ನಟ ದರ್ಶನ್ ಭೇಟಿಯಾಗ್ತಾರೆ 'ಬಿಗ್ ಬಾಸ್' ರಜತ್ ಕಿಶನ್, ಎಲ್ಲಿ.. ಯಾವಾಗ.. ಯಾಕೆ..?

Published : Feb 09, 2025, 05:31 PM ISTUpdated : Feb 09, 2025, 05:39 PM IST
ನಟ ದರ್ಶನ್ ಭೇಟಿಯಾಗ್ತಾರೆ 'ಬಿಗ್ ಬಾಸ್' ರಜತ್ ಕಿಶನ್, ಎಲ್ಲಿ.. ಯಾವಾಗ.. ಯಾಕೆ..?

ಸಾರಾಂಶ

ಈ ಮೊದಲೂ ಕೂಡ ಬಹಳಷ್ಟು ಜನರು ನಟ ರಜತ್ ಕಿಶನ್ ಹೆಸರು ಕೇಳಿದ್ದರೂ ಕೂಡ ಬಿಗ್ ಬಾಸ್ ಕನ್ನಡ ಸೀಸನ್ 11 ಬಳಿಕ ರಜತ್ ಇನ್ನಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿ, ಬಿಗ್ ಬಾಸ್ ಟ್ರೋಫಿ..

ನಟ ರಜತ್ ಕಿಶನ್ (Rajath Kishan) ಎಂಬ ಹೆಸರು ಈಗ ಕರ್ನಾಟಕದಲ್ಲಿ ಬಹಳಷ್ಟು ಫೇಮಸ್. ಈ ಮೊದಲೂ ಕೂಡ ಬಹಳಷ್ಟು ಜನರು ನಟ ರಜತ್ ಕಿಶನ್ ಹೆಸರು ಕೇಳಿದ್ದರೂ ಕೂಡ ಬಿಗ್ ಬಾಸ್ ಕನ್ನಡ ಸೀಸನ್ 11 ಬಳಿಕ ರಜತ್ ಇನ್ನಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿ, ಬಿಗ್ ಬಾಸ್ ಟ್ರೋಫಿ ಗೆಲ್ಲದೇ ಹೊರಗೆ ಹೋದವರು ಈ ರಜತ್ ಕಿಶನ್. ಸಹಜವಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮೈಕ್‌ಗೆ ಸಿಕ್ಕಿದ್ದಾರೆ, ಕೇಳೀದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. 

ಸದ್ಯ ನಟ ದರ್ಶನ್ (Darshan) ಅವರು ಕರ್ನಾಟಕದ ಹಾಟ್ ಟಾಫಿಕ್ ಎಂಬುದು ಗೊತ್ತು. ನಟ ದರ್ಶನ್‌ಗೆ ಜಾಮೀನು ಸಿಕ್ಕಾಗ ಈ ರಜತ್‌ ಕಿಶನ್ ಬಿಗ್‌ ಬಾಸ್ ಮನೆಯಲ್ಲಿದ್ದರು. ಹೀಗಾಗಿ ಸಹಜವಾಗಿಯೇ ಮನೆಯಿಂದ ಹೊರಬಂದ ಬಳಿಕ ರಜತ್‌ ಅವರಿಗೆ ಇದು ಹೊಸ ಟಾಪಿಕ್ ಆಗಿದೆ. ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಜತ್, ಅದೇನು ಹೇಳಿರಬಹುದು ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿದೆ. ಹಾಗಿದ್ದರೆ ರಜತ್ ಅದೇನು ಹೇಳೀದ್ದಾರೆ ಅಂತ ನೋಡಿ..

