ಮೂಗಿನ ಬಗ್ಗೆ ಪುನೀತ್ ಹೇಳಿದ್ದೇನು? ಅಶ್ವಿನಿ ಎದುರಿಗೇ ಅನುಶ್ರೀ ಕಣ್ಣೀರು ಹಾಕಿದ್ದೇಕೆ?

Published : Feb 09, 2025, 07:23 PM ISTUpdated : Feb 09, 2025, 07:33 PM IST
ಮೂಗಿನ ಬಗ್ಗೆ ಪುನೀತ್ ಹೇಳಿದ್ದೇನು? ಅಶ್ವಿನಿ ಎದುರಿಗೇ ಅನುಶ್ರೀ ಕಣ್ಣೀರು ಹಾಕಿದ್ದೇಕೆ?

ಸಾರಾಂಶ

ಪುನೀತ್‌ರ ಹಳೆಯ ವಿಡಿಯೋವೊಂದರಲ್ಲಿ ತಮ್ಮ ಉದ್ದ ಮೂಗಿನ ಬಗ್ಗೆ ತಮಾಷೆ ಮಾಡಿದ್ದನ್ನು ನೋಡಿ, ನಿರೂಪಕಿ ಅನುಶ್ರೀ ಭಾವುಕರಾಗಿ ಅತ್ತಿದ್ದಾರೆ. ಅಶ್ವಿನಿ ಪುನೀತ್ ಮತ್ತು ಸಂತೋಷ್ ಆನಂದ್‌ರಾಮ್ ಕೂಡ ಉಪಸ್ಥಿತರಿದ್ದರು. ಈ ವಿಡಿಯೋ ಅಪ್ಪುವಿನ ಅಭಿಮಾನಿಗಳಿಗೆ ಮಿಶ್ರ ಭಾವನೆ ಮೂಡಿಸಿದೆ.

ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ವಿಡಿಯೋವೊಂದು ಭಾರೀ ವೈರಲ್ ಆಗ್ತಿದೆ. ನಟಿ, ಆಂಕರ್ ಅನುಶ್ರೀ (Anchor Anushree) ಅವರು ನಟ ಪುನೀತ್ ಹೇಳಿದ್ದು ಕೇಳಿಯೋ ಅಥವಾ ಆ ವಿಡಿಯೋ ನೋಡಿಯೋ ಅತ್ತಿದ್ದು ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಅನುಶ್ರೀ ಪಕ್ಕದಲ್ಲೇ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಇದ್ದಾರೆ. ನಿರ್ದೇಶಕ ಸಂತೋಷ್‌ ಆನಂದ್‌ರಾಮ್ ಕೂಡ ವಿಡಿಯೋದಲ್ಲಿ ಇದ್ದಾರೆ. ಇದು ಹಳೆಯ ವಿಡಿಯೋವಂತೂ ಹೌದು, ಆದರೆ ಯಾವತ್ತು ನಡೆದಿದ್ದು? ಗೊತ್ತಿಲ್ಲ..!

ಆದರೆ ಆ ವಿಡಿಯೋ ನೋಡಿ ಅನುಶ್ರೀ ಅತ್ತಿದ್ದಾರೆ. ಯಾಕೆ ಅತ್ತಿದ್ದು ಅನುಶ್ರೀ? ಉತ್ತರ.. ಬಹುಶಃ ನಟ ಪುನೀತ್‌ ರಾಜ್‌ಕುಮಾರ್ ವಿಡಿಯೋ ಅಲ್ಲಿ ಪ್ಲೇ ಆಗಿದೆ. ಅದರಲ್ಲಿ ಅವರು ತಮ್ಮ ಮೂಗಿನ ಬಗ್ಗೆ ಮಾತನ್ನಾಡಿದ್ದಾರೆ. ಆದರು ಅದಾಗಲೇ ಅವರು ತೀರಕೊಂಡಾಗಿದೆ. ಆ ವಿಡಿಯೋ ನೋಡಿ ಅನುಶ್ರೀ ಅವರಿಗೆ ಪುನೀತ್‌ ನೆನಪಾಗಿದೆ. ಅದಕ್ಕೇ ಅವರು ಅತ್ತಿದ್ದಾರೆ. ಆಗ ಅಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ಇದ್ದಾರೆ. ಅದೆ ವೇದಿಕೆಯಲ್ಲಿ ಸಂತೋಷ್ ಆನಂದ್‌ರಾಮ್ ಕೂಡ ಇದ್ದಾರೆ. ಹಾಗಿದ್ರೆ ವಿಡಿಯೋದಲ್ಲಿ ಏನಿದೆ?

