ಹಲೋ, ಇಲ್ಲಿ ಸ್ವಲ್ಪ ನೋಡ್ರೀ... ಕಾಂತಾರ ಖ್ಯಾತಿ ರಿಷಬ್ ಶೆಟ್ಟಿ ಕಾಲೆಳಿದಿದ್ದು ಯಾರನ್ನ ಗೊತ್ತಾ?

By Shriram Bhat  |  First Published Aug 9, 2024, 2:10 PM IST

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ 'ಲಾಫಿಂಗ್ ಬುದ್ಧ' ಟೀಮ್‌ನ ಬಹಳಷ್ಟು ಜನರ ಕಾಲೆಳೆದಿದ್ದಾರೆ ರಿಷಬ್ ಶೆಟ್ಟಿ. ಅವರ ಸ್ನೇಹಿತ ನಟ ಪ್ರಮೋದ್ ಶೆಟ್ಟಿ ಸೇರಿದಂತೆ, ನಟ ದಿಗಂತ್, ನಿರ್ದೇಶಕರಾದ ಭರತ್ ಹಾಗೂ ಇಡೀ ತಂಡವನ್ನು ತಮ್ಮದೇ ಶೈಲಿಯಲ್ಲಿ ಕಾಲೆಳೆದು..


ನಟ-ನಿರ್ದೇಶಕರಾದ ರಿಷಬ್ ಶೆಟ್ಟಿಯವರು (Rishab Shetty) ತಮಾಷೆಯಾಗಿ ಮಾತನಾಡುವುದರಲ್ಲಿ ಎತ್ತಿದ ಕೈ ಎಂಬುದು ಬಹುತೇಕರಿಗೆ ಗೊತ್ತು. ಯಾವುದೇ ಮೀಟಿಂಗ್ ಇರಲಿ, ಪ್ರೆಸ್‌ಮೀಟ್ ಇರಲಿ, ಎಲ್ಲೇ ಮಾತುಕತೆ ಇರಲಿ, ರಿಷಬ್ ಶೆಟ್ಟಿಯವರು ಕೂಲ್ ಆಗಿ ನಗುನಗುತ್ತ ತಮಾಷೆ ಮೂಡ್‌ನಲ್ಲೇ ಮಾತನಾಡುತ್ತಾರೆ. ಅದಕ್ಕೊಂದು ಸಾಕ್ಷಿ ಎಂಬಂತೆ 'ಲಾಫಿಂಗ್ ಬುದ್ಧ' ಪ್ರೆಸ್‌ಮೀಟ್‌ನಲ್ಲಿ ನಡೆದ ಘಟನೆಯೊಂದನ್ನು ಉದಾಹರಿಸಬಹುದು. 

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ 'ಲಾಫಿಂಗ್ ಬುದ್ಧ' ಟೀಮ್‌ನ ಬಹಳಷ್ಟು ಜನರ ಕಾಲೆಳೆದಿದ್ದಾರೆ ರಿಷಬ್ ಶೆಟ್ಟಿ. ಅವರ ಸ್ನೇಹಿತ ನಟ ಪ್ರಮೋದ್ ಶೆಟ್ಟಿ ಸೇರಿದಂತೆ, ನಟ ದಿಗಂತ್, ನಿರ್ದೇಶಕರಾದ ಭರತ್ ಹಾಗೂ ಇಡೀ ತಂಡವನ್ನು ತಮ್ಮದೇ ಶೈಲಿಯಲ್ಲಿ ಕಾಲೆಳೆದು ತಾವು ಮಜಾ ತೆಗೆದುಕೊಂಡು ಅಲ್ಲಿದ್ದವರಿಗೂ ಸಖತ್ ಮಜಾ ಕೊಟ್ಟಿದ್ದಾರೆ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ. ಪ್ರಮೋದ್ ಶೆಟ್ಟಿ ಅವರಿಗಂತೂ ಸಾಕೋ ಸಾಕು ಎಂಬಷ್ಟು ಗೋಳು ಹುಯ್ದುಕೊಂಡಿದ್ದಾರೆ ರಿಷಬ್ ಶೆಟ್ಟಿಯವರು. 