ನಟ ದರ್ಶನ್-ಕಿಚ್ಚ ಸುದೀಪ್‌ ವಿಷಯ; ʼತಿರುಪತಿಯಲ್ಲಿ ಗುಂಡು ಹೊಡೆಸ್ಕೊಳ್ತೀನಿʼ ಎಂದ Bigg Boss ರಜತ್‌

'ದರ್ಶನ್ ಸರ್ ಜೊತೆಗೆ ನನಗೆ ತುಂಬಾ ಒಡನಾಟ ಇಲ್ಲ. ಆದರೆ ತುಂಬಾ ಟೈಮ್ ಮಾತಾಡಿದ್ದೀನಿ. ಅವರು ನನ್ನ ಫೇವರೆಟ್‌ ನಟರಲ್ಲಿ ಒಬ್ಬರು. ತಪ್ಪುಗಳನ್ನು ಮಾಡದೇ ಇರುವವರು ಯಾರಿದ್ದಾರೆ? ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡಿಯೇ ಇರುತ್ತಾರೆ. ಅಷ್ಟಕ್ಕೂ ಅದು ಅವರ ವೈಯಕ್ತಿಕ ಸಂಗತಿ. ದರ್ಶನ್‌ ಸರ್ ಅಥವಾ ಯಾರದೇ ಪರ್ಸನಲ್ ಲೈಫ್‌ ಬಗ್ಗೆ ಮಾತನ್ನಾಡುವಷ್ಟು ದೊಡ್ಡವನಲ್ಲ ನಾನು.. 

ಜೊತೆಗೆ, ನಾನು ಯಾರದೇ ಪರ್ಸ್ನಲ್ ಲೈಫ್ ಬಗ್ಗೆನೂ ಕಾಮೆಂಟ್ ಮಾಡೋದಿಲ್ಲ. ಆದಷ್ಟು ಬೇಗ ದರ್ಶನ್‌ ಸರ್ ಅವರನ್ನು ಭೇಟಿಯಾಗುತ್ತೇನೆ' ಎಂದಿದ್ದಾರೆ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್. ಅಂದರೆ, ನಟ ದರ್ಶನ್ ಅವರನ್ನು ಸದ್ಯವೇ ಭೇಟಿಯಾಗುವ ಪ್ಲಾನ್‌ನಲ್ಲಿ ಇದ್ದಾರೆ ರಜತ್. ಆದರೆ, ಯಾವಾಗ, ಎಲ್ಲಿ ಎಂಬ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿಲ್ಲ. ಫೆಬ್ರವರಿ 16ಕ್ಕೆ ನಟ ದರ್ಶನ್‌ ಹುಟ್ಟುಹಬ್ಬ ಇದೆ. ಆದರೆ, ಆವತ್ತು ನಟ ದರ್ಶನ್ ತಮ್ಮ ಅಭಿಮಾನಿಗಳ ಜೊತೆ ಸಾರ್ವಜನಿಕವಾಗು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. 

ದರ್ಶನ್ ಹುಟ್ಟುಹಬ್ಬ ಆಚರಿಸಲ್ಲ, ಆದ್ರೆ ಫ್ಯಾನ್ಸ್‌ಗಳಿಗೆ ಸಿಗಲಿದೆ ಡೆವಿಲ್ ಟೀಸರ್‌ ಗಿಫ್ಟ್!

ಹಾಗಿದ್ದರೆ ಯಾವಾಗ ರಜತ್ ಕಿಶನ್ ನಟ ದರ್ಶನ್‌ ಅವರನ್ನು ಮೀಟ್ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಒಂದು ಮಾತಂತೂ ಸತ್ಯ. ಬಿಗ್ ಬಾಸ್ ಫೇಮ್ ರಜತ್ ಅವರು ನಟ ದರ್ಶನ್‌ ಅವರನ್ನು ಭೇಟಿಯಾದರೆ ಅದು ಖಂಡಿತ ಸುದ್ದಿಯಾಗುತ್ತೆ ಬಿಡಿ. ನಾವೇ ನಿಮಗೆ ಆ ಸುದ್ದಿ ಕೊಡುತ್ತೇವೆ. ಮತ್ಯಾಕೆ ಚಿಂತೆ..? ಆರಾಮ್ ಆಗಿರಿ.. ರಜತ್‌ ಕಿಶನ್ ಅಭಿಮಾನಿಗಲು ಹಾಗೂ ನಟ ದರ್ಶನ್‌ ಫ್ಯಾನ್ಸ್‌ ಇಬ್ಬರಿಗೂ ಆ ಖುಷಿಯ ಸಮಾಚಾರ ಶೀಘ್ರದಲ್ಲೇ ಸಿಗಲಿದೆ, ಕಾಯುತ್ತಿರಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