ವಿಧಿಯ ಆಟಕೆ ಪುನೀತ ರಾಜ ಕೇಳದೆ ಬಲಿಯಾದ; ಅರ್ಜುನ 'ಜೋಗಿ ಪದ' ಹೇಳಿದ್ದೇನು?

ಕರುನಾಡ ಕಂದ, ಕರ್ನಾಟಕ ರತ್ನ ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ ಅವರು ಕ್ಯಾಮೆರಾ ಮುಂದೆ ಇದ್ದಾರೆ. ಅಲ್ಲಿ 'ಹೂ, ನಾನು ನನ್ನ ನಾಲಿಗೆಯನ್ನು ಮೂಗಿಗೆ ತಾಗಿಸುತ್ತೇನೆ' ಎನ್ನುತ್ತಲೇ ತಮ್ಮ ನಾಲಿಗೆಯಿಂದ ಮೂಗನ್ನು ಟಚ್ ಮಾಡಿದ್ದಾರೆ. ಅಷ್ಟೇ ಅಲ್ಲ, ಹಾಗೆ ಮಾಡಿದ ಬಳಿಕ ಅವರು 'ನಮ್ಮನೆಯಲ್ಲಿ ಎಲ್ಲರಿಗೂ ಮೂಗು ಉದ್ದ.. ಅದರಲ್ಲೂ ನನಗೆ ಇನ್ನೂ ಸ್ವಲ್ಪ ಜಾಸ್ತಿಯೇ ಉದ್ದ..' ಎಂದು ಹೇಳಿ ತಾವೇ ಸ್ವತಃ ನಕ್ಕಿದ್ದಾರೆ. ಅವರ ಮಾತು ಕೇಳಿ ಎಲ್ಲರು ನಕ್ಕಿದ್ದಾರೆ. 

ಹೌದು, ಆಂಕರ್ ಅನುಶ್ರೀ ಅವರಿಗೆ 'ಅಪ್ಪು' ಎಂದರೆ ಅಚ್ಚುಮೆಚ್ಚು. ಅವರು ಯಾವಾಗಲೂ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಅವರ ಮಾತುಗಳನ್ನು ಕೇಳಿ ತುಂಬಾ ನೆನಪಾಗಿ ಕಣ್ಣೀರು ಸುರಿಸಿದ್ದಾರೆ ಅನುಶ್ರೀ. ಈ ವಿಡಿಯೋ ನೋಡಿ ಹಲವರು ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಆದರೆ, ಎಲ್ಲರ ಆಶಯ ಹಾಗೂ ಭಾವ ಒಂದೇ ಆಗಿದೆ- ಅದು ನಟ ಪುನೀತ್ ಅವರನ್ನು ಇಷ್ಟು ಬೇಗ ಕಳೆದುಕೊಂಡ ದುಃಖ. 

ನಟ ದರ್ಶನ್ ಭೇಟಿಯಾಗ್ತಾರೆ 'ಬಿಗ್ ಬಾಸ್' ರಜತ್ ಕಿಶನ್, ಎಲ್ಲಿ.. ಯಾವಾಗ.. ಯಾಕೆ..?

ಹೌದು, ಈಗ ಅಪ್ಪು ನಮ್ಮೊಂದಿಗಿಲ್ಲ, ಆದರೆ ಅವರಾಡಿದ ಮಾತು, ಮಾಡಿದ ಸಿನಿಮಾಗಳಷ್ಟೇ ಅವರ ನೆನಪನ್ನು ತರುತ್ತಾ ನಮ್ಮೊಂದಿಗೆ ಇವೆ, ಯಾವತ್ತಿಗೂ ಇರುತ್ತವೆ. ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಪು ಅವರನ್ನು ನೆನಪಿಸುವ ಹಲವು ಶಾರ್ಟ್ಸ್‌, ವಿಡಿಯೋಗಳು ಆಗಾಗ ಓಡಾಡುತ್ತಲೇ ಇರುತ್ತವೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