Tap to resize

Latest Videos

undefined

ಹುಬ್ಬೇರಿಸಬೇಡಿ, ಹೀಗೂ ಉಂಟು: ಸಿನಿಮಾ ಇಂಡಸ್ಟ್ರಿ ಮತ್ತೊಂದು ಮಜಲು ತೆರೆದಿಟ್ಟ ಪ್ರಿಯಾಂಕಾ ಚೋಪ್ರಾ!

ಇನ್ನು ಅದೇ ಚಿತ್ರತಂಡದಲ್ಲಿ ಒಬ್ಬರಾಗಿ ಲಾಫಿಂಗ್ ಬುದ್ಧ ಚಿತ್ರದಲ್ಲಿ ನಟಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಎಸ್‌ಕೆ ಉಮೇಶ್ ಅವರನ್ನೂ ಬಿಟ್ಟಿಲ್ಲ ರಿಷಬ್. ಎಸ್‌ಕೆ ಉಮೇಶ್ ಎಂದರೆ, ರಿಟೈಯರ್ಡ್‌ ಇನ್ಸ್‌ಪೆಕ್ಟರ್ ಹಾಗೂ 'ಯುವ' ಚಿತ್ರದ ನಾಯಕಿ ಸಪ್ತಮಿ ಗೌಡ ಅವರ ತಂದೆ. ಅವರು ಲಾಫಿಂಗ್ ಬುದ್ಧ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ರೋಲ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಆ ಪ್ರೆಸ್‌ಮೀಟ್‌ನಲ್ಲಿ ಅವರೂ ಇದ್ದರು. ಅವರೂ ಕೂಡ ನಗುನಗುತ್ತಲೇ ಮಾತನಾಡಿದ್ದಾರೆ, ಕೇಳಿಸಿಕೊಂಡಿದ್ದಾರೆ. 

ಯಾರಿಗೂ ಹೇಳ್ಬೇಡಿ..! ವಸಿಷ್ಠ ಸಿಂಹ ಕೈ ಹಿಡಿದುಕೊಂಡೇ ಓಡಾಡುವ ಹರಿಪ್ರಿಯಾ ಗುಟ್ಟು ರಟ್ಟಾಯ್ತು..!

ರಿಷಬ್ ಶೆಟ್ಟಿಯವರು ಎಸ್‌ಕೆ ಉಮೇಶ್ ಅವರನ್ನು ಕುರಿತು 'ನಮ್ಮ ಇಡೀ ಟೀಮ್‌ನಲ್ಲಿ ಪ್ರೊಡ್ಯೂಸರ್ ಹಣ ಉಳಿಸಿದ್ದು ಅಂದ್ರೆ ಉಮೇಶ್ ಸರ್ ಅವರೊಬ್ಬರೇ' ಅಂದಿದ್ದಾರೆ. ಬಳಿಕ, ಆ ಬಗ್ಗೆ ಕ್ಲಾರಿಟಿ ಕೊಟ್ಟ ರಿಷಬ್ 'ಅವರು ತಮ್ಮದೇ ಕಾಸ್ಟ್ಯೂಮ್ ತಂದಿದ್ದರು. ಹೀಗಾಗಿ ನಮಗೆ ಅವರ ಕಾಸ್ಟ್ಯೂಮ್‌ಗೆ ಒಂದು ರೂಪಾಯಿ ಕೂಡ ಇನ್ವೆಸ್ಟ್ ಮಾಡುವ ಅಗತ್ಯ ಬರಲೇ ಇಲ್ಲ' ಎಂದಿದ್ದಾರೆ. ಶೆಟ್ಟರ ಮಾತಿಗೆ ಉಮೇಶ್ ಅವರೂ ಸೇರಿದಂತೆ ಎಲ್ಲರೂ ನಕ್ಕಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ಮಾಪಕರು.

click me!