. 

ಇನ್ಸ್ಟಾಗ್ರಾಮ್ ನಲ್ಲಿ ರಿಷಬ್ ಶೆಟ್ಟಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ನನ್ನ ಸಂಗಾತಿಯಾಗಿ ಹೃದಯಕ್ಕೆ ಒಲವನ್ನು, ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು ನೀನು. ಈ ಸಂಸಾರವೆಂಬ ಸಾರ್ಥಕತೆಯಲ್ಲಿ ನನ್ನ ಸಹನೆ, ಶಕ್ತಿ, ಸರ್ವಸ್ವಗಳಾಗಿ ಸದಾ ಜೊತೆಗಿರು ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ. ಸಮುದ್ರ ಕಿನಾರೆಯಲ್ಲಿ ಇಬ್ಬರು ಮಕ್ಕಳ ಜೊತೆ ರಿಷಬ್ ಶೆಟ್ಟಿ ಹಾಗೂ ಪ್ರಗತಿ ನಡೆಯುತ್ತಿರೋದನ್ನು ವಿಡಿಯೋದಲ್ಲಿ ನೋಡ್ಬಹುದು. ಅಲ್ಲಿಯೇ ದಂಪತಿ ಫೋಟೋ ಇರುವ ಕೇಕ್ ಕತ್ತರಿಸಿ, ವಾರ್ಷಿಕೋತ್ಸವವನ್ನು ಇಬ್ಬರು ಆಚರಿಸಿಕೊಳ್ತಿದ್ದಾರೆ. ಪ್ರಗತಿ, ರಿಷಬ್ ಅವರಿಗೆ ಕೇಕ್ ತಿನ್ನಿಸ್ತಿದ್ದು, ಇಬ್ಬರು ಪರಸ್ಪರ ಹ್ಯಾಪಿ ಆನಿವರ್ಸರಿ ಅಂತ ವಿಶ್ ಮಾಡಿಕೊಳ್ತಾರೆ. ರೋಮ್ಯಾಂಟಿಕ್ ಸ್ಟೆಪ್ ಹಾಕುವ ಜೋಡಿ, ಮಕ್ಕಳ ಜೊತೆ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಮಧ್ಯರಾತ್ರಿ ರಿಷಬ್ ಶೆಟ್ಟಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈವರೆಗೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ ಬಂದಿದೆ. ಇಬ್ಬರು ಸುಖವಾಗಿರಿ, ಚೆಂದದ ಜೋಡಿ, ಹ್ಯಾಪಿ ಆನಿವರ್ಸರಿ ಅಂತ ಅಭಿಮಾನಿಗಳು ವಿಶ್ ಮಾಡಿದ್ದಾರೆ.

Bigg Boss Kannada 11 ವಿಜೇತ ಹನುಮಂತ ಅಣ್ಣ ಮಾರುತಿ ಕೂಡ ರಿಯಾಲಿಟಿ ಶೋ ಸ್ಪರ್ಧಿಯೇ! ಯಾರದು?

ರಿಷಬ್ ಹಾಗೂ ಪ್ರಗತಿ ಶೆಟ್ಟಿ ಮದುವೆಯಾಗಿ 9 ವರ್ಷ ಕಳೆದಿದೆ, 2017ರಲ್ಲಿ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ತಿರುಗಿ, ಪ್ರೀತಿ ದಾಂಪತ್ಯಕ್ಕೆ ತಿರುಗಿ ಈಗ 9 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಜೋಡಿ ಇದು. ರಿಷಬ್ ಹಾಗೂ ಪ್ರಗತಿ ಸ್ಯಾಂಡಲ್ವುಡ್ ಪ್ರಸಿದ್ಧ ಜೋಡಿಗಳಲ್ಲಿ ಒಂದು. ಪ್ರಗತಿ ಶೆಟ್ಟಿ ಸಾಫ್ಟ್ ವೇರ್ ಇಂಜಿನಿಯರ್. ಅವರು ಮದುವೆ ಆದ್ಮೇಲೆ ಫ್ಯಾಷನ್ ಡಿಸೈನ್ ಮುಗಿಸಿದ್ರು. ರಿಷಬ್ ಸಿನಿಮಾಗಳಲ್ಲಿ ಬ್ಯುಸಿಯಿದ್ರೆ ಪ್ರಗತಿ, ವಸ್ತ್ರ ವಿನ್ಯಾಸಕಿ ಕೆಲಸ ಮಾಡ್ತಿದ್ದಾರೆ. ಅವರು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುವ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. 

ಜಯಂತ್‌ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ Seetha Raama Serial ನಟಿ ಮೇಘನಾ ಶಂಕರಪ್ಪ; ಕಿರುತೆರೆ ಗಣ್ಯರು ಭಾಗಿ!

ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ರಿಷಬ್ ಶೆಟ್ಟಿ ಪ್ರಸಿದ್ಧಿ ದಿನ ದಿನಕ್ಕೂ ಹೆಚ್ಚಾಗ್ತಿದೆ. ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ರಿಷಬ್ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 41 ವರ್ಷದ ರಿಷಬ್ ಶೆಟ್ಟಿ, ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ. 2010ರಲ್ಲಿ ನಮ್ ಏರಿಯಾದಲ್ಲಿ ಒಂದು ದಿನ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದ ರಿಷಬ್ ಶೆಟ್ಟಿ ತುಘಲಕ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಲೂಸಿಯಾ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ರಿಷಬ್ ಶೆಟ್ಟಿಗೆ ಹೆಸರು ತಂದುಕೊಟ್ಟಿದ್ದು ಉಳಿದವರು ಕಂಡಂತೆ ಸಿನಿಮಾ. 2016ರಲ್ಲಿ ರಿಕ್ಕಿ ಚಿತ್ರದ ನಿರ್ದೇಶನ ಮಾಡಿದ್ದ ರಿಷಬ್ ಶೆಟ್ಟಿ ನಂತ್ರ ತಿರುಗಿ ನೋಡ್ಲಿಲ್ಲ. ಕಿರಿಕ್ ಪಾರ್ಟಿ, ಸರ್ಕಾರಿ ಪ್ರಾಥಮಿಕ ಶಾಲೆ, ಬಾಲ್ ಬಾಟಮ್, ಗರುಡ ಗಮನ ವೃಷಭ ವಾಹನ ಹೀಗೆ ಒಂದಾದ್ಮೇಲೆ ಒಂದು ಹಿಟ್ ಸಿನಿಮಾ ನೀಡಿದ ರಿಷಬ್ ನಂತ್ರ ಕಾಂತಾರಾದಲ್ಲಿ ಎಲ್ಲರ ಮನೆಮಾತಾದ್ರು. ಸದ್ಯ  ಕಾಂತಾರ : ಚಾಪ್ಟರ್ 1 ಬಹುನಿರೀಕ್ಷಿತ ಚಿತ್ರ. ಈ ಸಿನಿಮಾ ಅಕ್ಟೋಬರ್ 2, 2025ರಂದು ತೆರೆಗೆ ಬರಲಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!